ಕಾಳಗಿ: ನೂತನ ತಾಲೂಕು ಕೇಂದ್ರವಾಗಿರುವ ಕಾಳಗಿ ಪಟ್ಟಣವು ಗ್ರಾಪಂನಿಂದ ಮೇಲ್ದರ್ಜೆಗೇರಿ ನೂತನ ಪಪಂ ಕಚೇರಿ ಪ್ರಾರಂಭವಾಗಿದೆ. ಪಟ್ಟಣ ಪಂಚಾಯತ ಸದಸ್ಯರ ಚುನಾವಣೆಗೂ ಮೊದಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆಯ ಕಾವು ಜೋರಾಗುತ್ತಿದ್ದು ಬಿಜೆಪಿ, ಕಾಂಗ್ರೆಸ್ ಮುಖಂಡರ ಕಣ್ಣು ನೇರವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೇಲೆ ನಾಟುವಂತಾಗಿದೆ.
ನೂತನ ಕಾಳಗಿ ಪಪಂ ಅಧ್ಯಕ್ಷ ಸ್ಥಾನಕ್ಕೆ ಸಾಮನ್ಯ ಮಹಿಳಾ ಮೀಸಲು, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮೀಸಲಾತಿ ಪ್ರಕಟವಾಗಿದೆ. ಕಾಳಗಿ ಗ್ರಾಪಂಯೂ ಜು.29, 2019 ರಂದು ಪಪಂ ಆಗಿ ಮೇಲ್ದರ್ಜೆಗೇರಿತು. ಜೂ. 5, 2015ರಲ್ಲಿ ಗ್ರಾಪಂಗೆ ಚುನಾಯಿತರಾಗಿದ್ದ 26 ಸದಸ್ಯರು, ಸಾಮಾನ್ಯ ಮಹಿಳಾ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷರ ಅಧಿಕಾರಾವಧಿ ಜ.28, 2020ಕ್ಕೆ ಮುಕ್ತಾಯವಾಗಿದೆ. ನೂತನ ಪಪಂನ ಸದಸ್ಯರ ಚುನಾವಣೆಗೂ ಮೊದಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿರುವುದು ಜನಪ್ರತಿನಿಧಿ ಗಳಿಗೆ ಈಗಿನಿಂದಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೇಲೆ ತೆರೆ ಮರೆಯಲ್ಲಿ ಲೆಕ್ಕಾಚಾರ ಜೋರಾಗಿಯೇ ನಡೆದಿದ್ದು, ಚುನಾವಣೆ ಕಾವು ಏರತೊಡಗಿದೆ.
ಈ ಮೊದಲು ಕಾಳಗಿ ಗ್ರಾಪಂ ವ್ಯಾಪ್ತಿಯು ಕಾಳಗಿ ಪಟ್ಟಣ ಸೇರಿ ದೇವಿಕಲ್ ತಾಂಡಾ, ಕರಿಕಲ್ ತಾಂಡಾ, ಕಿಂಡಿ ತಾಂಡಾ, ನಾಮುನಾಯಕ ತಾಂಡಾ, ಸುಬ್ಬುನಾಯಕ ತಾಂಡಾ, ಲಕ್ಷ ¾ಣ ನಾಯಕ ತಾಂಡಾ ಹಾಗೂ ಡೋಣ್ಣೂರ ಗ್ರಾಮವು ಸೇರಿದಂತೆ 8 ವಾರ್ಡ್ ಹಾಗೂ 26 ಜನ ಸದಸ್ಯರು ಹೊಂದಿದ್ದರು. ನೂತನ ಪಪಂ ವ್ಯಾಪ್ತಿಯೂ ಕಾಳಗಿ ಪಟ್ಟಣ ಸೇರಿದಂತೆ ಆರು ತಾಂಡಾಗಳು ಒಳಗೊಂಡಿದ್ದು ಹನ್ನೊಂದು ವಾರ್ಡ್‌ಗಳಾಗಿವೆ ಇನ್ನೂ ಅಂತಿಮ ಪ್ರಕಟಣೆಯಾಗಿಲ್ಲ. ಈ ಹನ್ನೊಂದು ವಾರ್ಡ್‌ಗಳಿಗೆ ಇನ್ನೂ ಯಾವುದೇ ಮೀಸಲಾತಿ ಹಾಗೂ ಚುನಾವಣೆ ದಿನಾಂಕ ಪ್ರಕಟಣೆಗೊಂಡಿಲ್ಲ. ಪಪಂ ಸದಸ್ಯರ ಚುನಾವಣೆಗೂ ಮೊದಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿರುವುದು. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮನ್ಯ ಮಹಿಳಾ ಮೀಸಲು ಹಾಗೂ ಹಿಂದುಳಿದ ವರ್ಗದವರಲ್ಲಿ ಚುನಾವಣೆಯ ಕಾವು ಜೋರಾಗಿಯೇ ಕಂಡು ಬರುತ್ತಿದೆ.
ಪಪಂನ ಹನ್ನೊಂದು ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಇನ್ನೂ ಸರ್ಕಾರದಿಂದ ಅಂತಿಮ ಪ್ರಕಟಣೆಗೊಂಡಿಲ್ಲ. ಸರ್ಕಾರದಿಂದ ವಾರ್ಡ್‌ಗಳ ಅಂತಿಮ ಆದೇಶ ಬಂದ ಮೇಲೆ ವಾರ್ಡ್‌ವಾರು ಮೀಸಲಾತಿ ಮತ್ತು ಚುನಾವಣೆ ದಿನಾಂಕ ಪ್ರಕಟಣೆಗೊಳ್ಳಲಿದೆ.
–ವೆಂಕಟೇಶ ತೆಲಾಂಗ್, ಮುಖ್ಯಾಧಿಕಾರಿ, ಪಪಂ.
-ಭೀಮರಾಯ ಕುಡ್ಡಳ್ಳಿ