Advertisement

ಓದುವ ಹವ್ಯಾಸದಿಂದ ಸಾಹಿತ್ಯ ಲೋಕ ಸಮೃದ್ಧ

12:25 PM Nov 02, 2017 | |

ಕೊಡಿಯಾಲ್‌ಬೈಲ್‌: ರಾಜ್ಯೋತ್ಸವದ ಆಚರಣೆ ಒಂದು ದಿನಕ್ಕೆ ಸೀಮಿತಗೊಳ್ಳದೆ ನಿತ್ಯ ನಿರಂತರವಾಗಿರಬೇಕು. ನಮ್ಮಲ್ಲಿ ಓದುವ ಹವ್ಯಾಸ ಬೆಳೆದಾಗ ಸಾಹಿತ್ಯಲೋಕ ಸಮೃದ್ಧವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಕನಿಷ್ಠ
ತಿಂಗಳಿಗೊಂದು ಕನ್ನಡ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹಾಸ್ಯ ಸಾಹಿತಿ ಕುಗೋ
ಹೇಳಿದರು.

Advertisement

ಅವರು ಬುಧವಾರ ಇಲ್ಲಿನ ಕರ್ಣಾಟಕ ಬ್ಯಾಂಕಿನ ಸಭಾಂಗಣದಲ್ಲಿ ಮಂಗಳೂರು ಡಿವಿಜಿ ಬಳಗದ ವತಿಯಿಂದ ಜರಗಿದ ಕರ್ನಾ ಟಕ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಕಲಾವಿದ ಮೋಹನ್‌ ವೆರ್ಣೇಕರ್‌ ಅವರ 108 ಕನ್ನಡ ಸಾಹಿತಿಗಳ ಚುಕ್ಕಿ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು.

ಮೋಹನ್‌ ವೆರ್ಣೇಕರ್‌ ಅವರ ‘ಚುಕ್ಕಿಚಿತ್ರಗಳಲ್ಲಿ ಸಾಹಿತ್ಯ ಚೇತನಗಳು’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ
ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ಬಿ.ನಾಗರಾಜ ರಾವ್‌ ಅವರು, ಸಾಹಿತ್ಯ ಕಾರ್ಯಕ್ರಮಗಳಿಗೆ ಕರ್ಣಾಟಕ ಬ್ಯಾಂಕ್‌ ನಿರಂತರ ಸಹಕಾರ ನೀಡುತ್ತದೆ ಎಂದರು. ವಿದ್ವಾನ್‌ ಜಿ.ಎಸ್‌.ನಟೇಶ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ ಅವರು ಪುಸ್ತಕ ಪರಿಚಯ ಮಾಡಿದರು. ವೇದಿಕೆಯಲ್ಲಿ ಕಲಾವಿದ ಮೋಹನ್‌ ವರ್ಣೇಕರ್‌ ಉಪಸ್ಥಿತರಿದ್ದರು. ಡಿವಿಜಿ ಬಳಗದ ಅಧ್ಯಕ್ಷ ಕನಕ ರಾಜು ಸ್ವಾಗತಿಸಿ, ವಸಂತ ಕಜೆ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next