ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಹಸುವಿನ ಹೊಟ್ಟೆಯಿಂದ ಕರುವನ್ನು ಹೊರ ತೆಗೆಯುವ ಮೂಲಕ ಜಾನುವಾರು ಅಧಿಕಾರಿ
ಅಜೀಜ್ ಅಹಮ್ಮದ್ ಹಸುವಿನ ಜೀವ ಉಳಿಸಿದ್ದಾರೆ.
Advertisement
ಮಾಸ್ತಿಕಟ್ಟೆಯ ಬಿ.ಎಂ. ರಮೇಶ್ ಅವರ ಹಸುವೊಂದು ಹೊಟ್ಟೆಯಲ್ಲಿ ಕರು ತಿರುಗಿ ಕೊಂಡಿದ್ದ ಪರಿಣಾಮ ಕರು ಹಾಕಲಾರದೇ ಪರದಾಡಿದ್ದು ಕೂಡಲೇ ರಮೇಶ್ ಅವರು ಪಶುವೈದ್ಯ ಆಸ್ಪತ್ರೆಯ ಜಾನುವಾರು ಅಧಿಕಾರಿ ಅಜೀಜ್ ಅಹಮ್ಮದ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಜೀಜ್ ಅಹಮದ್ ಅವರು ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಬಸವರಾಜ ಕೋಟಿ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದ್ದು ಸ್ಥಳೀಯರ ಸಹಕಾರದಿಂದ ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಹೊರ ತೆಗೆದು ಹಸುವಿನ ಪ್ರಾಣ ಉಳಿಸಿದ್ದಾರೆ.
ಕರು ತಿರುಗಿ ಕೊಂಡಿರುವುದರಿಂದ ಸ್ವಾಭಾವಿಕವಾಗಿ ಹಸುವಿಗೆ ಕರು ಹಾಕಲು ಸಾಧ್ಯವಾಗಿಲ್ಲ. ಕರುವನ್ನು ಹೊರ ತೆಗೆಯದೇ ಇದ್ದರೆ ಹೊಟ್ಟೆ
ಬಿಗಿಯಾಗಿ ಹಸು ಸಾವನ್ನಪ್ಪುವ ಸಾಧ್ಯತೆ ಇತ್ತು ಎಂದು ಜಾನುವಾರು ಅಧಿಕಾರಿ ಅಜೀಜ್ ಅಹಮ್ಮದ್ ತಿಳಿಸಿದ್ದಾರೆ.