Advertisement
ಸರ್ಕಾರದ ಅಧೀನದಲ್ಲಿನ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಮೀಕ್ಷಾ ವರದಿಯು ಬೆಳೆ ಸಾಲ ವಿತರಣೆಯಲ್ಲಿನ ಲೋಪಗಳಿಗೆ ಕನ್ನಡಿ ಹಿಡಿದಿದ್ದು, ಸುಧಾರಣೆಗೆ ಕೆಲ ಶಿಫಾರಸುಗಳನ್ನು ಸಲ್ಲಿಸಿದೆ. 2010-11ರಿಂದ 2013-14ನೇ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರ ವಿತರಿಸಿದ ಬೆಳೆ ಸಾಲ ಸಮರ್ಪಕವಾಗಿ ರೈತರಿಗೆ ತಲುಪಿದೆಯೇ, ಇದರಿಂದ ರೈತರಿಗೆ ಅನುಕೂಲವಾಗಿ ಆದಾಯ ಹೆಚ್ಚಾಗಿದೆಯೇ ಎಂಬುದನ್ನು ತಿಳಿಯಲು ಪ್ರಾಧಿಕಾರ ಸಮೀಕ್ಷೆ ಕೈಗೊಂಡಿತ್ತು. ರಾಜ್ಯದ 4 ಕಂದಾಯ ವಿಭಾಗಗಳಿಂದ ತಲಾ 2 ಜಿಲ್ಲೆಯನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿತ್ತು. ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ 20 ಪ್ರಾಥಮಿಕ ಕೃಷಿ ಪತ್ತಿನ ಸಂಸ್ಥೆಗಳು (ಪಿಎಸಿಎಸ್) ಹಾಗೂ 2 ಡಿಸಿಸಿ ಬ್ಯಾಂಕ್ ಗಳನ್ನು ಆಯ್ಕೆ ಮಾಡಿಕೊಂಡು ಒಟ್ಟು 2544 ರೈತರನ್ನು ಗುರುತಿಸಿ ಸಮೀಕ್ಷೆಗೆ ಒಳಪಡಿಸಿತ್ತು.
ಬದಲಾವಣೆಯಿಂದ ಉತ್ಪಾದಕತೆಯಲ್ಲಿ ಹೆಚ್ಚಳವಾಗಿದೆ ಎಂದು ಶೇ.60 ರೈತರು ತಿಳಿಸಿದ್ದಾರೆ. ಹೆಚ್ಚಿನ ಸರಾಸರಿ ಸಾಲವನ್ನು ಮೈಸೂರು ವಿಭಾಗದಲ್ಲಿ ಅಲ್ಪಸಂಖ್ಯಾತರು ಪಡೆದಿದ್ದರೆ, ಪ.ಜಾತಿ, ಪ. ಪಂಗಡದವರ ಪೈಕಿ ಹೆಚ್ಚು ಸರಾಸರಿ ಸಾಲ ಪಡೆದವರೂ ಸಹ ಮೈಸೂರು ವಿಭಾಗದವರೇ ಆಗಿರುವುದು ವಿಶೇಷ. ಕಲಬುರಗಿ ವಿಭಾಗದಲ್ಲಿ ಅತಿ ಕಡಿಮೆ ಸರಾಸರಿ ಸಾಲ (21,793 ರೂ.)
ವಿತರಣೆಯಾಗಿದೆ. ಶಿಫಾರಸುಗಳು: ಬೆಳೆ ಸಾಲ ಪಡೆಯಲು ವಿಧಿಸಿರುವ ದಾಖಲೆಗಳ ಸಂಖ್ಯೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ರೈತರ ಬೆಳೆಗೆ ಕನಿಷ್ಠ ಖಾತರಿ ಬೆಲೆ ಸಿಗುವಂತೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಸಾಲ ಮರುಪಾವತಿಗೂ ಅನುಕೂಲವಾಗಲಿದೆ. ವೈದ್ಯನಾಥನ್ ನಿಧಿಯನ್ನು ನಿರ್ದಿಷ್ಟ ಉದ್ದೇಶಕ್ಕಷ್ಟೇ ವಿನಿಯೋಗಿಸಬೇಕೆ ಹೊರತು ಡಿಸಿಸಿ ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟು, ಬಡ್ಡಿ ಗಳಿಸಲು ಬಳಸಬಾರದು. ಪಿಎಸಿಎಸ್‌ಗಳಲ್ಲಿ ಒಂದೇ ಸೂರಿನಡಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ರಿಯಾಯ್ತಿ ದರದಲ್ಲಿ ಸಿಗುವ ವ್ಯವಸ್ಥೆ ಕಲ್ಪಿಸಬೇಕು. ವಾಸ್ತವವಾಗಿ ಬೇಸಾಯದಲ್ಲಿ ತೊಡಗುವ ಅರ್ಹ ರೈತರಿಗೆ ಬೆಳೆ ಸಾಲ ಸಿಗುವಂತಾಗಬೇಕು.
Related Articles
ಬೇಸಾಯ ಸಾಲ ರೈತರಿಗೆ ಸಕಾಲದಲ್ಲಿ ಸಿಗದಿರುವುದು ಬೆಳಕಿಗೆ ಬಂದಿದ್ದು, ಯೋಜನೆಯ ಮೂಲ ಉದ್ದೇಶವೇ ಈಡೇರದಂತಾಗಿದೆ. ಸಮೀಕ್ಷೆಗೆ ಒಳಗಾದ ರೈತರಲ್ಲಿ ಶೇ.66 ಮಂದಿ ಸಕಾಲದಲ್ಲಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. 31 ಪ್ರಾಥಮಿಕ ಕೃಷಿ ಪತ್ತಿನ ಸಂಸ್ಥೆಗಳಲ್ಲಿ ರಸಗೊಬ್ಬರ, ಕೀಟನಾಶಕಗಳ ಸಂಗ್ರಹಕ್ಕೆ ಸೂಕ್ತ ಗೋದಾಮು ವ್ಯವಸ್ಥೆ ಇಲ್ಲದಿರುವುದು ಗೊತ್ತಾಗಿದೆ. ಶೇ.5 ರೈತರಿಗೆ ನೇರವಾಗಿ
ನಗದು ರೂಪದಲ್ಲಿ ಸಾಲ ವಿತರಿಸಿದ್ದು, ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿರುವುದನ್ನು ಉಲ್ಲೇಖೀಸಲಾಗಿದೆ. ಸರ್ಕಾರದ ಆದೇಶದ ಹೊರತಾಗಿಯೂ ಶೇ.90 ಪ್ರಾಥಮಿಕ ಕೃಷಿ ಪತ್ತಿನ ಸಂಸ್ಥೆಗಳು ಶೇ.25 ಹೊಸ ರೈತರಿಗೆ ಬೆಳೆ ಸಾಲ ವಿತರಿಸುವಲ್ಲಿ ವಿಫಲವಾಗಿವೆ. ಕೇವಲ ಶೇ.10 ಹೊಸ ರೈತರಿಗಷ್ಟೇ ಸಾಲ ನೀಡಿವೆ. ಬೆಳೆ ಸಾಲ ಮಂಜೂರು ಮಾಡಲು ಪಿಎಸಿಎಸ್‌ಗಳು ಹಣ ಪಡೆಯುತ್ತವೆ ಎಂಬುದಾಗಿ ಶೇ.30 ಫಲಾನುಭವಿಗಳು ತಿಳಿಸಿದ್ದಾರೆ.
Advertisement