Advertisement
ಬಿಡದಿಯಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸದಸ್ಯರ ಬೆಂಬಲದಲ್ಲಿ ಜೆಡಿಎಸ್ ಅಧಿಕಾರಮುಂದುವರಿಸಿದೆ. ಕನಕಪುರ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸಿದ್ದು, ಅಧಿಕಾರ ಹಿಡಿದಿದೆ.
Related Articles
Advertisement
ಜೆಡಿಎಸ್-ಬಿಜೆಪಿ ಮೈತ್ರಿಯ ಸೂಕ್ಷ್ಮವರಿತ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ನಾಮ ಪತ್ರ ವಾಪಸ್ಸು ಪಡೆದುಕೊಂಡಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಭಾಗ್ಯಮ್ಮ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ರಹಮತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧಿಕಾರಕ್ಕೇರಲು ಅಗತ್ಯ ಸಂಖ್ಯೆ ಇದ್ದರೂ ಜೆಡಿಎಸ್ ಸದಸ್ಯರು ಒಗ್ಗಟ್ಟು ಪ್ರದರ್ಶಿಸಲು ವಿಫಲರಾಗುತ್ತಿದ್ದರು. ಈ ಮುಖಭಂಗ ತಪ್ಪಿಸಿಕೊಳ್ಳಲು ಜೆಡಿಎಸ್ ಅನಿವಾರ್ಯವಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದು ರಾಜಕೀಯ ವಲಯದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದೆ.
ಬಿಡದಿ ಪುರಸಭೆ:ಜೆ ಡಿಎಸ್‌ಗೆ ಅಧಿಕಾರ: ಬಿಡದಿ ಪುರಸಭೆ ಕಾಂಗ್ರೆಸ್ ಸದಸ್ಯರ ಬೆಂಬಲದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಿಡದಿ ಪುರಸಭೆ 23 ಸದಸ್ಯರ ಬಲವಿದೆ. ಜೆಡಿ ಎಸ್ 12 ಮತ್ತು ಕಾಂಗ್ರೆಸ್ 11 ಸದಸ್ಯರಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿದ್ದ ಎಚ್.
ಸಿ.ಬಾಲಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ, ಕಾಂಗ್ರೆಸ್‌ನಲ್ಲಿದ್ದ ಎ. ಮಂಜುನಾಥ್ ಜೆಡಿಎಸ್ ಪಕ್ಷಕ್ಕೆ ಜಿಗಿದಿದ್ದರಿಂದ ಬಿಡದಿ ಪುರಸಭೆಯಲ್ಲಿದ್ದ ಈ ಇಬ್ಬರು ನಾಯಕರ ಬೆಂಬಲಿಗರೂ ಸಹ ತಮ್ಮ ಪಕ್ಷ ನಿಷ್ಠೆ ಬದಲಿಸಿದ್ದಾರೆ. ಜೆಡಿಎಸ್‌ನಲ್ಲಿರುವ 12 ಸದಸ್ಯರ ಪೈಕಿ 3 ಮಂದಿ ಕಾಂಗ್ರೆಸ್‌ನೊಂದಿಗೆ ಮತ್ತು 11 ಕಾಂಗ್ರೆಸ್ ಸದಸ್ಯರ ಪೈಕಿ6 ಮಂದಿ ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ.
ಹೀಗಾಗಿ ನವೆಂಬರ್ 5ರಂದು ನಡೆದ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಚಿಹ್ನೆಯಲ್ಲಿ ಗೆದ್ದ ಸದಸ್ಯರ ಬೆಂಬಲದಲ್ಲಿ ಅಧಿಕಾರ ಹಿಡಿದಿದೆ. ಅಧ್ಯಕರಾÒ ಗಿ ಜೆಡಿಎಸ್‌ನ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಸಿ.ಲೋಕೇಶ್ ಆಯ್ಕೆಯಾಗಿದ್ದಾರೆ.
ಕನಕಪುರ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಕನಕಪುರ ನಗರಸಭೆಯಲ್ಲಿ ಯಾವ ರಾಜಕೀಯಗೊಂದಲಗಳಿಗೂ ಅವಕಾಶವಾಗಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ಇರುವುದರಿಂದ ಇಲ್ಲಿ ಯಾವ ರಾಜಕೀಯ ಮೇಲಾಟಗಳು ಸಾಧ್ಯವಾಗಿಲ್ಲ. ಒಟ್ಟು 31 ವಾರ್ಡುಗಳಿರುವ ಕನಕಪುರ ನಗರಸಭೆಯಲ್ಲಿ ಕಾಂಗ್ರೆಸ್‌ನ 26 ಸದಸ್ಯರು, ಜೆಡಿಎಸ್‌ನ 4 ಮತ್ತು ಬಿಜೆಪಿಯ1 ಸದಸ್ಯರಿದ್ದಾರೆ.