Advertisement

ಸಾಹಿತ್ಯ -ಸಾಂಸ್ಕೃತಿಕವಾಗಿ ಕಲಬುರಗಿ ಶ್ರೀಮಂತ

11:17 AM Nov 01, 2021 | Team Udayavani |

ಕಲಬುರಗಿ: ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಶ್ರೀಮಂತವಾಗಿರುವ ಕಲಬುರಗಿ ಈಗ ಮತ್ತೆ ಸಾಹಿತ್ಯ ಚಟುವಟಿಕೆಗಳ ಮೂಲಕವೇ ಗಮನ ಸೆಳೆಯುತ್ತಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ದಯಾನಂದ ಅಗಸರ ಹೇಳಿದರು.

Advertisement

ನಗರದ ಕಲಾ ಮಂಡಳದಲ್ಲಿ ರವಿವಾರ ಮಾತೋಶ್ರೀ ಈರಣ್ಣ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಐದನೇ ವರ್ಷದ ಅವ್ವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲಬುರಗಿಯಲ್ಲಿ ಇತ್ತೀಚೆಗೆ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿವೆ. ಇದರ ಜತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವವರನ್ನು ಗುರುತಿಸುವ ಕೆಲಸ ಸಂಘ-ಸಂಸ್ಥೆಗಳ ಮೂಲಕ ಆಗುತ್ತಿರುವುದು ಸಂತಸದ ಸಂಗತಿ ಎಂದರು.

ನಮ್ಮ ಭಾಗದ ಸಾಧಕರು ಬೆಂಗಳೂರು ಸೇರಿ ಇತರ ನಗರಗಳಲ್ಲಿ ಹೋಗಿ ಪ್ರಶಸ್ತಿಗಳನ್ನು ಸ್ವೀಕರಿಸುವ ಪರಿಸ್ಥಿತಿ ಇತ್ತು. ಆದರೆ, ಈಗ ಅಲ್ಲಿನ ಸಾಧಕರನ್ನು ನಾವೇ ಗುರುತಿಸಿ, ಬೆಂಗಳೂರಿಗರಿಗೂ ಪ್ರಶಸ್ತಿ ನೀಡುವಂತಾಗಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋಗುವುದನ್ನು ನಾನು ತಪ್ಪಿಸುವುದಿಲ್ಲ. ಏಕೆಂದರೆ ವಿಶ್ವವಿದ್ಯಾಲಯದಲ್ಲಿ ಈ ರೀತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡಿ ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು.

ಅತ್ತಿವೇರಿ ಬಸವಧಾನದ ಬಸವೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಅಖಲ ಭಾರತ ಶರಣ ಸಾಹಿತ್ಯ ಪರಿಷತ್‌ ಉಪಾಧ್ಯಕ್ಷ ಅಪ್ಪಾರಾವ್‌ ಅಕ್ಕೋಣೆ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಡಾ| ಶರಣಬಸಪ್ಪ ವಡ್ಡನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಸಿದ್ಧಲಿಂಗ ಬುಕ್‌ ಡಿಪೋ ಪ್ರಕಾಶಕ ಬಸವರಾಜ ಕೊನೆಕ್‌, ಪ್ರಾಧ್ಯಾಪಕ ಡಾ| ವಿಜಯಕುಮಾರ ಪರುತೆ, ಪ್ರಮುಖರಾದ ರವೀಂದ್ರ ಮಾಲಿಪಾಟೀಲ, ಅಣವೀರಪ್ಪ, ಡಾ| ಸೋಮನಾಥ ಬಿರಾದಾರ, ಅಂಬಾರಾಯ ಬಟ್ಟೆ, ಅರುಣಕುಮಾರ, ಡಾ| ಗಿರೀಶ ಯಡ್ರಾಮಿ, ಶ್ವೇತಾ ವಡ್ಡನಕೇರಿ, ಲಕ್ಷ್ಮೀ ಪ್ರತಾಪ ಅಂಬಾಡೆ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next