Advertisement
ಜಾಗತಿಕ ಮಹಾಮಾರಿ ಕೋವಿಡ್ ಹಾವಳಿ ನಡುವೆಯೂ ಏಷ್ಯಾದ ಅತಿದೊಡ್ಡ ಪ್ರದರ್ಶನ “ಏರೋ ಇಂಡಿಯಾ ಶೋ’ದಲ್ಲಿ ತಮ್ಮ ಉತ್ಪನ್ನಗಳ ಪ್ರದರ್ಶನಕ್ಕೆ ಭಾಗವಹಿಸಲು ಪ್ರದರ್ಶಕರು ಉತ್ಸುಕರಾಗಿದ್ದಾರೆ. ಪರಿಣಾಮ ಪ್ರದರ್ಶನಕ್ಕೆಮೀಸಲಿಟ್ಟ ಒಟ್ಟಾರೆ ಪ್ರದೇಶದ ಪೈಕಿ ಈಗಾಗಲೇ ಶೇ.97ರಷ್ಟು ಭರ್ತಿ ಆಗಿದೆ. ಕೇವಲ ಶೇ.1ರಷ್ಟು ಬಾಕಿ ಇದೆ. ಇದರಲ್ಲಿ ವಿದೇಶಿ ಪ್ರದರ್ಶಕರು 53 ಇದ್ದು, ದೇಶೀಯಕಂಪನಿಗಳು ಅತಿ ಹೆಚ್ಚು423 ಇವೆ. ಆದರೆ, 2019ರಲ್ಲಿ ನಡೆದ 12ನೇ ಆವೃತ್ತಿಗೆ ಹೋಲಿಸಿದರೆ, ಸುಮಾರು 5 ಸಾವಿರ ಚದರ ಮೀಟರ್‌ಗೂ ಹೆಚ್ಚು ಪ್ರದರ್ಶನ ಪ್ರದೇಶಕ್ಕೆಕತ್ತರಿ ಬೀಳಲಿದೆ.
Related Articles
Advertisement
ಆಕರ್ಷಣೆ ಕೇಂದ್ರ ಬಿಂದು: ಫ್ರಾನ್ಸ್ ರಫಾಯಲ್ ಯುದ್ಧ ವಿಮಾನ, ಭಾರತದ ಸೂರ್ಯಕಿರಣ್, ಸಾರಂಗ್, ಬಹುಪಯೋಗಿ ಸುಧಾರಿತ ಯುದ್ಧ ಹೆಲಿಕಾಪ್ಟರ್‌ಗಳಾದ “ಚಿನೂಕ್’ ಮತ್ತು “ಅಪಾಚಿ’ 13ನೇ ಏರೋ ಇಂಡಿಯಾ ಶೋದ ಪ್ರಮುಖ ಆಕರ್ಷಣೆ ಆಗಿರಲಿವೆ. ಇಂಗ್ಲೆಂಡ್‌ನ ಯಾಕೊಲೇವ್ಸ್ ಏರೋಬ್ಯಾಟಿಕ್ ತಂಡ ಭಾಗವಹಿಸುವುದು ಇನ್ನೂ ಖಾತ್ರಿ ಇಲ್ಲ.
ಆತ್ಮನಿರ್ಭರ ಪುಷ್ಟಿ? : ಇದರೊಂದಿಗೆ ದೇಶೀಯಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದೂ ಸ್ವಾಗತಾರ್ಹ ಬೆಳವಣಿಗೆ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ನೀತಿ ಪ್ರೋತ್ಸಾಹದಾಯಕ. ಅದರಂತೆ ರಕ್ಷಣಾಕ್ಷೇತ್ರಕ್ಕೆ ಸಂಬಂಧಿಸಿದ101 ಉಪಕರಣಗಳ ತಯಾರಿಕೆ ಮತ್ತು ಪೂರೈಕೆಕಡ್ಡಾಯವಾಗಿ ದೇಶೀಯ ಕಂಪನಿಗಳಿಗೇ ನೀಡಲು ನಿರ್ಧರಿಸಲಾಗಿದೆ. ಇದು ಹೆಚ್ಚು-ಕಡಿಮೆ4 ಲಕ್ಷಕೋಟಿ ಮೊತ್ತದ್ದಾಗಿದೆ. ಮುಂದಿನ 5 ರಿಂದ 7 ವರ್ಷಗಳಲ್ಲಿ ಹಂತ-ಹಂತವಾಗಿ ಪೂರೈಕೆ ಆಗಲಿದೆ. ಇದರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ, ಲಘು ಯುದ್ಧವಿಮಾನ, ಲಘು ಯುದ್ಧ ಹೆಲಿಕಾಪ್ಟರ್, ಮಾನವ ರಹಿತ ಯುದ್ಧ ವಿಮಾನದಂತಹ ಮುಂದುವರಿದ ತಂತ್ರಜ್ಞಾನಗಳ ಉಪಕರಣಗಳೂ ಇವೆ.
ವಿದೇಶಿ ಕಂಪನಿಗಳ ನೀರಸ ಪ್ರತಿಕ್ರಿಯೆ : 2019ರ ಪ್ರದರ್ಶನದಲ್ಲಿ ಭಾಗವಹಿಸಿದ್ದ ಒಟ್ಟಾರೆ403 ಪ್ರದರ್ಶಕರಲ್ಲಿ ಶೇ.40ರಷ್ಟು ಅಂದರೆ165 ವಿದೇಶಿಗರು ಇದ್ದರು. ಆದರೆ, 2021ರಲ್ಲಿ ಈ ಸಂಖ್ಯೆಕೇವಲ 37ಕ್ಕೆ (ಸದ್ಯದ ಅಂಕಿ-ಅಂಶ)ಕುಸಿದಿದ್ದು,11 ದೇಶಗಳು ಭಾಗವಹಿಸುತ್ತಿವೆ. ಈಗಲೂ ವಿಶ್ವದ ಹಲವು ದೇಶಗಳಲ್ಲಿ ಕೋವಿಡ್ ಹಾವಳಿ ತೀವ್ರವಾಗಿದ್ದು, ಲಂಡನ್, ಫ್ರಾನ್ಸ್, ಜರ್ಮನಿ, ಇಟಲಿ, ಪೋರ್ಚುಗಲ್, ದಕ್ಷಿಣ ಕೊರಿಯಾ ಆಯ್ದ ಭಾಗಗಳಲ್ಲಿ2ನೇ ಹಂತದ ಲಾಕ್‌ಡೌನ್ ಜಾರಿ ಗೊಳಿಸಿವೆ. ಪರಿಸ್ಥಿತಿ ಹೀಗಿರುವಾಗ, ವಿದೇಶಿ ಕಂಪನಿಗಳ ನೀರಸ ಪ್ರತಿಕ್ರಿಯೆ ನಿರೀಕ್ಷಿತವಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.
-ವಿಶೇಷ ವರದಿ