ಪ್ಯಾರಿಸ್: ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದು ಬಹುಕಾಲದ ಕನಸನ್ನು ನನಸು ಮಾಡಿಕೊಂಡ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರು ವಿದಾಯ ಹೇಳುತ್ತಾರೆಯೇ?
ಹೌದು ಎನ್ನುತ್ತಿದೆ ವರದಿ. 35 ವರ್ಷದ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತರಾಗಲಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೆಸ್ಸಿ, ಅವರ ವಯಸ್ಸಿನ ಕಾರಣದಿಂದ ಮತ್ತೊಂದು ವಿಶ್ವಕಪ್ ಆಡಲು ಕಷ್ಟವಾಗುತ್ತದೆ ಎಂದು ನಿಯಮಿತವಾಗಿ ಹೇಳುತ್ತಿದ್ದರು.
ಇದನ್ನೂ ಓದಿ:ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿಯಲ್ಲಿ ಅತೃಪ್ತಿಯ ಹೊಗೆ
Related Articles
“ನಾನು ಸಾಕರ್ ಆಡುವುದನ್ನು ಇಷ್ಟಪಡುತ್ತೇನೆ, ನಾನು ಫಿಟ್ ಆಗಿರುವುವರೆಗೆ ಆಟವನ್ನು ಆನಂದಿಸುವುದನ್ನು ಮುಂದುವರಿಸುತ್ತೇನೆ. ಆದರೆ ಮುಂದಿನ ವಿಶ್ವಕಪ್ ವರೆಗೆ ಕಷ್ಟ ಎಂದು ತೋರುತ್ತದೆ. ನನ್ನ ವೃತ್ತಿಜೀವನ ಎಲ್ಲಿಗೆ ಹೋಗುತ್ತದೆ, ನಾನು ಏನು ಮಾಡುತ್ತೇನೆ ಎಂದು ನೋಡಬೇಕು. ಇದು ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ” ಎಂದು ಮೆಸ್ಸಿ ಪತ್ರಿಕೆಗೆ ತಿಳಿಸಿದರು.
ಮುಂದಿನ ವರ್ಷದ ಕೋಪಾ ಅಮೇರಿಕಾ ಕೂಟದಲ್ಲಿ ಅರ್ಜೆಂಟೀನಾ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡಲು ಆಡಲು ಬಯಸುವುದಾಗಿ ಅವರು ಹೇಳಿದರು. ‘’ನಾನು ಸ್ವಲ್ಪ ಸಮಯ ಇರುತ್ತೇನೆ, ನಾನು ಇದನ್ನು ಆನಂದಿಸಬೇಕು” ಎಂದು ಅವರು ಹೇಳಿದರು.