Advertisement

ಗಾಂಧೀಜಿ ಸ್ತಬ್ಧಚಿತ್ರ ವಾಹನಕ್ಕೆ ಸ್ವಾಗತ

12:44 PM Oct 27, 2018 | |

ವಿಜಯಪುರ: ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿರುವ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ನಗರಕ್ಕೆ ಆಗಮಿಸಿದ್ದು ಅದ್ಧೂರಿ ಸ್ವಾಗತ ನೀಡಲಾಯಿತು.

Advertisement

ಶುಕ್ರವಾರ ನಗರಕ್ಕೆ ಆಗಮಿಸಿದ ಗಾಂಧೀಜಿ ಸ್ತಬ್ಧ ಚಿತ್ರ ವಾಹನವನ್ನು ಅಥಣಿ ರಸ್ತೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಗಾಂಧೀಜಿ ಸ್ತಬ್ಧಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

ಮಹಾತ್ಮ ಗಾಂಧೀಜಿ ಅವರ ಆದರ್ಶ, ತ್ಯಾಗ, ಸ್ವಾತಂತ್ರ್ಯ ಹೋರಾಟ ಸೇರಿದಂತೆ ದೇಶಕ್ಕೆ ನೀಡಿರುವ ಕೊಡುಗೆ ಸ್ಮರಿಸಲಾಯಿತು. ಜನಸಾಮಾನ್ಯರಲ್ಲಿ ಗಾಂಧಿ ತತ್ವಗಳ ಅರಿವು ಮೂಡಿಸುವ ಉದ್ದೇಶದೊಂದಿಗೆ ವಾರ್ತಾ ಇಲಾಖೆ ರಾಜ್ಯಾದ್ಯಂತ ಈ ಅಭಿಯಾನ ಹಮ್ಮಿಕೊಂಡಿದೆ. ಶಾಂತಿ ಮಾರ್ಗ, ಸತ್ಯ ಮಾರ್ಗ ರಥಗಳ ಪ್ರತ್ಯೇಕ ಅಭಿಯಾನದ ರಥಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅ. 2ರಿಂದ ಆರಂಭಗೊಂಡು ಅ. 28ರವರೆಗೆ ವಿಜಯಪುರ ಜಿಲ್ಲೆಯಲ್ಲಿ ಸಂಚರಿಸಲಿದೆ.

ಇಂದು ನಡೆದ ಸ್ವಾಗತ ಕಾರ್ಯಕ್ರಮದ ಅಂಗವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ವಸತಿನಿಲಯಗಳ ಸಿಬ್ಬಂದಿಗಳು, ಶಿಕ್ಷಕರು, ಗಾಂವಾಗಳು, ವಿವಿಧ ಸಂಘಟನೆಗಳ ಪದಾಕಾರಿಗಳು, ಒಳಗೊಂಡ ಮೆರವಣಿಗೆ ಹಾಗೂ ಡೊಳ್ಳು ಕುಣಿತ ಕಲಾ ತಂಡದ ಅತ್ಯಾಕರ್ಷಕ ಪ್ರದರ್ಶನದೊಂದಿಗೆ ರಥಯಾತ್ರೆ ಶಿವಾಜಿ ವೃತ್ತ, ಮಹಾತ್ಮ ಗಾಂಧಿ ವೃತ್ತ (ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಕೆ) ಬಸವೇಶ್ವರ ವೃತ್ತ, ಡಾ| ಅಂಬೇಡ್ಕರ್‌ ವೃತ್ತ ಮಾರ್ಗವಾಗಿ ನಗರದ ಐತಿಹಾಸಿಕ ಗೋಲಗುಂಬಜ್‌ವರೆಗೆ ಸಂಚರಿಸಿತು.

ಜಿಪಂ ಉಪ ಕಾರ್ಯದರ್ಶಿ ದುರಗೇಶ ರುದ್ರಾಕ್ಷಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್‌, ರಾಷ್ಟ್ರೀಯ ಬಸವ ಸೈನ್ಯ ಅಧ್ಯಕ್ಷ ಸೋಮನಗೌಡ ಕಲ್ಲೂರ, ಯುವ ಸಂಸ್ಥೆ ಅಧ್ಯಕ್ಷ ದಾನೇಶ ಅವಟಿ, ಶಿವು ಭೂತನಾಳ, ರಥಯಾತ್ರೆ ಮೇಲುಸ್ತುವಾರಿ ಆನಂದ ಮಸ್ಕಿ ನೇತೃತ್ವದ 6 ಸಿಬ್ಬಂದಿಗಳ ತಂಡದ ಸದಸ್ಯರು ವಹಿಸಿದ್ದರು.

Advertisement

ಅ. 27ರಂದು ಮಧ್ಯಾಹ್ನ 2ಕ್ಕೆ ಬಸವನಬಾಗೇವಾಡಿಗೆ ತಲುಪಿ ಗಾಂಧೀಜಿ ಸಂದೇಶ ಸಾರಿತು. ಅ. 28ರಂದು ಬೆಳಗ್ಗೆ 10ಕ್ಕೆ ಸಿಂದಗಿಗೆ ತಲುಪಿ ರಥಯಾತ್ರೆ ನಡೆಯಲಿದ್ದು ನಂತರ ಸಂಜೆ 4ಕ್ಕೆ ಇಂಡಿ ನಗರಕ್ಕೆ ತಲುಪಲಿ¨

Advertisement

Udayavani is now on Telegram. Click here to join our channel and stay updated with the latest news.

Next