ದೇಶದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಣದುಬ್ಬರ ಒಂದೇ ಸಮನೆ ಹೆಚ್ಚುತ್ತಲೇ ಸಾಗಿರುವುದರಿಂದ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇದೇ ವೇಳೆ ಪ್ರಸಕ್ತ ವರ್ಷ ಅಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿ ಣಾಮ ಬೆಳೆ ಹಾನಿ ಸಂಭವಿಸಿ, ಕೃಷಿ ವಲಯ ನಷ್ಟ ಅನುಭವಿಸಿದೆ. ಉತ್ಪಾ ದನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ದ್ದಾರೆ. ಹೀಗಾಗಿ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರು ಕೃಷಿ ಚಟುವಟಿಕೆಗಳ ಬಗೆಗೆ ನಿರಾಸಕ್ತಿ ತಾಳುವಂತಾಗಿದೆ. ಸಹಜವಾಗಿಯೇ ದೇಶದ ಆರ್ಥಿ ಕತೆಯ ಪ್ರಮುಖ ಆಧಾರಸ್ತಂಭವಾಗಿರುವ ಕೃಷಿ ವಲಯ ಹಿನ್ನಡೆ ಕಾಣು ವಂತಾಗಿದ್ದು, ಇದರ ಪರಿಣಾಮ ದೇಶದ ಆರ್ಥಿಕ ಪ್ರಗತಿಯ ಮೇಲಾ ಗುತ್ತದೆ. ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ವಾರದ ಹಿಂದೆಯಷ್ಟೇ ರೈತರಿಗೆ ನೀಡಲಾಗುತ್ತಿರುವ ಸಾಲದ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿತ್ತು. ಅದರಂತೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ರೈತರಿಗೆ ನೀಡ ಲಾಗುತ್ತಿರುವ ಅಡಮಾನ ರಹಿತ ಸಾಲದ ಮಿತಿಯನ್ನು 2 ಲಕ್ಷ ರೂ.ಗಳಿ ಗೇರಿಸುವ ಮಹತ್ತರ ನಿರ್ಧಾರವನ್ನು ಕೈಗೊಂಡಿದೆ. ಕೃಷಿ ವಲಯದ ಚೇತರಿಕೆ ಯ ನಿಟ್ಟಿನಲ್ಲಿ ಉತ್ತೇಜನದಾಯಕ ಕ್ರಮವಾಗಿ ಆರ್‌ಬಿಐ ಈ ಘೋಷಣೆಯನ್ನು ಮಾಡಿದ್ದು ಹೊಸವರ್ಷದ ಮೊದಲ ದಿನ ಇದು ಜಾರಿಗೆ ಬರಲಿದೆ.
ಆರ್‌ಬಿಐ ನ ಈ ಘೋಷಣೆಯಿಂದ ಸಣ್ಣ ಮತ್ತು ಅತೀ ಸಣ್ಣ ಕೃಷಿಕರಿಗೆ ಅಗತ್ಯ ಹಣಕಾಸು ಸೌಲಭ್ಯ ಸುಲಭವಾಗಿ ಲಭ್ಯವಾಗಲಿದ್ದು ಅವರು ಮತ್ತಷ್ಟು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿದೆ. ಕೃಷಿ ವಲಯದಲ್ಲಿ ಹೂಡಿಕೆ ಹೆಚ್ಚುವುದರಿಂದ ಉತ್ಪಾದನೆಯೂ ಏರಿಕೆಯಾಗ ಲಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಆದಾಯ ವೃದ್ಧಿಯಾಗು ವುದರ ಜತೆಯಲ್ಲಿ ಅವರ ಜೀವನಮಟ್ಟವು ಸುಧಾರಣೆಯಾಗಲಿದೆ. ತನ್ಮೂಲಕ ತಳಮಟ್ಟದಿಂದ ಅಂದರೆ ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಬಲ ತುಂಬಿದಂತಾ ಗಲಿದೆ. ಇದರಿಂದ ಸಹಜವಾಗಿಯೇ ಕೃಷಿ ವಲಯ ಚೇತರಿಕೆ ಕಂಡು ದೇಶದ ಒಟ್ಟಾರೆ ಆರ್ಥಿಕತೆ ಸಹಜಸ್ಥಿತಿಗೆ ಮರಳಲಿದೆ ಎಂಬ ಲೆಕ್ಕಾಚಾರ ಆರ್‌ಬಿಐನದ್ದಾಗಿದೆ.
