Advertisement
ಬೆಂಗಳೂರಿನಲ್ಲಿ ದಕ್ಷಿಣ ವಲಯಗಳ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಪಿಎಂ ಮುದ್ರ, ಪಿಎಂ ವಿಶ್ವಕರ್ಮದಂತಹ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳಡಿ ಸಾಲ ಮಂಜೂರಾತಿಯನ್ನು ಹೆಚ್ಚಳ ಮಾಡುವಂತೆ ನಿರ್ದೇಶನ ನೀಡಿದರು. ಕೃಷಿ ಚಟುವಟಿಕೆಯ ಜತೆಗೆ ಅದಕ್ಕೆ ಹೊಂದಿಕೊಂಡಿರುವ ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೂ ಉತ್ತೇಜನ ನೀಡಬೇಕು. ಅದರಲ್ಲೂ ಕೇರಳದಲ್ಲಿ ಮೀನುಗಾರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಸಾಲ ಮಂಜೂರಾತಿ ಹೆಚ್ಚಿಸಬೇಕು ಎಂದರು.
ಸುಸ್ಥಿರ ಸಾಲ ಅಭಿವೃದ್ಧಿಗಾಗಿ ಚಾಲ್ತಿ ಖಾತೆ ಉಳಿತಾಯ ಖಾತೆ (ಸಿಎಎಸ್‌ಎ) ಠೇವಣಿಯ ಪ್ರಮಾಣ ಹೆಚ್ಚಳ ಮಾಡುವುದರ ಪ್ರಾಮುಖ್ಯ ವಿವರಿಸಿದ ಸಚಿವೆ ನಿರ್ಮಲಾ, ಪಿಎಂ ಜನ್‌ಧನ್, ಅಟಲ್ ಪಿಂಚಣಿ ಯೋಜನೆಗಳಡಿ ನೀಡಿರುವ ಗುರಿಯನ್ನು ಸಾಧಿಸಬೇಕು. ನಿಷ್ಕ್ರಿಯವಾಗುತ್ತಿರುವ ಪಿಎಂ ಜನ್‌ಧನ್ ಖಾತೆಗಳು ಸಕ್ರಿಯವಾಗಲು ವಿಶೇಷ ಅಭಿಯಾನ ನಡೆಸಬೇಕು ಎಂದು ಸೂಚಿಸಿದರು.