Advertisement

ಶಿ ಯುಕಿ, ತೈ ಜು ಆಲ್‌ ಇಂಗ್ಲೆಂಡ್‌ ಚಾಂಪಿಯನ್ಸ್‌

06:00 AM Mar 20, 2018 | Team Udayavani |

ಬರ್ಮಿಂಗಂ: ಚೀನದ ಶಿ ಯುಕಿ ಮತ್ತು ತೈವಾನ್‌ನ ತೈ ಜುಯಿಂಗ್‌ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ವನಿತಾ ವಿಭಾಗದ ಸಿಂಗಲ್ಸ್‌ ಪ್ರಶಸ್ತಿ ಜಯಿಸಿದ್ದಾರೆ.

Advertisement

ಪುರುಷರ ವಿಭಾಗದ ಆಲ್‌ ಚೈನೀಸ್‌ ಫೈನಲ್‌ನಲ್ಲಿ ಕಳೆದ ವರ್ಷದ ರನ್ನರ್‌ ಅಪ್‌, 7ನೇ ಶ್ರೇಯಾಂಕದ ಶಿ ಯುಕಿ 21-19, 16-21, 21-9 ಅಂತರದಿಂದ ಲಿನ್‌ ಡಾನ್‌ ಆವರಿಗೆ ಸೋಲುಣಿಸಿದರು.

ವನಿತಾ ವಿಭಾಗದಲ್ಲಿ ವಿಶ್ವದ ನಂಬರ್‌ ವನ್‌ ಆಟಗಾರ್ತಿ ತೈ ಜು ಯಿಂಗ್‌ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಫೈನಲ್‌ನಲ್ಲಿ ಅವರು ಜಪಾನಿನ ಅಕಾನೆ ಯಮಾಗುಚಿ ಅವರನ್ನು 22-20, 21-13 ಅಂತರದಿಂದ ಮಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next