Advertisement

ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಒತ್ತಾಯಿಸಿ ಧರಣಿ

05:19 PM Jul 22, 2018 | |

ಕೊಪ್ಪಳ: ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರವು ಕೂಡಲೇ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಬಸವದಳ ರಾಜ್ಯದ ಎಲ್ಲ ಸಂಸದರ ನಿವಾಸದ ಬಳಿ ಧರಣಿ ನಡೆಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ರಾಷ್ಟ್ರೀಯ ಬಸವದಳ ಟ್ರಸ್ಟ್‌ನಿಂದ ನಗರದಲ್ಲಿರುವ ಸಂಸದ ಸಂಗಣ್ಣ ಕರಡಿ ಅವರ ನಿವಾಸದ ಬಳಿ ಸಾಂಕೇತಿಕ ಧರಣಿ ನಡೆಸಲಾಯಿತು.

Advertisement

ರಾಜ್ಯ ಸರ್ಕಾರವೂ ಈಗಾಗಲೇ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಕೇಂದ್ರ ಸರ್ಕಾರವು ಲಿಂಗಾಯತ ಧರ್ಮದ ಬಗ್ಗೆ ಎಲ್ಲವನ್ನೂ ಪರಿಶೀಲಿಸಿ ಮಾನ್ಯತೆ ನೀಡಬೇಕು. ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಅವರು ಕೊಟ್ಟಿರುವ ಸ್ವತಂತ್ರ ಧರ್ಮವಾಗಿದೆ. ಬಸವಣ್ಣ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಪೂಜಿಸಲ್ಪಡುತ್ತಿದ್ದಾರೆ. ಅವರ ವಚನಾಂಕಿತ ಎಲ್ಲಡೆಯೂ ಪಸರಿಸಿವೆ. ಲಿಂಗಾಯತ ಧರ್ಮದ ಬಗ್ಗೆ ಹಲವು ಉಲ್ಲೇಖಗಳು ಇದ್ದರೂ ಸಹಿತ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರೆಯುತ್ತಿಲ್ಲ ಎಂದು ಟ್ರಸ್ಟ್‌ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಸಮಪಾಲು, ಸಮಬಾಳು ಎನ್ನುವ ತತ್ವದಡಿ ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ಜಗತ್ತಿಗೆ ಜಾಗೃತಿ ಮೂಡಿಸಿದ್ದಾರೆ. ಇದನ್ನರಿತು ಕೇಂದ್ರ ಸರ್ಕಾರವು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸಬೇಕು. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಾಗಮೋಹನದಾಸ್‌ ಸಮಿತಿಯ ವರದಿಯನ್ನು ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳಿಸಿದ್ದಾರೆ. ಆದರೆ ಕೇಂದ್ರ ಸರ್ಕಾರವು ವರದಿ ಜಾರಿಯ ಕುರಿತು ಕೋಟ್ಯಂತರ ಲಿಂಗಾಯತರು ಕಾತುರದಿಂದ ಕಾದು ಕುಳಿತ್ತಿದ್ದಾರೆ. ಕೂಡಲೇ ಈ ಬಗ್ಗೆ ಪರಿಶೀಲಿಸಬೇಕೆಂದು ಒತ್ತಾಯಿಸಿದರು.

ಧರಣಿ ಸ್ಥಳಕ್ಕೆ ಸಂಸದರ ಪುತ್ರ ಹಾಗೂ ಜಿಪಂ ಸದಸ್ಯ ಗವಿಸಿದ್ದಪ್ಪ ಕರಡಿ ಅವರು ಭೇಟಿ ನೀಡಿ ಮನವಿ ಸ್ವೀಕರಿಸಿದರು. ಲಿಂಗಾಯತ ಮುಖಂಡರಾದ ವೀರಣ್ಣ ಕೊರ್ಲಹಳ್ಳಿ, ಸುಂಕಪ್ಪ ಅಮರಾಪುರ, ಕೊಟ್ರಪ್ಪ ಶೇಡದ್‌, ನಂದಯ್ಯ ಹಿರೇಮಠ, ನಿಜಲಿಂಗಪ್ಪ ಮೆಣಸಿನಕಾಯಿ, ವೀರೇಶ ಗಂಗಾವತಿ, ಸತೀಶ ಮಂಗಳೂರು, ಈಶ್ವರ ಲಿಂಗಾಯತ, ಬಸವರಾಜ ಹೂಗಾರ, ವಿಜಯಲಕ್ಷ್ಮೀ ಲಿಂಗಾಯತ, ಸುವರ್ಣಮ್ಮ ಕಡೆಮನಿ, ಶಾಂತಮ್ಮ, ಶೋಭಾ ಕೊರ್ಲಹಳ್ಳಿ, ಸುವರ್ಣಾ ಪಾಟೀಲ, ರೇಣುಕಪ್ಪ ಮಂತ್ರಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next