ಕುಂಬಳೆ: ಜಾನುವಾರು ಸಾಕುವುದು ಸಂಸ್ಕಾರದ ಭಾಗ ಮತ್ತು ಐಶ್ವರ್ಯದ ಸಂಕೇತ ಎಂದು ಕೇರಳ ರಾಜ್ಯ ಅರಣ್ಯ, ವನ್ಯಮೃಗ ಸಂರಕ್ಷಣೆ ಮತ್ತು ಕ್ಷೀರಾಭಿವೃದ್ಧಿ ಸಚಿವ ನ್ಯಾಯವಾದಿ ಕೆ. ರಾಜು ಹೇಳಿದರು.
3.30 ಕೋ. ರೂ. ವೆಚ್ಚದಲ್ಲಿ ಕುಂಬಳೆ ಬಳಿ ನಾಯ್ಕಪು ಅಲ್ಲಿ ರೀಜನಲ್ ಡೈರಿ ಲ್ಯಾಬೋರೇಟರಿ ಮತ್ತು ದ್ವಿದಿನ ಕ್ಷೀರ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡು ಜಿಲ್ಲೆ ಭೂಮಿ ಕೃಷಿ ಮತ್ತು ಹೈನುಗಾರಿಕೆಗೆ ಪ್ರಶಸ್ತ ಸ್ಥಳ. ತರಕಾರಿ ಮತ್ತು ಹಾಲಿಗೆ ಇತರ ರಾಜ್ಯಗಳನ್ನು ಅವಲಂಬಿಸುತ್ತಿರುವ ನಾವು ನಮ್ಮ ಭೂಮಿಯಲ್ಲೇ ಇದನ್ನು ಬೆಳೆೆಸಬೇಕಾಗಿದೆ. ಕೃಷಿಕರಿಗೆ ಮತ್ತು ಹೈನುಗಾರರಿಗೆ ಸರಕಾರ ಸರ್ವರೀತಿಯ ನೆರವು ನೀಡಲು ಸಿದ್ಧವಿರುವುದಾಗಿ ಸಚಿವರು ಭರವಸೆ ನೀಡಿದರು.
ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಾಸರಗೊಡು ಜಿಲ್ಲಾಧಿಕಾರಿ ಜೀವನ್‌ಬಾಬು, ತ್ರಿಸ್ಥರ ಸ್ಥಳೀಯಾಡಳಿತ ಚುನಾಯಿತ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕ್ಷೀರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಎಚ್. ಶಿವರಾಮ ಭಟ್ ಧ್ವಜಾರೋಹಣಗೈದರು. ಮುಹಮ್ಮದ್ ಕುಂಞಿ ಸ್ವಾಗತಿಸಿದರು. ಜಾರ್ಜ್‌ಕುಟ್ಟಿ ವರದಿ ಮಂಡಿಸಿದರು. ಅಂಜು ಕುರ್ಯನ್ ವಂದಿಸಿದರು. ಕ್ಷೀರಸಂಗಮದಲ್ಲಿ ಇಲಾಖೆ ಅಧಿಕಾರಿಗಳು ಹೈನುಕೃಷಿಕರಿಗೆ ತರಗತಿ ನಡೆಸಿದರು.