Advertisement
ಡ್ಯುಯಲ್ ಕಲರ್ಡ್ ಲಿಪ್ಸ್ಟಿಕ್ಹೆಸರೇ ಹೇಳುವಂತೆ ಇದು ಎರಡು ಬಣ್ಣಗಳುಳ್ಳ ಲಿಪ್‌ಸ್ಟಿಕ್. ಲಿಪ್‌ಸ್ಟಿಕ್‌ನ ಎರಡೂ ಬದಿಗಳಲ್ಲಿ ಎರಡು ಬೇರೆ ಬೇರೆ ಬಣ್ಣಗಳಿರುತ್ತವೆ. ಮೇಕ್‌ಅಪ್ ಆರ್ಟಿಸ್ಟ್‌ಗಳು ಬಣ್ಣಗಳ ಜೊತೆ ಪ್ರಯೋಗ ಮಾಡಿದ ಫಲವಾಗಿ ಈ ಟ್ರೆಂಡ್ ಸೃಷ್ಟಿಯಾಯಿತು. ಈ ಟ್ರೆಂಡ್ ಫಾಲೋ ಮಾಡಲು ಬಹಳಷ್ಟು ಲಿಪ್‌ಸ್ಟಿಕ್‌ಗಳು ಬೇಕಾಗಿಲ್ಲ, ಗುಲಾಬಿ ಮತ್ತು ಕಿತ್ತಳೆ ಬಣ್ಣದ ಲಿಪ್‌ಸ್ಟಿಕ್‌ಗಳಿದ್ದರೆ ಸಾಕು.
ತುಟಿಯ ಮೇಲೆ ಎರಡೆರಡು ಬಣ್ಣಗಳನ್ನು ಹಚ್ಚುವುದು ಹೇಗೆ ಅಂದಿರಾ? ತುಂಬಾ ಸುಲಭ! ಮೇಲಿನ ತುಟಿಗೆ ಒಂದು ಬಣ್ಣ ಮತ್ತು ಕೆಳಗಿನ ತುಟಿಗೆ ಇನ್ನೊಂದು ಬಣ್ಣ ಹಚ್ಚಿದರಾಯಿತು. ಸಾಮಾನ್ಯವಾಗಿ, ಕೆಂಪು ಬಣ್ಣದ ಜೊತೆ ಗುಲಾಬಿ, ನೀಲಿ ಜೊತೆ ಹಸಿರು ಬಣ್ಣಗಳನ್ನು ಹಚ್ಚುತ್ತಾರೆ. ಹಸಿರಿನ ಜೊತೆ ಕೆಂಪು, ನೀಲಿ ಜೊತೆ ಗುಲಾಬಿ ಬಣ್ಣಗಳನ್ನು ಬಳಸುವುದಿಲ್ಲ. ಒಂದಕ್ಕೊಂದು ಹತ್ತಿರವಿರುವ ಬಣ್ಣಗಳನ್ನು ಹಚ್ಚಬಹುದು. ಶೇಡಿಂಗ್ ಟೆಕ್ನಿಕ್ ತಿಳಿದಿದ್ದರೆ ಬಣ್ಣಗಳ ಜೊತೆ ಆಟ ಆಡಬಹುದು. ನೋಡಿ ಕಲಿ, ಮಾಡಿ ನಲಿ
ಇದು ಬ್ರಹ್ಮವಿದ್ಯೆಯೇನಲ್ಲ. ರಾಕೆಟ್ ಸೈನ್ಸೂ ಅಲ್ಲ. ಬಣ್ಣಗಳ ಚಮತ್ಕಾರವನ್ನು ಯೂಟ್ಯೂಬ್, ಇನ್‌ಸ್ಟಗ್ರಾಂನಲ್ಲಿ ನೋಡಿ ಕಲಿಯಬಹುದು. ಪ್ರೊಫೆಷನಲ್ ಮೇಕ್‌ಅಪ್ ಆರ್ಟಿಸ್ಟ್ ಗಳು ಇದನ್ನು ಸರಳವಾಗಿ ಹೇಳಿಕೊಡುತ್ತಾರೆ. ಒಂದೆರಡು ಬಾರಿ ಮನೆಯಲ್ಲಿ ಪ್ರಯೋಗ ಮಾಡಿ, ಚೆನ್ನಾಗಿ ಕಾಣಿಸುತ್ತೋ ಇಲ್ಲವೋ ಅಂತ ನೋಡಿಕೊಂಡು ನಂತರ ಮನೆಯಿಂದಾಚೆ ಹೋಗುವಾಗ ಧೈರ್ಯವಾಗಿ ಹಚ್ಚಿ.