Advertisement

ಲಿಂಗನಮಕ್ಕಿ ಜಲಾಶಯದಲ್ಲಿ ಭರಪೂರ ನೀರು

06:40 AM Jul 26, 2018 | |

ಶಿವಮೊಗ್ಗ: ಉತ್ತಮ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ದಿನೇದಿನೆ ಏರುತ್ತಿದೆ. ಕಳೆದ ಮೂರು ವರ್ಷದ ನಂತರ ಜಲಾಶಯದಲ್ಲಿ ಗರಿಷ್ಠ ಮಟ್ಟದ ನೀರು ಸಂಗ್ರಹವಾಗಿದೆ. 

Advertisement

ಹೀಗಾಗಿ, ಈ ಬಾರಿ ವಿದ್ಯುತ್‌ ಉತ್ಪಾದನೆಗೆ ನೀರಿನ ಕೊರತೆ ಎದುರಾಗುವುದಿಲ್ಲ.1819 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ
ಪ್ರಸ್ತುತ 1804.55 (ಜು.25ರವರೆಗೆ) ಅಡಿ ನೀರಿದೆ. ಹೊಸನಗರ, ಸಾಗರ ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿರುವು ದರಿಂದ ಜುಲೈನಲ್ಲಿ 22 ದಿನಗಳಲ್ಲಿ 30 ಅಡಿ ನೀರು ಸಂಗ್ರಹವಾಗಿದೆ. ಈ ಜಲಾಶಯ 2014ರ ಸೆಪ್ಟೆಂಬರ್‌ನಲ್ಲಿ ಪೂರ್ಣ ತುಂಬಿದ್ದು ಬಿಟ್ಟರೆ ಈ ವರೆಗೂ ಮತ್ತೆ ಸಂಪೂರ್ಣ ಭರ್ತಿಯಾಗಿಲ್ಲ. ಕಳೆದ ಎರಡು- ಮೂರು ವರ್ಷ ಮಲೆನಾಡಿನಲ್ಲೂ ಸತತ ಮಳೆ ಕೊರತೆ ಉಂಟಾಗಿದ್ದರಿಂದ ಜಲಾಶಯದಲ್ಲಿ ಅಷ್ಟಾಗಿ ನೀರು ಸಂಗ್ರಹವಾಗಿರಲಿಲ್ಲ.ಆದರೆ, ಈ ಬಾರಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.

15 ಬಾರಿ ಮಾತ್ರ ಭರ್ತಿ: ಜಲಾಶಯದ 50 ವರ್ಷಗಳ ಇತಿಹಾಸದಲ್ಲಿ ಈವರೆಗೆ 18 ಬಾರಿ ಮಾತ್ರ ನೀರನ್ನು ಹೊರಬಿಡಲಾಗಿದೆ. 15 ಬಾರಿ ಮಾತ್ರ ಸಂಪೂರ್ಣ ಭರ್ತಿಯಾಗಿದೆ. ಜಲಾಶಯ ಭರ್ತಿಯಾಗಿ ಅತಿ ಹೆಚ್ಚು ನೀರನ್ನು ಹೊರಬಿಟ್ಟಿರುವ ದಾಖಲೆ ಇರುವುದು 1970ರಲ್ಲಿ. ಅಂದು ಜಲಾಶಯದಿಂದ ನದಿಗೆ 92.38 ಟಿಎಂಸಿ ನೀರನ್ನು ಹೊರಬಿಡಲಾಗಿತ್ತು. 2007ರಲ್ಲಿ 5 ಬಾರಿ ಗೇಟು ತೆರೆದು ನೀರು ಹೊರಬಿಡಲಾಗಿದೆ. 2013ರಲ್ಲಿ ಆಗಸ್ಟ್‌ ಒಂದರಂದೇ ನೀರು ಹೊರಬಿಡಲಾಗಿತ್ತು.

