Advertisement

Sandalwood: ‘ಲೈನ್‌ ಮ್ಯಾನ್‌’ ಸೆನ್ಸಾರ್ ನಲ್ಲಿ ಪಾಸ್‌!

06:24 PM Sep 07, 2023 | Team Udayavani |

ಈ ಹಿಂದೆ “ಟಕ್ಕರ್‌’ ಹಾಗೂ “ರನ್‌ ಆಂಟೋನಿ’ ಚಿತ್ರಗಳನ್ನು ನಿರ್ದೇಶಿಸಿದ್ದ ರಘು ಶಾಸ್ತ್ರಿ ನಿರ್ದೇಶನದ ಮೂರನೇ ಚಿತ್ರ “ಲೈನ್‌ ಮ್ಯಾನ್‌’ ಬಿಡುಗಡೆಗೆ ಸಿದ್ದವಾಗಿದೆ. ಗ್ರಾಮೀಣ ಭಾಗಗಳಲ್ಲಿ ಪ್ರತಿನಿತ್ಯ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್‌ ಸಂಬಂಧಿಸಿ ತೊಂದರೆ ಸರಿಪಡಿಸುವ “ಲೈನ್‌ ಮ್ಯಾನ್‌’ ಸುತ್ತ ಈ ಸಿನಿಮಾದ ಕಥೆ ನಡೆಯಲಿದೆ.

Advertisement

ಯುವ ನಟ ತ್ರಿಗುಣ್‌ ಸಿನಿಮಾದಲ್ಲಿ “ಲೈನ್‌ ಮ್ಯಾನ್‌’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಜಲ್‌ ಕುಂದರ್‌ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಉಳಿದಂತೆ ಹಿರಿಯ ನಟಿ ಬಿ. ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಮತ್ತಿತರರು ಸಿನಿಮಾದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈಗಾಗಲೇ ಶೂಟಿಂಗ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿ ಫ‌ಸ್ಟ್‌ ಕಾಪಿ ಜೊತೆ ಹೊರಬಂದಿರುವ “ಲೈನ್‌ ಮ್ಯಾನ್‌’ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್‌ ಮಂಡಳಿ, ಸಿನಿಮಾಕ್ಕೆ “ಯು’ ಸರ್ಟಿಫಿಕೇಟ್‌ ನೀಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಇದೇ ಅಕ್ಟೋಬರ್‌ ಮೊದಲ ವಾರ “ಲೈನ್‌ಮ್ಯಾನ್‌’ ಸಿನಿಮಾವನ್ನು ತೆರೆಗೆ ತರಲು ಪ್ಲಾನ್‌ ಹಾಕಿಕೊಂಡಿದೆ. “ಪರ್ಪಲ್‌ ರಾಕ್‌’ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next