Advertisement

ಎಲ್ಲ ಸಮುದಾಯದ ಕಡು ಬಡವರಿಗೆ ಆಹಾರ ಕಿಟ್‌

06:32 PM May 13, 2020 | Naveen |

ಲಿಂಗಸುಗೂರು: ಕ್ಷೇತ್ರದ ಎಲ್ಲ ಸಮುದಾಯದಲ್ಲಿನ ಕಡು ಬಡವರಿಗೆ ಆಹಾರ ಕಿಟ್‌ ವಿತರಿಸಲಾಗುವುದು ಎಂದು ಶಾಸಕ ಡಿ.ಎಸ್‌. ಹೂಲಗೇರಿ ಹೇಳಿದರು.

Advertisement

ಪಟ್ಟಣದ ಪುರಸಭೆ ಉದ್ಯಾನದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ, ಗ್ರಾನೈಟ್‌ ಉದ್ದಿಮೆದಾರರ, ಸಿವಿಲ್‌ ಗುತ್ತೆಗೆದಾರರ ಹಾಗೂ ತಮ್ಮ ವೈಯಕ್ತಿಕವಾಗಿ 500 ಆಹಾರ ಕಿಟ್‌ ವಿತರಿಸಿ ಮಾತನಾಡಿದ ಅವರು, ತಾಲೂಕಿನ ಮಡಿವಾಳ, ಸವಿತಾ, ಹಡಪದ, ಸಮಗಾರ, ಭೋವಿ ಸೇರಿದಂತೆ ಇತರ ಸಮುದಾಯಗಳ ಮುಖಂಡರ ಜೊತೆ ಚರ್ಚಿಸಿ ಆ ಸಮುದಾಯಗಳಲ್ಲಿನ ಕಡುಬಡವರಿಗೆ ಆಹಾರ ಕಿಟ್‌ ವಿತರಿಸಲಾಗುವುದು. ಗ್ರಾನೈಟ್‌ ಅಸೋಸಿಯನ್‌ ವತಿಯಿಂದ ಮುದಗಲ್‌ನಲ್ಲಿ ಇನ್ನೂ 300 ಆಹಾರ ಕಿಟ್‌ ವಿತರಿಸಲಾಗುತ್ತಿದೆ. ಕೋವಿಡ್ ವೈರಸ್‌ ತಡೆಗಟ್ಟಲು ತಾಲೂಕು ಆಡಳಿತ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಹಶೀಲ್ದಾರ್‌ ಚಾಮರಾಜ ಪಾಟೀಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೂಪನಗೌಡ ಕರಡಕಲ್‌, ಮುಖಂಡರಾದ ಅಮರಗುಂಡಪ್ಪ ಮೇಟಿ, ಗುಂಡಪ್ಪ ನಾಯಕ, ಪಾಮಯ್ಯ ಮುರಾರಿ, ಮಲ್ಲಣ್ಣ ವಾರದ್‌, ಬಸವರಾಜಗೌಡ ಲೆಕ್ಕಿಹಾಳ, ಬಸವರಾಜಗೌಡ ಗಣೇಕಲ್‌, ವಾಹೀದ್‌ ಖಾದ್ರಿ ಮಹ್ಮದ್‌ ರಫಿ, ಪ್ರಮೋದ ಕುಲಕರ್ಣಿ, ಪರುಶುರಾಮ ನಗನೂರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next