Advertisement

ಮದ್ಯಕ್ಕಾಗಿ ನಿದ್ದೆಗೆಟ್ಟು ನಿಂತ ಜನ ; ಸಾಮಾಜಿಕ ಅಂತರದ ನಿಯಮ ಗಾಳಿಗೆ ತೂರಿದ ಪಾನಪ್ರಿಯರು

02:21 AM May 05, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ಲಾಕ್‌ಡೌನ್‌ನಿಂದಾಗಿ ಕಳೆದ 40 ದಿನಗಳಿಂದ ಮುಚ್ಚಿದ್ದ ಮದ್ಯದಂಗಡಿಗಳು ಸೋಮವಾರದಿಂದ ಮತ್ತೆ ತೆರೆದಿದ್ದು, ದೆಹಲಿ, ಆಂಧ್ರಪ್ರದೇಶ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಜನ ಮದ್ಯ ಕೊಳ್ಳಲು ಮುಗಿಬಿದ್ದಿದ್ದರು.

Advertisement

ಆಂಧ್ರಪ್ರದೇಶದ ಹಲವು ಪಟ್ಟಣಗಳಲ್ಲಿ ಭಾನುವಾರ ರಾತ್ರಿಯಿಂದಲೇ ಮದ್ಯದಂಗಡಿ ಬಳಿ ಠಿಕಾಣಿ ಹೂಡಿದ್ದ ಪಾನಪ್ರಿಯರು ಬೆಳಗ್ಗೆ ಅಂಗಡಿಗಳ ಬಾಗಿಲು ತೆರೆಯುವವರೆಗೂ ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಬಹುತೇಕ ರಾಜ್ಯಗಳ ವೈನ್‌ಶಾಪ್‌ಗಳ ಎದುರು ಸಾಮಾಜಿಕ ಅಂತರ ಗಾಳಿಗೆ ತೂರಲಾಗಿತ್ತು.

ಸರ್ಕಾರದ ಆದೇಶದನ್ವಯ ಮದ್ಯ ಕೊಳ್ಳಲು ಪರಸ್ಪರ ಎರಡು ಮೀಟರ್‌ ಅಂತರ ಕಾಯ್ದುಕೊಳ್ಳದೆ ಜನ ಹಿಂಡಿನಲ್ಲಿರುವ ಕುರಿಗಳಂತೆ ಪರಸ್ಪರ ಅಂಟಿಕೊಂಡು ನಿಂತಿದ್ದರು.

ಈ ನಡುವೆ ಕಂಟೈನ್ಮೆಂಟ್‌ ವಲಯಗಳಲ್ಲಿ ಮದ್ಯದಂಗಡಿಗಳು ತೆರೆದಿರಲಿಲ್ಲ. ಆಂಧ್ರಪ್ರದೇಶದ ತಿರುಪತಿಯಲ್ಲಿ ಭಾನುವಾರ ಮಧ್ಯರಾತ್ರಿಯಿಂದಲೇ ಮದ್ಯಕ್ಕಾಗಿ ಜನ ಸರತಿ ಸಾಲಿನಲ್ಲಿ ನಿಂತಿದ್ದರು.

ಅತ್ತ ಛತ್ತೀಸ್‌ಗಡದ ರಾಜ್‌ನಂದಗಾವ್‌ ಎಂಬ ಗ್ರಾಮದ ಮದ್ಯದಂಗಡಿ ಎದುರು ಬೆಳಗ್ಗೆ 7 ಗಂಟೆಯಿಂದಲೇ ಸಾವಿರಾರು ಮಂದಿ ಜಮಾಯಿಸಿದ್ದರು. ಇಲ್ಲೂ ಕೂಡ ಜನ ಸಾಮಾಜಿಕ ಅಂತರದ ನಿಯಮ ಪಾಲಿಸಲಿಲ್ಲ.

Advertisement

ದೇಶದ ಬಹುತೇಕ ನಗರಗಳಲ್ಲಿ ಪಾನ ಪ್ರಿಯರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದ್ಯ ಖರೀದಿಗೆ ಮುಗಿಬಿದ್ದ ಬಗ್ಗೆ ಜಾಲತಾಣಗಳಲ್ಲಿ ಕಾವೇರಿದ ಚರ್ಚೆ ನಡೆಯಿತು.

ಕೆಲವರು ಹೀಗೆ ಒಂದೇ ಕಡೆ ನೂರಾರು, ಸಾವಿರಾರು ಜನ ಜಮಾಯಿಸುವುದರಿಂದ ಕೋವಿಡ್ ಸೋಂಕು ಹೆಚ್ಚು ಜನರಿಗೆ ಹರಡುತ್ತದೆ ಎಂದರೆ, ಮತ್ತೆ ಕೆಲವರು ಮದ್ಯದಂಗಡಿ ತೆರೆಯುವುದು ಅಗತ್ಯವಿತ್ತು ಎಂದು ವಾದಿಸಿದ್ದಾರೆ.





Advertisement

Udayavani is now on Telegram. Click here to join our channel and stay updated with the latest news.

Next