ಆಶೆ ಬಿಟ್ಟವರಾರೂ ಕಾಣುತ್ತಿಲ್ಲ. ಇದಕ್ಕೆಲ್ಲ ಮಿಗಿಲಾಗಿ ಶರಣರು ಬದುಕಿ ಬಾಳಿದ್ದಾರೆ. ಶರಣರ ತತ್ವ ಅವಲೋಕಿಸಿ ನಡೆದರೆ ಸುಂದರ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು. ಹುಲಸೂರಿನ ಡಾ| ಶಿವಾನಂದ ಮಹಾಸ್ವಾಮಿಗಳು ಸನ್ಮಾನ ಸ್ವೀಕರಿಸಿ ಮಾತನಾಡಿ, ಲಿಂಗ, ವಿಭೂತಿ, ರುದ್ರಾಕ್ಷಿ ಇವುಗಳು ಧಾರ್ಮಿಕ ಚಿಹ್ನೆಗಳಾದರೂ ವೈಜ್ಞಾನಿಕ ತಳಹದಿಮೇಲೆ ಬಸವಣ್ಣನವರು ಅವುಗಳನ್ನು ಕೊಡಮಾಡಿದ್ದಾರೆ. ತಾವು ಕಾಕು-ಪೋಕು ದೇವರುಗಳ ಪೂಜೆ ಮಾಡಿ ಕೈ ಸುಟ್ಟುಕೊಳ್ಳದೇ ಪ್ರತಿಯೊಬ್ಬರು ಇಷ್ಟಲಿಂಗಧಾರಿಗಳಾಗಿ ಶಾಂತಿ ಸಮಧಾನದ ಜೀವನ ನಡೆಸಬೇಕು ಎಂದು ಹೇಳಿದರು. ಬಸವ ಮುಕ್ತಿ ಮಂದಿರದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಮಾತನಾಡಿ, ನಮಗೆ ಎರಡು ಹಸಿವುಗಳು ಇವೆ. ಒಂದು ಹೊಟ್ಟೆ ಹಸಿವು ಇನ್ನೊಂದು ಜ್ಞಾನದ ಹಸಿವು. ಹೊಟ್ಟೆ ಹಸಿವು ಕ್ಷಣಮಾತ್ರ ಆದರೆ ಜ್ಞಾನದ ಹಸಿವು ನಿವಾರಿಸಿಕೊಳ್ಳಲು ಪ್ರವಚನ, ಶರಣ ಚಿಂತನೆ ಇಂದು ಅನಿವಾರ್ಯಎಂದರು. ಇದೇ ವೇಳೆ ಡಾ| ಶಿವಾನಂದ ಮಹಾಸ್ವಾಮಿಗಳು, ಡಾ| ಜಯದೇವಿ ಗಾಯಕವಾಡ ಮತ್ತು ಮಾತೆ ಸತ್ಯಕ್ಕ ಅವರನ್ನು ಬಸವಕೇಂದ್ರದಿಂದ ಗೌರವಿಸಲಾಯಿತು. ಲಿಂ| ಚಂದ್ರಪ್ಪ ಜಾಬಾ, ನಗರ ಸಭೆ ಮಾಜಿ ಸದಸ್ಯೆ ಶ್ರೀದೇವಿ ಕರಂಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಪ ಅಧ್ಯಕ್ಷ ಎಂ.ಎಸ್. ಮನೋಹರ, ನಿರ್ಮಲಾ ಯದಲಾಪುರೆ, ಚಂದ್ರಕಲಾ ಸ್ವಾಮಿ, ರುಕ್ಮಿಣಿ ಸೂರ್ಯಕಾಂತ ಕೋಟೆ, ಚನ್ನಬಸವ ಹೊಡೆ ಮತ್ತಿತರರು ಇದ್ದರು. ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರು. ಡಾ| ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಗಣೇಶ ಶೀಲವಂತ ವಂದಿಸಿದರು.
Advertisement