Advertisement
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳಿಂದ ನಿರ್ಣಯಗಳ ಮಂಡನೆ ಮಾಡಲಾಗಿದ್ದು,ಅತೀ ಹಿಂದುಳಿದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಅನುಕೂಲವಾಗುವಂತೆ ಹಿಂದುಳಿದ ವರ್ಗಗಳ ಆಯೋಗದಿಂದ ಪೂರ್ಣಪ್ರಮಾಣದ ವರದಿ ಪಡೆದು 2 A ಮೀಸಲಾತಿ ನೀಡಬೇಕು.ಎರಡನೇಯದಾಗಿ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರ ಸರಕಾರದಿಂದ ದೊರೆಯುವ ಓಬಿಸಿ ಮೀಸಲಾತಿ ಸೌಲಭ್ಯವನ್ನು ನೀಡುವಂತೆ ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.ಮೂರನೇಯದಾಗಿಮುಂದಿನ ತಿಂಗಳು ಅ 15 ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳು 2 A ಮೀಸಲಾತಿ ವಿಷಯದಲ್ಲಿ ನಿರ್ಣಯ ಕೈಗೊಳ್ಳಬೇಕು” ಎನ್ನುವುದಾಗಿದೆ.
Related Articles
2 ಎ ಮೀಸಲಾತಿ ದೊರಕಿಸಿ ಕೊಡುವ ವಿಚಾರದಲ್ಲಿ ನಮ್ಮಲ್ಲೇ ಬಹಳ ಕುತಂತ್ರಿಗಳಿದ್ಧಾರೆ. ನಮ್ಮ ಪಕ್ಷದಲ್ಲೇ ಒಂದು ಕುತಂತ್ರ ನಡೆಯಿತು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದಾರೆ.
Advertisement
ವಿಧಾನಸಭೆ ಚುನಾವಣೆ ಘೋಷಣೆ ಆಗುವ ದಿನ ನಮ್ಮಲ್ಲಿ ದೊಡ್ಡ ಕುತಂತ್ರ ನಡೆಯಿತು. ಯಡಿಯೂರಪ್ಪ ಮತ್ತು ಕಂಪನಿ ಮೀಸಲಾತಿ ಕೊಡುವುದು ಬೇಡ ಅಂದರು. ಆದರೆ ಅಮಿತ್ ಶಾ ಕೊಡಿ ಎಂದರು. ಕೊನೆಗೆ ರಾತ್ರಿ 9.30 ಕ್ಕೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದರು ಎಂದು ಅಗಿನ ಕಥೆ ಬಿಚ್ಚಿಟ್ಟರು.
ಬೊಮ್ಮಾಯಿ ಅವದಿಯಲ್ಲಿ ನಾವು ಹಠ ಮಾಡಿ ಕೆಲಸ ಮಾಡಿಸಿದ್ದೇನೆ. ಬೊಮ್ಮಾಯಿ ನನ್ನನ್ನು ಕರೆದು ಸಚಿವನಾಗಿ ಮಾಡೋ ಭರವಸೆ ಕೊಟ್ಟಿದ್ದರು. ಇದೆಲ್ಲ ನಾಟಕ ಬೇಡ, ನಮಗೆ ಮೀಸಲಾತಿ ಕೊಡಿ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದರು.
‘ನಮಗೆ 2 d ಮೀಸಲಾತಿ ಕೊಟ್ಟಿದ್ದಕ್ಕೆ ಸಮಾಧಾನ ಇಲ್ಲ.ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಪ್ರಯತ್ನ ಮಾಡಿದ್ದರು. ನಾನು ಮಾತನಾಡಿದ್ದನ್ನು ಕೇಂದ್ರಕ್ಕೆ ಕಳುಹಿಸುತ್ತಾರೆ. ಅಲ್ಲೊಬ್ಬ ಭೂಪ ಇದು ಸರಿಯಲ್ಲ ಎಂದು ನನಗೆ ಮೆಸೆಜ್ ಮಾಡುತ್ತಾನೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನನ್ನ ಮೇಲೆ ಕ್ರಮ ಕೈಗೊಳ್ಳಿ ಎಂದು ನೇರವಾಗಿಯೇ ಹೇಳಿದ್ದೇನೆ.ಮೀಸಲಾತಿ ವಿಚಾರವನ್ನು ಹಗುರವಾಗಿ ಪರಿಗಣಿಸುವದು ಬೇಡ. ನಮ್ಮ ಪರ ವಾದಕ್ಕೆ ಹತ್ತು ಜನರ ಹಿರಿಯರ ತಂಡ ಮಾಡಬೇಕು. ಎಲ್ಲಾದರೂ ಸ್ವಲ್ಪ ವ್ಯತ್ಯಾಸವಾದರೆ ಸಿಎಂ ಸಿದ್ದರಾಮಯ್ಯ ಉಲ್ಟಾ ಹೊಡೆಯುತ್ತಾರೆ. ಅವರೂ ಸಹ ವಕೀಲರು ಎಂಬುದು ನೆನಪಿರಲಿ. ಹೀಗಾಗಿ ಪಾಯಿಂಟ್ ಟೂ ಪಾಯಿಂಟ್ ಮಾತನಾಡುವವರನ್ನು ನೇಮಕ ಮಾಡಬೇಕು’ ಎಂದರು.
