Advertisement
ಆಳ್ವಾಸ್ ನುಡಿಸಿರಿಯಲ್ಲಿ ಸಾಹಿತ್ಯ ವಿಚಾರಗಳಿಗೆ ಹೊರತಾಗಿ ಕೃಷಿ, ಮೂಕ ಪ್ರಾಣಿಗಳ ಪ್ರದರ್ಶನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಅದರಂತೆ, ದೇಸಿ ತಳಿಗಳಾದ ಮಲಾ°ಡ್ ಗಿಡ್ಡ, ಗಿರ್, ಕಾಂಕ್ರೀಜ್, ಧಾರ್ ಪಾರ್ಕರ್, ಹಳ್ಳಿಕಾರ್, ಪುಂಗನೂರ್ ಸಹಿತ ಸುಮಾರು 20 ತಳಿಗಳ ಜಾನುವಾರುಗಳು ಪ್ರದರ್ಶನದಲ್ಲಿವೆ. ಉಳಿದಂತೆ ನೆದರ್ಲಾಂಡ್ ಮೂಲದ ಎಚ್‌ಎಫ್ ತಳಿಯ ನಾಲ್ಕು ಹಸು, ಮೂರು ಗಡಸು ಮತ್ತು ಒಂದು ಕರು, ಜೆರ್ಸಿ ತಳಿಯ ಆರು ಹಸು, ಒಂದು ಗಡಸು ಹಾಗೂ ಒಂದು ಕರು ಪ್ರದರ್ಶನದಲ್ಲಿವೆ.
ಪ್ರದರ್ಶನದಲ್ಲಿರುವ ಜಾನುವಾರುಗಳ ಪೈಕಿ ಉತ್ತಮ ತಳಿಯ ಜಾನುವಾರಿಗೆ ಪ್ರಥಮ, ದ್ವಿತೀಯ ಪ್ರಶಸ್ತಿಯನ್ನು ಕ್ರಮವಾಗಿ 5,000 ಹಾಗೂ 3,000 ರೂ. ನೀಡಿ ಗೌರವಿಸಲಾಯಿತು. ಕೃಷಿಕ ಭಾಸ್ಕರ ಶೆಟ್ಟಿ ಕರಿಂಜೆ ಅವರ ಎಚ್‌ಎಫ್ ಹಸು ಸಮಗ್ರ ಪ್ರಶಸ್ತಿಯನ್ನು 10,000 ರೂಪಾಯಿ ಮೊತ್ತದೊಂದಿಗೆ ಪಡೆದುಕೊಂಡಿತು. ಈ ನಡುವೆ, ಇಸ್ಕಾನ್‌ನಿಂದ ದೇಶ ಪರ್ಯಟನೆ ನಡೆಸುತ್ತಿರುವ ಸುಮಾರು 900 ಕೆಜಿ ತೂಕದ ಅಪೂರ್ವ ಎತ್ತು ಕೂಡ ನೋಡುಗರ ಗಮನ ಸೆಳೆಯಿತು. ಗಾಣದ ಎತ್ತಿನ ಮೂಲಕ ಕಬ್ಬಿನಹಾಲು, ಬೆಲ್ಲ!
ಎತ್ತುಗಳನ್ನು ಗಾಣಕ್ಕೆ ಸುತ್ತು ಬರಿಸಿ, ಅದರ ಮೂಲಕ ಕಬ್ಬಿನ ಹಾಲು ಒದಗಿಸುವ ತೀರ್ಥಹಳ್ಳಿಯ ಮಂಜಪ್ಪ ವರ್ತೆಕೇರಿ ಅವರ ತಂಡ ಕೃಷಿ ಸಿರಿಯಲ್ಲಿ ಪಾಲ್ಗೊಂಡಿದೆ. ಬೆಲ್ಲವನ್ನೂ ಸ್ಥಳದಲ್ಲೇ ತಯಾರಿಸಿ ತೋರಿಸಲಾಗುತ್ತದೆ. 80 ಲೀ. ಕಬ್ಬಿನ ಹಾಲು ಬಳಸಿ ಸುಮಾರು 35 ಕೆ.ಜಿ. ಬೆಲ್ಲ ಮಾಡಬಹುದು. ಒಂದು ಕೆ.ಜಿ. ಬೆಲ್ಲಕ್ಕೆ 100 ರೂ. ದರ. ನಾಲ್ಕು ವರ್ಷಗಳಿಂದ ಈ ತಂಡ ನುಡಿಸಿರಿಯಲ್ಲಿ ಭಾಗವಹಿಸುತ್ತಿದೆ.
Related Articles
ಕರಾವಳಿ ಬಗೆ-ಬಗೆಯ ಮೀನು ಸಿಗುವ ಪ್ರದೇಶ. ಇಲ್ಲಿನ ಜನರೂ ನೋಡಿರದ ಅಪರೂಪದ ಸಮುದ್ರ ಚಿಪ್ಪುಗಳನ್ನು ಇಲ್ಲಿ ಕಾಣಬಹುದು. ಕೇರಳದ ಅಲೆಪಿಯ ಫಿರೋಜ್ ಅಹಮ್ಮದ್ ಅವರ ನೇತೃತ್ವದಲ್ಲಿ ಸಮುದ್ರದ ಅಪರೂಪದ ಚಿಪ್ಪುಗಳ ಪ್ರದರ್ಶನ ಈ ಬಾರಿಯ ವಿಶೇಷ ಆಕರ್ಷಣೆ. ದೇಶದ 170 ಕಡೆಗಳಲ್ಲಿ ಈ ಪ್ರದರ್ಶನ ನಡೆದಿದ್ದು, ಮಂಗಳೂರಿನಲ್ಲಿ ಇದು ಅವರ 2ನೇ ಪ್ರದರ್ಶನವಾಗಿದೆ. ಇಂಡೋ ಪೆಸಿಫಿಕ್ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಚಿಪ್ಪುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. 500ಕ್ಕೂ ಅಧಿಕ ತಳಿಯ ಚಿಪ್ಪುಗಳು ಇಲ್ಲಿವೆ. ಇರುವೆಯಷ್ಟು ಗಾತ್ರದ ಚಿಪ್ಪಿನಿಂದ ಹಿಡಿದು ‘ಆಸ್ಟ್ರೇಲಿಯನ್ ಟ್ರಯಪ್’ ಎಂಬ ಬೃಹತ್ ಗಾತ್ರದ ಚಿಪ್ಪು ಇಲ್ಲಿವೆ. ಮತ್ಸ್ಯ ಸಂಕುಲದ ವಿಶೇಷ ಪ್ರದರ್ಶನ ಈ ಬಾರಿಯ ಮತ್ತೂಂದು ಆಕರ್ಷಣೆ.
Advertisement