Advertisement

South Korean ಕವಿ ಹಾನ್‌ ಕಾಂಗ್‌ಗೆ 2024ರ ಸಾಹಿತ್ಯ ನೊಬೆಲ್‌ ಗೌರವ!

01:37 AM Oct 11, 2024 | Team Udayavani |

ಹೊಸದಿಲ್ಲಿ: 2024ನೇ ಸಾಲಿನ ಸಾಹಿತ್ಯ ನೊಬೆಲ್‌ ಗೌರವಕ್ಕೆ ದಕ್ಷಿಣ ಕೊರಿಯಾದ ಕವಿ ಕಾನ್‌ ಕಾಂಗ್‌ ಪಾತ್ರರಾಗಿದ್ದಾರೆ. ಇವರು ಐತಿಹಾಸಿಕ ಕಾವ್ಯಗಳ ಮೂಲಕ ಮಾನವನ ಜೀವನದ ದುರ್ಬಲ­ತೆಯ ನ್ನು ಬಹಿರಂಗಪಡಿಸಿ ಜಗತ್ತಿನ ಗಮನ ಸೆಳೆದಿದ್ದರು. ಗ್ವಾಂಗುjನಲ್ಲಿ 1970ರಲ್ಲಿ ಜನಿಸಿದ ಹಾನ್‌, ತಮ್ಮ ಸಾಹಿತ್ಯದಲ್ಲಿ ಮಾನವನ ದುರ್ಬಲತೆ­ಯನ್ನು ಪ್ರಕಟಿ ಸುವ ಮೂಲಕ ಗುರುತಿಸಿಕೊಂಡಿದ್ದರು. 1980ರ ಗ್ವಾಂಗುj ದಂಗೆ­ಯನ್ನು ಕಥಾವ ಸ್ತುವನ್ನಾಗಿಸಿ­ಕೊಂಡು 2014ರಲ್ಲಿ ಹಾನ್‌ ಬರೆದ ಹ್ಯೂಮನ್‌ ಆ್ಯಕ್ಟ್ ಕೃತಿ ಜಗತ್ತನ್ನು ಕೊರಿಯಾ ಸಾಹಿತ್ಯದತ್ತ ತಿರುಗಿ ನೋಡುವಂತೆ ಮಾಡಿತು. ಇದಲ್ಲದೇ ಯುರೋಪಾ, ದಿ ವೆಜಿಟೇರಿಯನ್‌ ಕೃತಿಗಳು ಕ್ರಾಂತಿಯನ್ನುಂಟು ಮಾಡಿದವು. ವೆಜಿಟೇರಿಯನ್‌ಗಾಗಿ ಹಾನ್‌ ಬೂಕರ್‌ ಪ್ರಶಸ್ತಿ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next