Advertisement

ಕಾಪಿ ಚಿರಾಯು: ಕಾಪಿ ಆಗದ ಭಾರತ ಮ್ಯಾಪು

05:53 PM Apr 04, 2017 | |

ನಾನಾಗ 10ನೇ ತರಗತಿಯಲ್ಲಿ ಓದುತ್ತಿದ್ದೆ. ನನಗೆ ಪರೀಕ್ಷೆ ಅಂದ್ರೆ ಸ್ವಲ್ಪಾನೂ ಭಯ ಇದ್ದಿರಲಿಲ್ಲ. ಅಂದು ಸಮಾಜಶಾಸ್ತ್ರ ಎಕ್ಸಾಮು. ಸಮಾಜಶಾಸ್ತ್ರದಲ್ಲಿ ಭಾರತದ ನಕ್ಷೆ ಗುರುತಿಸುವುದು ಸರ್ವೇಸಾಮಾನ್ಯವಾದ ಪ್ರಶ್ನೆ. ನನಗೆ ನಕ್ಷೆ ಗುರುತಿಸುವುದೆಂದರೆ ಯುದ್ಧ ಆಡಿದ ಹಾಗೆ. ನನ್ನ ಪಕ್ಕದಲ್ಲಿ ಸ್ನೇಹಿತ ಪ್ರಸಾದ ಕುಳಿತಿದ್ದ. ಅವನು ಬಹಳ ತರಲೆ, ತುಂಟತನ ಮಾಡುವ ಹುಡುಗ. ಅವನು ನಕ್ಷೆ ಬರೆಯಲು ಸುಲಭವಾಗಲಿ ಎಂದು ನೋಟ್‌ಬುಕ್‌ ಮೇಲೆ ಇರುವ ರಟ್‌ ಅನ್ನು ನಕ್ಷೆ ಆಕಾರದಲ್ಲಿ ಕತ್ತರಿಸಿ ಕಾಪಿ ಮಾಡಲು
ತಗೊಂಡು ಬಂದು ಬೆಂಚಿನ ಕೆಳಗೆ ಇಟ್ಟಿದ್ದ.

Advertisement

ಪರೀಕ್ಷೆ ಶುರುವಾಯಿತು. ಸ್ವಲ್ಪ ಸಮಯ ಕಳೆಯಿತು, ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಇನ್ನೇನು ನಕ್ಷೆ ರಚಿಸಲು ಪ್ರಯತ್ನಿಸುತ್ತಿದ್ದೆ. ಆಗ ಅವನು ಅದನ್ನು ನೋಡಿ ತಾನು ಮುಚ್ಚಿಟ್ಟಿದ್ದ ನಕ್ಷೆಯನ್ನು ನನಗೆ ಕೊಡಲು ಬಂದ. ನಾನು ಅದನ್ನು ತೆಗೆದುಕೊಳ್ಳದೆ “ಬೇಡ, ನಾನು ಹಾಗೆಯೇ ರಚಿಸುತ್ತೇನೆ’ ಎಂದೆ. ಅದಕ್ಕೆ ಅವನು “ಅಲ್ಲಾ, ಈಗ ಸಮಯವಿಲ್ಲ. ಪರೀಕ್ಷೆ ಮುಗಿಯಲು ಕೆಲವೇ ನಿಮಿಷಗಳಿವೆ
ಪರ್ವಾಗಿಲ್ಲ, ತಗೋ’ ಎಂದ. ಅದಕ್ಕೆ ನಾನು “ಇಲ್ಲ, ಕಾಪಿ ಮಾಡಿ ನಾನು ಮಾರ್ಕ್ಸ್ ಪಡೆಯುವುದಿಲ್ಲ. ನಮ್ಮ ಹಾಗೆ ಎಷ್ಟೋ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಕಾಪಿ ಮಾಡದೆ ಬರೆಯುತ್ತಿದ್ದಾರೆ. ಅವರಿಗೆ ಮೋಸ ಮಾಡಿದ ಹಾಗೆ ಆಗುತ್ತೆ. ಬೇಡ’ ಎಂದೆ. ಅದನ್ನು ಕೇಳಿದ ಅವನು “ನಿನಗೆ ಬೇಡಾ ಎಂದರೆ ನನಗೂ ಬೇಡ. ಇನ್ಮೆàಲಿಂದ ನಾನೂ ಕಾಪಿ ಮಾಡಲ್ಲ’ ಎಂದು ಹೇಳಿ ಅದನ್ನು ಹೊರಗೆ ಒಗೆದ!

ವಿನಂತಿ ಕುಲಕರ್ಣಿ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next