Advertisement

ಪಂಚಮಸಾಲಿ ಸಮಾಜ 2ಎಗೆ ಸೇರಲಿ

05:11 PM Feb 09, 2021 | Team Udayavani |

ಅಣ್ಣಿಗೇರಿ: ಲಿಂಗಾಯತ ಪಂಚಮಸಾಲಿ ಸಮಾಜವನ್ನು 2ಎ ಸೇರಿಸಲು ಆಗ್ರಹಿಸಿ ನಡೆಯುತ್ತಿರುವ ಬೆಂಗಳೂರ ಚಲೋ ಪಾದಯಾತ್ರೆಯಲ್ಲಿ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಸೇರುವ ಮೂಲಕ ಯಶಸ್ವಿಗೊಳಿಸೋಣ ಎಂದು ಸಮಾಜದ ಮುಖಂಡ ವಿಜಯ ಕುಲಕರ್ಣಿ ಹೇಳಿದರು.

Advertisement

ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಸೋಮವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಹತೆ ಇದ್ದರೂ ಕೂಡಾ ಸರ್ಕಾರದ ಉದ್ಯೋಗ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಅವೈಜ್ಞಾನಿಕವಾಗಿ ಹಂಚಿಕೆಯಾಗಿದೆ ಎಂದು ಆರೋಪಿಸಿದರು.

ಮುಖಂಡ ಷಣ್ಮುಖಪ್ಪ ಗುರಿಕಾರ ಮಾತನಾಡಿ, ಉಭಯ ಶ್ರೀಗಳ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡೋಣ ಎಂದರು.

  ಇದನ್ನೂ ಓದಿ :ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

Advertisement

ಬಾಪುಗೌಡ ಪಾಟೀಲ, ಚಂಬಣ್ಣ ಹಾಳದೋಟರ, ಮಹೇಶ ದೇಸಾಯಿ, ಶರಣಪ್ಪ ಜನಗಣ್ಣವರ, ಸಧುಗೌಡ ಪಾಟೀಲ, ಬಸವನಗೌಡ ಕುರಹಟ್ಟಿ, ನಿಜಗುಣೇಪ್ಪ ಅಕ್ಕಿ, ಶಿವಯೋಗಿ ಲಿಂಬಿಕಾಯಿ, ಶಂಕ್ರಪ್ಪ ಯಾದವಾಡ, ಅಶೋಕ ಮರಕುಂಬಿ, ದೇವರಾಜ ದಾಡಿಬಾವಿ, ಡಾ| ಸಿ.ಯಳವತ್ತಿ, ನಾಗರಾಜ ಮನಗೋಳಿ, ಬಸವರಾಜ ಸಗರದ,  ಶೇಖಣ್ಣ ನವಲಗುಂದ, ಮಂಜುನಾಥ ಅಕ್ಕಿ, ಚಂಬಣ್ಣ ಆಲೂರ, ಅಶೋಕ ಹೆಸರಣ್ಣವರ, ಶಂಕರಗೌಡ ಬಾಳನಗೌಡ್ರ, ಶಿವಕುಮಾರ ಬಳಿಗಾರ, ಪ್ರಕಾಶ ಮೇಟಿ, ಪ್ರಕಾಶ ಬಳ್ಳೊಳ್ಳಿ, ಯಲ್ಲಪ್ಪ ಅಕ್ಕಿ, ಎ.ಪಿ.ಗುರಿಕಾರ, ಬಸವರಾಜ ಯಳವತ್ತಿ, ಬಸವರಾಜ ಹಳ್ಳಿ, ದೇವೀಂದ್ರ ಕೊರ್ನಹಳ್ಳಿ, ಮಂಜು ಅಕ್ಕಿ, ಆನಂದ ಹಿರೇಗೌಡ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next