ಪ್ರತಿ ಸಾರಿ ಆಗಸ್ಟ್‌, ಅಕ್ಟೋಬರ್‌ನಲ್ಲಿ ಡ್ಯಾಂ ತುಂಬಿರುವುದು ವಿಶೇಷ. ಆದರೆ, 2003ರಲ್ಲಿ ಮಾತ್ರ ಜಲಾಶಯ ಕನಿಷ್ಠ ಮಟ್ಟ ತಲುಪಿತ್ತು. ಆ ವರ್ಷದ ದಾಖಲೆ ಪ್ರಕಾರ 1725.45 ಅಡಿ ಮಾತ್ರ ಭರ್ತಿಯಾಗಿತ್ತು. 1987ರಲ್ಲೂ ಕೂಡ 1781ಅಡಿ ಮಾತ್ರ ಭರ್ತಿಯಾಗಿತ್ತು. 2015ರಲ್ಲಿ ನವೆಂಬರ್‌ವರೆಗೂ 80 ಟಿಎಂಸಿ (150 ಟಿಎಂಸಿ ಪೂರ್ಣ ಸಾಮರ್ಥ್ಯ) ಮಾತ್ರ ತುಂಬಿತ್ತು. 2016ರಲ್ಲಿ 88 ಟಿಎಂಸಿ, 2017ರಲ್ಲಿ 94 ಟಿಎಂಸಿ ಮಾತ್ರ ಭರ್ತಿಯಾಗಿದೆ. ಪ್ರಸ್ತುತ ಈವರೆಗೆ 105 ಟಿಎಂಸಿ ಇದೆ.

ಅರ್ಧ ತುಂಬಿದರೆ ಬಾಗಿನ ಅರ್ಪಣೆ: ಲಿಂಗನಮಕ್ಕಿ ಅಣೆಕಟ್ಟಿನಲ್ಲಿ 1795 ಅಡಿ ನೀರು ಸಂಗ್ರಹ ವಾದರೆ ಅರ್ಧ ಅಣೆಕಟ್ಟು ಭರ್ತಿ 
ಯಾದಂತೆ. ಅಲ್ಲಿಗೆ ಗೇಟ್‌ವರೆಗೆ ನೀರುಬಂದಿರುತ್ತದೆ. ಇಷ್ಟು ಬಂದರೆ ಪ್ರತಿ ವರ್ಷ ಬಾಗಿನ ಅರ್ಪಿಸಲಾಗುತ್ತದೆ. ಇಷ್ಟು ಸಂಗ್ರಹವಾದರೆ ಒಂದು ವರ್ಷ ಯಾವುದೇ ಆತಂಕವಿಲ್ಲದೆ ವಿದ್ಯುತ್‌ ಉತ್ಪಾದಿಸಬಹುದು. ಈ ಬಾರಿ ಜುಲೈನಲ್ಲೇ 1800 ಅಡಿಗೂ ಹೆಚ್ಚು ನೀರು  ಬಂದಿರುವುದರಿಂದ ಸೋಮ ವಾರ ಎಲ್ಲ ವಿಭಾಗದ ಎಂಜಿನಿಯರ್‌ಗಳು, ಕಾರ್ಮಿಕರು ಒಟ್ಟುಗೂಡಿ ಬಾಗಿನ ಅರ್ಪಿಸಿ ದರು. ನಂತರ ಸಾಂಪ್ರದಾಯಿಕವಾಗಿ ಒಂದು ಗೇಟ್‌ ಎತ್ತಿ 2 ನಿಮಿಷ ನೀರು ಹೊರಬಿಡಲಾ ಯಿತು. 2014ರ ನಂತರ ಪೂರ್ಣ ಭರ್ತಿಯಾಗದಿ ದ್ದರೂ ಅರ್ಧ ಡ್ಯಾಂ ತುಂಬಿರುವುದರಿಂದ ಪೂಜೆ ಸಲ್ಲಿಸಲಾಗಿದೆ.

Advertisement

ಶೇ.71 ರಷ್ಟು (105 ಟಿಎಂಸಿ)ಭರ್ತಿಯಾಗಿದೆ. ಇನ್ನೂ 45 ಟಿಎಂಸಿ ನೀರು ಬರಬೇಕು.ಪ್ರತಿ ವರ್ಷ ಶರಾವತಿಯಿಂದ 4500 ಮಿಲಿಯನ್‌ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತದೆ.
ಮೋಹನ್‌ ಕುಮಾರ್‌,
ಚೀಫ್‌ ಎಂಜಿನಿಯರ್‌, ಕೆಪಿಸಿಎಲ್‌

– ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next