Advertisement
ಬುಧವಾರ ಪೊಲೀಸ್ ಠಾಣೆಗೆ ಹಾಜರಾದ ರೇಖಾ, ಅನಂತರಾಜು ಪತ್ನಿ ಸುಮಾ ವಿರುದ್ಧ ದೂರು ನೀಡಿದ್ದರು. ಈ ಹಿಂದೆಯೂ ಸುಮಾ ವಿರುದ್ಧ ಹೇಳಿಕೆ ನೀಡಿದ್ದೆ, ಆದರೆ, ಯಾಕೆ ವಿರುದ್ಧ ಯಾವುದೇ ಕಠಿಣ ಕ್ರಮಕೈಗೊಂಡಿಲ್ಲ. ನೆಪಮಾತ್ರಕ್ಕೆ ವಿಚಾರಣೆ ನಡೆಸಿ ಕಳುಹಿಸಲಾಗಿದೆ. ಹೀಗಾಗಿ ನನಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿ ಠಾಣೆ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿದ್ದ ಬಿಎಂಟಿಸಿ ಬಸ್‌ಗೆ ಅಡ್ಡವಾಗಿ ನಿಂತು ಆತ್ಮಹತ್ಯೆಗೆ ಯತ್ನಿಸುವಂತೆ ಹೈಡ್ರಾಮಾ ಮಾಡಿದರು.
Related Articles
Advertisement
6 ವರ್ಷದಿಂದ ಲಿವಿಂಗ್ ರಿಲೇಷನ್
ಠಾಣೆ ಮುಂಭಾಗವೇ ಸುದ್ದಿಗಾರರ ಜತೆ ಮಾತನಾಡಿದ ರೇಖಾ, ಫೇಸ್‌ಬುಕ್‌ನಲ್ಲಿ ಅನಂತರಾಜು ಪರಿಚಯವಾಗಿದ್ದು, ಅವರ ಜತೆ ಆರು ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಇದ್ದೆ. ನಾನು ಹನಿಟ್ರ್ಯಾಪ್ ಮಾಡಿಲ್ಲ. ಹಣಕ್ಕೂ ಬೇಡಿಕೆ ಇಟ್ಟಿಲ್ಲ. ಆದರೆ, ಅನಂತರಾಜು ಪತ್ನಿ ಸುಮಾ ಜೀವ ಬೆದರಿಕೆ ಹಾಕುತ್ತಿದ್ದು, ಅದರಿಂದ ದೂರು ನೀಡಿದ್ದೇನೆ. ನನಗೆ ಮತ್ತು ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ. ಅನಂತರಾಜು ಸಾವು ತುಂಬ ನೋವು ತಂದಿದೆ. ಸುಮಾಳ ಕಿರುಕುಳದಿಂದಲೇ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಒಂದು ಬಾರಿ ಅನಂತರಾಜು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ ಎಂದು ಹೇಳಿದರು.