ಕೇಂದ್ರ ಸರಕಾರದ ಮಹತ್ತರ ಯೋಜನೆಯಾದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಫಲಾನುಭವಿಗಳಿಗೆ ಶೇ.4ರ ಬಡ್ಡಿದರದಲ್ಲಿ 3 ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ಆರ್‌ಬಿಐನ ಈ ಘೋಷಣೆಯ ಬಳಿಕ ಇದರಲ್ಲಿ 2 ಲ. ರೂ.ವರೆಗೆ ಅಡಮಾನ ರಹಿತ ಸಾಲ ಸೌಲಭ್ಯ ಲಭಿಸಲಿದೆ. ಇದರಿಂದ ರೈತರು ಸಕಾಲ ದಲ್ಲಿ ಕೃಷಿ ಚಟುವಟಿಕೆಗಳಿಗನುಗುಣವಾಗಿ, ಕೃಷಿ ಸಾಧನ, ಸಲಕರಣೆಗಳ ಖರೀದಿ, ಬೀಜ ಬಿತ್ತನೆ, ರಸಗೊಬ್ಬರ ಖರೀದಿಗೆ ಈ ಸಾಲವನ್ನು ಪಡೆದುಕೊಳ್ಳಲು ನೆರವಾಗಲಿದೆ.
ದೇಶದ ಸದ್ಯದ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮುಂದಿನ ದಿನಗಳಲ್ಲಿ ಇದು ಕೃಷಿ ವಲಯದ ಚೇತರಿಕೆಗೆ ಶಕ್ತಿವರ್ಧಕವಾಗಲಿರುವುದು ನಿಶ್ಚಿತ. ಆದರೆ ಇದರ ಅನುಷ್ಠಾನದಲ್ಲಿ ಬ್ಯಾಂಕ್‌ಗಳು ತಮ್ಮ ಬದ್ಧತೆ ಮತ್ತು ಇಚ್ಛಾ ಶಕ್ತಿ ಯನ್ನು ಪ್ರದರ್ಶಿಸಬೇಕು. ರೈತರಿಗೆ ಸಾಲ ನೀಡುವಾಗಲೆಲ್ಲ ಯಾವುದಾದ ರೊಂದು ಕುಂಟು ನೆಪವನ್ನು ಮುಂದೊಡ್ಡಿ ಸತಾಯಿಸುವ ಪ್ರವೃತ್ತಿಯನ್ನು ಮೈಗೂ ಡಿಸಿ ಕೊಂಡಿರುವ ಬ್ಯಾಂಕ್‌ಗಳು ತಮ್ಮ ಈ ಹಳೆ ಚಾಳಿಯನ್ನು ಇನ್ನಾ ದರೂ ಬಿಡಬೇಕು. ಸಾಲನೀಡಿಕೆ ಕುರಿತಾಗಿನ ಸರಕಾರದ ನೀತಿ, ನಿರೂಪಣೆಗಳು ಹಾಗೂ ಈ ಬಗೆಗಿನ ಆರ್‌ಬಿಐ ಮಾರ್ಗಸೂಚಿ ಮತ್ತು ಸಲಹೆಗಳನ್ನು ಬ್ಯಾಂಕ್‌ಗಳು ಆದ್ಯತೆಯ ಮೇಲೆ ಪರಿಗಣಿಸಿ, ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ತ್ವರಿತಗತಿಯಲ್ಲಿ ಸಾಲ ಸೌಲಭ್ಯ ನೀಡಿದಲ್ಲಿ ನಿರೀಕ್ಷಿತ ಉದ್ದೇಶ ಮತ್ತು ಗುರಿ ತಲುಪಲು ಸಾಧ್ಯ.