Advertisement

Record; ಸಂಗಾತಿ ಹುಡುಕಾಟಕ್ಕಾಗಿ ಸಿಂಹಗಳ ಈಜು

01:30 AM Jul 12, 2024 | Team Udayavani |

ಹೊಸದಿಲ್ಲಿ: ಪ್ರೇಯಸಿಯನ್ನು ಕಾಣಲು ಪ್ರೇಮಿಯೊಬ್ಬ ಸಪ್ತ ಸಾಗರವನ್ನೂ ದಾಟಿದ್ದನೆಂಬ ಕಥೆ ಕೇಳಿದ್ದೆವಲ್ಲಾ? ಆ ಕಥೆಯನ್ನು ದಕ್ಷಿಣ ಆಫ್ರಿಕಾದ ಸಿಂಹಗಳು ಎರಡು ನಿಜಗಾಥೆಯನ್ನಾಗಿಸಿವೆ. ಪ್ರೇಯಸಿ ಸಿಂಹಿಣಿಯ ಹುಡುಕುತ್ತಾ ನದಿಯಲ್ಲಿ ಬರೋಬ್ಬರಿ 1.3 ಕಿ.ಮೀ. ಈಜಿವೆ. ಈ ಮೂಲಕ ದ.ಆಫ್ರಿಕಾ ಸಿಂಹಗಳು ನಡೆಸಿದ ಸುದೀರ್ಘ‌ ಈಜು ಎಂಬ ದಾಖಲೆ ಸೃಷ್ಟಿಯಾಗಿದೆ.

Advertisement

ಉಗಾಂಡಾದ ಕ್ವೀನ್‌ ಎಲಿಜಬೆತ್‌ ನ್ಯಾಷನಲ್‌ ಪಾರ್ಕ್‌ನಲ್ಲಿದ್ದ ಜಾಕೋಬ್‌ ಮತ್ತು ಟಿಬು ಎಂಬ ಸಿಂಹಗಳು ಪ್ರೇಯ ಸಿ ಹುಡುಕಾಟದಲ್ಲಿ ಮೊಸಳೆಗಳು ತುಂಬಿದ್ದ ಕಾಜಿಂಗಾ ನದಿ ದಾಟಿ ಇನ್ನೊಂದು ದಂಡೆ ತಲುಪಿವೆ. ಒಂದು ಕಾಲು ಊನವಾಗಿದ್ದರೂ ಜಾಕೋಬ್‌ ಕೂಡ ಈ ಸಾಹಸ ಮಾಡಿರುವುದು ಅಚ್ಚರಿ ಮೂಡಿಸಿದೆ. ಈ ಲಯನ್‌ ಬ್ರದರ್ಸ್‌ಗಳ ಸಾಹಸವನ್ನು ಡ್ರೋನ್‌ಮೂಲಕ ಸಂಶೋಧಕರು ಚಿತ್ರೀಕರಿಸಿ ದ್ದಾರೆ. 3 ಪ್ರಯತ್ನಗಳ ಬಳಿಕ 4ನೇ ಪ್ರಯತ್ನದಲ್ಲಿ ಸಿಂಹಗಳು ಈಜುತ್ತಾ ತಮ್ಮ ಗಮ್ಯ ತಲುಪಿವೆ. ಪ್ರಾಣಿಗಳ ಕಳ್ಳಸಾಗಣೆ ಸೇರಿದಂತೆ ಮನುಷ್ಯರಿಂದ ಸಮಸ್ಯೆಗಳು ಎದುರಾಗುತ್ತಿರುವ ಕಾರಣ ಸಿಂಹಿಣಿ ಸಂತತಿ ಕ್ಷೀಣಿಸುತ್ತಿದೆ. ಈ ಕಾರಣ ಬೇರೆ ದಂಡೆಗೆ ಸಂಗಾತಿಯನ್ನು ಅರಸಿ ಸಿಂಹಗಳು ಪಯಣಿಸಿವೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next