Advertisement

ಮೈಸೂರು ಮೂಲದ ಚಿಣ್ಣನಿಗೆ ಬ್ರಿಟನ್‌ ಗೌರವ

09:35 AM Jul 16, 2018 | Karthik A |

ಲಂಡನ್‌: ಬ್ರಿಟನ್‌ ನಲ್ಲಿ ನೆಲೆಸಿರುವ ಮೈಸೂರು ಮೂಲದ ಈಶ್ವರ ಶರ್ಮಾ (8) ಎಂಬ ಬಾಲಕ ‘ಬ್ರಿಟಿಷ್‌ ಇಂಡಿಯನ್‌ ಆಫ್ ದ ಇಯರ್‌’ ಗೌರವಕ್ಕೆ ಪಾತ್ರನಾಗಿದ್ದಾನೆ. ಸಣ್ಣವನಾಗಿದ್ದರೂ ಯೋಗದಲ್ಲಿ ಅಸಾಧಾರಣೆ ಪ್ರತಿಭೆ ತೋರಿಸಿರುವ ಹಿನ್ನೆಲೆಯಲ್ಲಿ ‘ಯುವ ಸಾಧಕ’ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. ಇತ್ತೀಚೆಗೆ ಬರ್ಮಿಂಗ್‌ ಹ್ಯಾಮ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈತನಿಗೆ ಗೌರವ ಪ್ರದಾನ ಮಾಡಲಾಗಿದೆ.

Advertisement

ಬ್ರಿಟನ್‌ ನ ಕೆಂಟ್‌ ನಲ್ಲಿರುವ ಸೈಂಟ್‌ ಮಿಷೆಲ್ಸ್‌ ಪ್ರಿಪರೇಟರಿ ಶಾಲೆಯಲ್ಲಿ ಕಲಿಯುತ್ತಿರುವ ಈಶ್ವರ ಶರ್ಮಾ, ‘ನಾನು ನನ್ನ ಜತೆ ಮಾತ್ರ ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಯಾವತ್ತೂ ಈ ಕ್ಷೇತ್ರದ ವಿದ್ಯಾರ್ಥಿಯಾಗಿರುತ್ತೇನೆ. ಈ ಸಾಧನೆಗೆ ಶಿಕ್ಷಕರೂ ನೆರವು ನೀಡಿದ್ದಾರೆ’ ಎಂದಿದ್ದಾನೆ. ಹಲವು ಪ್ರಶಸ್ತಿ ಗೆದ್ದಿರುವ ಬಾಲಕ ಜೂನ್‌ ನಲ್ಲಿ ಕೆನಡಾದ ವಿನ್ನಿಪೆಗ್‌ನಲ್ಲಿ ನಡೆದಿದ್ದ ‘ವಿಶ್ವ ವಿದ್ಯಾರ್ಥಿಗಳ ಕ್ರೀಡಾಕೂಟ 2018’ರಲ್ಲಿ ಬ್ರಿಟನ್‌ ಅನ್ನು ಪ್ರತಿನಿಧಿಸಿದ್ದ.

ಈಶ್ವರ ಶರ್ಮಾ ತಂದೆ ವಿಶ್ವನಾಥ್‌ ಕೂಡ ಯೋಗ ಶಿಕ್ಷಕರಾಗಿದ್ದಾರೆ. ಪುತ್ರನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಯೋಗದಿಂದಾಗಿ ಆತನ ಶೈಕ್ಷಣಿಕ ಸಾಧನೆಯ ಮೇಲೂ ಗಣನೀಯ ಪ್ರಗತಿ ಉಂಟಾಗಿದೆ ಎಂದಿದ್ದಾರೆ. ‘ಸಂಗೀತಕ್ಕೆ ಅನುಸಾರವಾಗಿ ನಾನು ಮತ್ತು ಪುತ್ರ ವೇದಿಕ್‌ ಯೋಗ, ಹಠ ಯೋಗ ಅಭ್ಯಾಸ ಮಾಡುತ್ತೇವೆ. ಮೈಸೂರಿಗೂ ಪ್ರತಿ ವರ್ಷ ತಪ್ಪದೆ ಭೇಟಿ ನೀಡುತ್ತೇವೆ. ಅಲ್ಲಿ ಯೋಗ ಮಾಡುವುದು ಆತನಿಗೆ ಸಂತಸ ತಂದುಕೊಡುತ್ತದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next