Advertisement

ಇಂದು ದೆಹಲಿಗೆ ಸಚಿವಾಕಾಂಕ್ಷಿಗಳ ಪಟ್ಟಿ

06:55 AM Jun 04, 2018 | Team Udayavani |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬುಧವಾರ ಮಹೂರ್ತ ನಿಗದಿಯಾಗಿರುವುದರಿಂದ ಕಾಂಗ್ರೆಸ್‌ ಪಟ್ಟಿಯನ್ನು ಅಂತಿಮಗೊಳಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಸೋಮವಾರ ದೆಹಲಿಗೆ ತೆರಳಲಿದ್ದಾರೆ.

Advertisement

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಜತೆ ಸಮಾಲೋಚನೆ ನಡೆಸಲಿದ್ದಾರೆ. 

ವಿದೇಶದಲ್ಲಿರುವ ರಾಹುಲ್‌ ಗಾಂಧಿ ಭಾನುವಾರ ರಾತ್ರಿ ದೆಹಲಿಗೆ ಮರಳಿದ್ದು, ಸೋಮವಾರ ಮಧ್ಯಾಹ್ನ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಯಲಿದೆ. ಈಗಾಗಲೇ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ದೆಹಲಿಗೆ ಹೋಗಿದ್ದು ಗುಲಾಂ ನಬಿ ಆಜಾದ್‌, ಅಶೋಕ್‌ ಗೆಲ್ಹೋಟ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಹೈಕಮಾಂಡ್‌ ದೆಹಲಿಗೆ ಕರೆಸಿಕೊಂಡು ಮಾತನಾಡುವ
ಸಾಧ್ಯತೆಯಿದೆ ಎನ್ನಲಾಗಿದೆ. ಈ ಮಧ್ಯೆ, ಸಚಿವಾಕಾಂಕ್ಷಿಗಳು ಸಹ ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಹಿರಿಯ ನಾಯಕರ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ.

ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯರಿಗೆ ಈ ಬಾರಿ ಅವಕಾಶ ಕೊಡಬಾರದು ಎಂದು ಕಿರಿಯ ಶಾಸಕರು ಪಟ್ಟು
ಹಿಡಿದಿದ್ದಾರೆ. ಆದರೆ, ಸರ್ಕಾರದಲ್ಲಿ ಅನುಭವ ಇರುವ ಹಿರಿಯರೂ ಇರಬೇಕು ಎಂದು ಹಿರಿಯರು ವಾದ ಮಂಡಿಸಿದ್ದಾರೆ.

Advertisement

ಹೀಗಾಗಿ, ಎರಡೂ ಕಡೆಯ ಅಭಿಪ್ರಾಯಮಗಳನ್ನು ರಾಜ್ಯ ನಾಯಕರು ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ಪ್ರಸ್ತಾಪಿಸಿ, ಸಚಿವರಾಗುವವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.

ಪ್ರಾದೇಶಿಕ, ಜಿಲ್ಲಾ, ಸಮುದಾಯವಾರು ಪ್ರಾತಿನಿಧ್ಯದ ಆಧಾರದ ಮೇಲೆಯೇ ಪಟ್ಟಿ ಸಿದಟಛಿಗೊಳ್ಳಲಿದೆ. ರಾಹುಲ್‌
ಗಾಂಧಿಯವರು ಕೆಲವು ಆಕಾಂಕ್ಷಿಗಳ ಜತೆ ಖುದ್ದಾಗಿ ಮಾತನಾಡಿ,ಪರಿಸ್ಥಿತಿ ಹಾಗೂ ಅನಿವಾರ್ಯತೆಯಿಂದಾಗಿ ಕೆಲ ಕಾಲ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಮನವಿ ಮಾಡಲಿದ್ದಾರೆ.

ಮೂಲಗಳ ಪ್ರಕಾರ ಕಾಂಗ್ರೆಸ್‌ಗೆ 21 ಸಚಿವರನ್ನು ಮಾಡುವ ಅವಕಾಶ ಇದ್ದರೂ 15 ರಿಂದ 17 ಮಂದಿಯನ್ನು ಮಾತ್ರ ಮೊದಲ ಕಂತಿನಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು.ಲೋಕಸಭೆ ಚುನಾವಣೆ ನಂತರ ಉಳಿದ ಸ್ಥಾನ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಇಂಧನ ಅಥವಾ ಹಣಕಾಸು ಖಾತೆ ಮೇಲೆ ಕಣ್ಣಿಟ್ಟು ಬೇಸರಗೊಂಡಿರುವ ಡಿ.ಕೆ.ಶಿವಕುಮಾರ್‌ ಅವರನ್ನು ಹೈಕಮಾಂಡ್‌ ಸಮಾಧಾನಪಡಿಸುವ ಕೆಲಸಕ್ಕೆ ಕೈ ಹಾಕಿದ್ದು, ಅವರಿಗೆ ಜಲ ಸಂಪನ್ಮೂಲ, ಕೈಗಾರಿಕೆ ಅಥವಾ ಬೆಂಗಳೂರು ನಗರಾಭಿವೃದಿಟಛಿ ಖಾತೆ ಕೊಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜೆಡಿಎಸ್‌ ಸಹ 11 ಸ್ಥಾನಗಳಲ್ಲಿ 9 ಸ್ಥಾನ ಭರ್ತಿ ಮಾಡಿ ಎರಡು ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇಂಧನ ಹಾಗೂ ಲೋಕೋಪಯೋಗಿ ಖಾತೆಗೆ ಪಟ್ಟು ಹಿಡಿದಿರುವ ಎಚ್‌.ಡಿ.ರೇವಣ್ಣ ಅವರಿಗೆ ಸದ್ಯಕ್ಕೆ ಒಂದು ಖಾತೆಗೆ ಸಮಾಧಾನಪಡಿಸಲಾಗುವುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next