ಬೆಂಗಳೂರು: ಚುನಾವಣೆಗೆ ಕೈ’ ಅಭ್ಯರ್ಥಿಗಳ ಎರಡನೇ ಹಂತದ ಪಟ್ಟಿಯನ್ನು ಅಂತಿಮಗೊಳಿಸಲು ಮಂಗಳವಾರ ದಿಲ್ಲಿಯಲ್ಲಿ ಪಕ್ಷದ ಚುನಾವಣ ಸಮಿತಿ ಸಭೆ ನಡೆಯಲಿದ್ದು, ಬುಧವಾರ ಪಟ್ಟಿ ಬಿಡುಗಡೆ ಯಾಗುವ ಸಾಧ್ಯತೆ ಇದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾ. 19ರಂದು ಕಾಂಗ್ರೆಸ್ ಚುನಾವಣ ಸಮಿತಿ ಸಭೆ ನಡೆಯಲಿದ್ದು, 20ರಂದು ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಮೊದಲ ಹಂತದಲ್ಲಿ 15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಚುನಾವಣ ಪ್ರಚಾರ ಮತ್ತಿತರ ಸಿದ್ಧತೆಗಳ ವಿಚಾರದಲ್ಲಿ ಎದುರಾಳಿ ಪಕ್ಷಗಳಿಗೆ ಹೋಲಿಸಿ ದರೆ “ಕೈ’ ಪಡೆ ತುಸು ಹಿಂದೆಯೇ ಉಳಿದಿದೆ ಎಂಬ ಅಭಿಪ್ರಾಯ ಇದೆ. ಈಗ ಚುನಾವಣೆ ಘೋಷಣೆಯಾದರೂ ಅಭ್ಯರ್ಥಿಗಳ ಪಟ್ಟಿ ಮಾತ್ರ ಕಗ್ಗಂಟಾಗಿದೆ. ಪರಿಣಾಮ ಗೊಂದಲಕ್ಕೆ ಸಿಲುಕಿರುವ ಆಕಾಂಕ್ಷಿಗಳಲ್ಲಿ ಚಡಪಡಿಕೆ ಆರಂಭವಾಗಿದೆ.
ನಾಳೆ ಯಾವುದು ಅಂತಿಮ?
ಧಾರವಾಡ, ಕಲಬುರಗಿ, ಚಿತ್ರದುರ್ಗ (ಮೀಸಲು), ಕೋಲಾರ (ಮೀಸಲು), ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಬೆಂಗಳೂರು ದಕ್ಷಿಣ, ಕೇಂದ್ರ ಮತ್ತು ಉತ್ತರ, ದಾವಣಗೆರೆ, ಚಾಮರಾಜನಗರ, ಉತ್ತರ ಕನ್ನಡ, ಬೀದರ್, ಮೈಸೂರು.