Advertisement
ಸಂದರ್ಶನ: ನ.ರವಿಕುಮಾರಆಧುನಿಕ ಬದುಕಿನಲ್ಲಿ ಸುಭಾಷಿತಗಳ ಮಹತ್ವ ಏನು?
ಪ್ರತಿಯೊಂದು ಸಂಸ್ಕೃತಿಯೂ ತನ್ನದೇ ನೀತಿ- ನಿಯಮಾವಳಿಗಳ ಮೇಲೆ ನಿಂತಿರುತ್ತದೆ. ಅದನ್ನೇ “ಧರ್ಮ’ ಎಂದು ವಿಶಾಲಾ ರ್ಥ ದಲ್ಲಿ ಕರೆಯಲಾಗುತ್ತದೆ. “ಧರ್ಮ”ಕ್ಕೆ ಸಾಹಿತ್ಯದ ಸಾಹಚರ್ಯವೂ ಇರುತ್ತದೆ. ಅದು ಚಿಕ್ಕದೊ ಅಥವಾ ದೊಡ್ಡ ದೊ ರೂಪದಲ್ಲಿರಬಹುದು. ಇಂಥ ಒಂದು ಸಾಹಿತ್ಯ ಪ್ರಕಾರ ಸುಭಾಷಿತ. ಒಂದು ರೀತಿಯಲ್ಲಿ ಇದು ಜಗತ್ತಿನ ಸಾರ್ವಕಾಲಿಕ ಸಂಸ್ಕೃತಿಯ ಬುನಾದಿ. ಮಾತ್ರವಲ್ಲ; ಸುಭಾಷಿತಗಳು ಸಾರ್ವ ಕಾಲಿಕವಾದ ಮೌಲ್ಯಗಳನ್ನು ಪ್ರತಿಪಾ ದಿಸುವ ಕಾರಣಕ್ಕೆ ಅವು ದೇಶ-ಕಾಲಗಳ ಗಡಿಗಳನ್ನು ಮೀರಿ ನಿಲ್ಲುತ್ತವೆ.
ಪ್ರಪಂಚದ ಇತರ ಭಾಷೆಯುಲ್ಲಿರುವ ನುಡಿಗಟ್ಟುಗಳು, ಹೇಳಿಕೆಗಳಿಗಿಂತ ಸಂಸ್ಕೃ ತದ ಸುಭಾಷಿತಗಳು ಭಿನ್ನವಾ ಗಿವೆ. ಆಕರ್ಷಕವಾಗಿವೆ. ಮಾತ್ರ ವಲ್ಲ; ಅವು ಬೆರಗಿನ ವಚನ ಗಳೂ ಹೌದು, ಬೆಡಗಿನ ಅಭಿ ವ್ಯಕ್ತಿಗಳೂ ಹೌದು. ಇತರ ಸುಭಾಷಿತಗಳಿಗಿಂತ ಸಂಸ್ಕೃ ತದ ಸುಭಾಷಿತಗಳು ಮೂರ್ತ, ವಾಸ್ತವಿಕ ನೆಲೆಯ ಅರ್ಥವಂತಿಕೆಯ ಕಾರಣಕ್ಕಾಗಿ ವೈಶಿಷ್ಟ್ಯ ಪೂರ್ಣವಾಗಿವೆ. ಪಾಶ್ಚಾತ್ಯ ಸಮಾಜಗಳಿಗೆ ಹೋಲಿಸಿದರೆ ಭಾರತೀಯ ಸಮಾಜವು ರೂಪುಗೊಂಡಿರುವುದೇ ಮೌ ಲ್ಯ ವ್ಯವಸ್ಥೆಯ ಮೇಲೆ. ಈ ಮೌಲ್ಯ ವ್ಯವಸ್ಥೆ ಯು ಪ್ರತಿಯೊಬ್ಬ ವ್ಯಕ್ತಿಯ ಬೌದ್ಧಿಕ ಔನತ್ಯ ವನ್ನು ಎತ್ತಿ ಹಿಡಿಯುತ್ತದೆ. ಸಂಸ್ಕೃತ ಭಾಷೆಯು ಇವತ್ತು ಆಡು ಮಾತಾಗಿ ಲ್ಲದಿರಬಹುದು- ಆದರೆ ಎಲ್ಲರಿಗೂ ಸುಭಾಷಿತಗಳಲ್ಲಿ ಅಡಗಿರುವ ಜ್ಞಾನ ಮತ್ತು ಮೌಲ್ಯಗಳ ಬಗೆಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅದರ ಅರಿವಿರುತ್ತದೆ. ಸಂಪೂರ್ಣ ಸಂದರ್ಶನ ಓದಲು ಕೆಳಗಿನ ಕ್ಯುಆರ್‌ಕೋಡ್ ಸ್ಕ್ಯಾನ್ ಮಾಡಿ ಹಾಗೂ ರವಿವಾರದ ಸಾಪ್ತಾಹಿಕ ಸಂಪದ ನೋಡಿ.