ವಿನಯ್ ಕುಲಕರ್ಣಿ ಅವರ ಮೇಲೆ ವಿಶ್ವಾಸ ಇದೆ.ಉಳಿದವರದು ನಾಟಕ್ ಕಂಪನಿ ಎಂದುವ್ಯಂಗ್ಯವಾಡಿದರು. ಬೆಳಗಾವಿ ಅಧಿವೇಶನದಲ್ಲಿ ಮುಂದಿನ ಹೋರಾಟ ಮಾಡೊಣ. ನಾನು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ನೇರವಾಗಿ ಜಗಳ ಆಡಿದ್ದೇನೆ. ನಮಗೆ ಮೀಸಲಾತಿ ಕೊಡುತ್ತೀರಾ ಇಲ್ಲವಾ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಹೇಳಬೇಕು ಎಂದು ಸವಾಲು ಹಾಕಿದರು.
‘ನಮ್ಮ ಸಮಾಜದ ಬಗ್ಗೆ ಸಿಎಂ ಗೆ ಸ್ವಲ್ಪ ಅಲರ್ಜಿ ಇದೆ. ಆದ್ದರಿಂದ ಮುಖ್ಯಮಂತ್ರಿಗಳ ಎದುರು ಏನು ಮಾತನಾಡಬೇಕು ಎಂದು ಮೊದಲೇ ತೀರ್ಮಾನ ಮಾಡಬೇಕು. ಅಧಿವೇಶನದೊಳಗಾಗಿ ಯಾವುದೇ ನಿರ್ಣಯ ಬರದೇ ಇದ್ದರೆ ಮುಂದಿನ ಹೋರಾಟ ಮಾಡೋಣ.ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ದರಾಗಬೇಕು. ಮೀಸಲಾತಿಗಾಗಿ ಮಹಾರಾಷ್ಟ್ರ ಮಾದರಿಯಲ್ಲಿ ನಮ್ಮ ಹೋರಾಟ ಇರಬೇಕು’ ಎಂದು ಯತ್ನಾಳ್ ಹೇಳಿದರು.
ಇಷ್ಟು ದಿನ ಎಲ್ಲರ ನಾಟಕ ನೋಡಿದ್ದೇನೆ, ನನಗೆ ಯಾರ ಭಯವೂ ಇಲ್ಲ. ವಿಜಯೇಂದ್ರ ಸ್ವಲ್ಪ ರೊಕ್ಕ ಕೊಟ್ಟರೆ ಶೀಘ್ರದಲ್ಲೇ ಯತ್ನಾಳ್ ಉಚ್ಛಾಟನೆ ಖಚಿತ ಎಂದು ಹೊಡೆದುಕೊಳ್ಳುತ್ತಾರೆ. ಐದು ಲಕ್ಷ ಕೊಟ್ಟರೆ ಅರ್ಧತಾಸು ಸುದ್ದಿ ಹೇಳುತ್ತಾರೆ. ಯತ್ನಾಳ್ ಅವರನ್ನು ಪಕ್ಷದಿಂದ ಹೊರಹಾಕುತ್ತಾರೆ ಎನ್ನುತ್ತಾರೆ. ಈ ಮಾತನ್ನು ಕೇಳುತ್ತ ಆರು ವರ್ಷ ಕಳೆಯಿತು. ನನಗೆ ಯಾರ ಭಯ ಇಲ್ಲ ಎಂದು ಹರಿಹಾಯ್ದರು.