Advertisement
ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಅನುಭಾವನೀಡಿದರು. 12ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ತಳಹದಿ ಮೇಲೆ ಸ್ಥಾಪಿಸಿದ ಲಿಂಗಾಯತ ಧರ್ಮ ಸಾರ್ವಕಾಲಿಕ ಸಮಾನತೆ ಸಾರುವ ಪರಿಪೂರ್ಣ ಧರ್ಮವಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಸರಕಾರಿಯ ಎಲ್ಲಾ ಜನಗಣತಿ, ಕೋರ್ಟ್, ಗೆಜೆಟ್ ಹಾಗೂ ಕಚೇರಿಯ ಸುತ್ತೋಲೆಗಳಲ್ಲಿ ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ದಾಖಲಾಗಿದ್ದರೂ ಸ್ವತಂತ್ರ ಭಾರತದಲ್ಲಿ ಅದು ಹಿಂದೂ ಧರ್ಮದ ಅಂಗವೆಂದು ನಮೂದಿಸಿ ಬಸವಣ್ಣನವರಿಗೆ ಅವಮಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೂರಾರು ಕಾವ್ಯಗಳು, ಸಂಶೋಧನಾ ಮತ್ತು ವಿಮರ್ಶಾ ಸಾಹಿತ್ಯಗಳಲ್ಲಿ ಲಿಂಗಾಯತ ಸ್ವತಂತ್ರ ಧರ್ಮವಾಗಲು ಬೇಕಾದ ಎಲ್ಲಾ ಲಕ್ಷಣ ಮತ್ತು ದಾಖಲೆಗಳನ್ನು ಒದಗಿಸಿಕೊಟ್ಟಿದೆ. ಬಸವಾದಿ ಕಾಲದ ನಂತರ ವೀರಶೈವ ಪಂಗಡ ಲಿಂಗಾಯತ ಧರ್ಮದಲ್ಲಿ ಬಂದು ಸೇರಿಕೊಂಡಿದೆ. ಲಿಂಗಾಯತ ಧರ್ಮ ಹಿಂದೂ ಧರ್ಮದ ಅಂಗವಲ್ಲ, ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದೆ ಎಂದು ಹೇಳಿದರು. ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಪತ್ರಕರ್ತ ವಿಜಯಕುಮಾರ ಕಲ್ಲಾ ಮುಖ್ಯ ಅತಿಥಿಗಳಾಗಿದ್ದರು. ಲಿಂ| ಮಲ್ಲಣ್ಣ ಸೋಮಣ್ಣ ಕಲ್ಲಾ ಅವರ ಪುಣ್ಯಸ್ಮರಣೋತ್ಸವ ನಿಮಿತ್ತ ಅವರ ಕುಟುಂಬ ವರ್ಗ ಕಾರ್ಯಕ್ರಮದ ದಾಸೋಹಿಗಳಾಗಿ ಸೇವೆ ಸಲ್ಲಿಸಿದರು. ಕಸಾಪ ಅಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಿ, ಗುವಿವಿ ಸಿಂಡಿಕೇಟ್ ಸದಸ್ಯ ಸಂಗನಗೌಡ ಪಾಟೀಲ ಗುಳಾಳ, ಷಣ್ಮುಖಪ್ಪಗೌಡ ಹಿರೇಗೌಡ, ನೀಲಕಂಠ ಅವುಂಟಿ, ವಿಶ್ವನಾಥರೆಡ್ಡಿ ರಾಜಳ್ಳಿ, ಲಕ್ಷ್ಮೀಕಾಂತ ನಾಗರವತ್, ಸೋಮಣ್ಣ ಕಲ್ಲಾ, ಭಗವಂತ್ರಾಯ ಬೆಣ್ಣೂರ, ಮುರುಗೆಣ್ಣ ಬಿರಾದಾರ ಯಡ್ರಾಮಿ, ಗುರುಗೌಡ ಮಾಲಿಪಾಟೀಲ, ನಿಜಲಿಂಗ ದೊಡ್ಮನಿ, ಶರಣು ದೋರನಹಳ್ಳಿ, ಸುರೇಶ ಸಾಸಬಾಳ, ಅಖಂಡು ಕಲ್ಲಾ, ನಿಂಗಣ್ಣಗೌಡ ಹಳಿಮನಿ, ರಾಮಣ್ಣ ತೊನಸಳ್ಳಿಕರ್, ಮಲ್ಲಿಕಾರ್ಜುನ ಮಾಸ್ತರ ಹೂಗಾರ, ದೇವಾನಂದ ಡೂಗನಕರ್, ನೂರಂದಪ್ಪ ಯಡ್ರಾಮಿ ಸೇರಿದಂತೆ ನೂರಾರು ಜನ ಬಸವಾಭಿಮಾನಿಗಳು ಆಗಮಿಸಿದ್ದರು. ಶಿಕ್ಷಕ ಬಸವರಾಜ ಕಲ್ಲಾ ನಿರೂಪಿಸಿ, ವಂದಿಸಿದರು.