Advertisement

ರೈತರ ಬಡ್ಡಿ ರಿಯಾಯಿತಿಗೆ ಮಿತಿ ಹೇರಿಕೆ

11:59 PM Nov 08, 2020 | mahesh |

ಸಾಗರ: ಸಹಕಾರಿ ಸಂಘಗಳ ಮೂಲಕ ರೈತರು ಕೃಷಿ ಚಟುವಟಿಕೆ ಅಭಿವೃದ್ಧಿಗೆ ಪಡೆಯುವ ಸಾಲದ ಮೇಲಿನ ಬಡ್ಡಿ ಸಹಾಯಧನಕ್ಕೆ ಮಿತಿ ಹೇರಿ ರಾಜ್ಯ ಸರಕಾರವು ಸುತ್ತೋಲೆ ಹೊರಡಿಸಿದೆ.

Advertisement

ಅ. 7ರಂದು ಸರಕಾರವು ಆದೇಶಿಸಿದ್ದು, ಕೃಷಿ ಅಭಿವೃದ್ಧಿ ಗಾಗಿ ಮಧ್ಯಮಾವಧಿ, ದೀರ್ಘಾ ವಧಿ ಸಾಲ ಪಡೆಯುವ ರೈತರ ಕುಟುಂಬ ಕಳೆದ 10 ವರ್ಷ ಗಳಲ್ಲಿ ಒಟ್ಟು 4 ಲಕ್ಷ ರೂ.ಗಳ ಬಡ್ಡಿ ಸಹಾಯಧನ ಪಡೆದಿದ್ದಲ್ಲಿ, ಮುಂದೆ ರಿಯಾಯಿತಿ ಬಡ್ಡಿ ದರದ ಪ್ರಯೋಜನ ಪಡೆಯು ವಂತಿಲ್ಲ ಎಂದು ತಿಳಿಸಲಾಗಿದೆ.

ಪ್ರಾ.ಸ. ಕೃಷಿ ಮತ್ತು ಗ್ರಾ. ಅಭಿವೃದ್ಧಿ ಬ್ಯಾಂಕ್‌ಗಳು 2004ರಿಂದ ಕೃಷಿ ಅಭಿವೃದ್ಧಿಗೆ ದೀರ್ಘಾವಧಿ ಸಾಲ ಒದಗಿಸುತ್ತಿವೆ. ಇದರಡಿ ರೈತರು ವಿವಿಧ ಕೃಷಿ ಉದ್ದೇಶಗಳಿಗೆ ಸಾಲ ಪಡೆಯುತ್ತಿದ್ದಾರೆ. ಈ ಆದೇಶದ ಪ್ರಕಾರ 2004ರ ಎ. 1ರಿಂದ ಈಚೆಗೆ ಸಾಲ ಪಡೆದು, ಬಡ್ಡಿ ಸಹಾಯಧನ 4 ಲಕ್ಷ ರೂ. ಸಂದಾಯವಾಗಿದ್ದರೆ ಅಂಥವರು ಇನ್ನು ಶೇ. 3ರ ರಿಯಾಯಿತಿ ಬಡ್ಡಿ ದರದಿಂದ ವಂಚಿತರಾಗುತ್ತಾರೆ.

ಆದೇಶದಲ್ಲೇ ಗೊಂದಲ
ಸರಕಾರ ಅ. 7ರಂದು ಆದೇಶ ಹೊರಡಿಸಿದ್ದು, ಇದಕ್ಕೆ ಮುನ್ನ ಮಂಜೂರಾದ ಸಾಲಗಳಿಗೂ ಅನ್ವಯವಾಗುತ್ತದೆಯೇ ಎಂಬುದನ್ನು ಸುತ್ತೋಲೆ ಯಲ್ಲಿ ತಿಳಿಸಲಾಗಿಲ್ಲ. ಪಡಿತರ ಚೀಟಿಯಲ್ಲಿ ಹೆಸರು ಇರುವವರನ್ನೆಲ್ಲ ಕೃಷಿ ಕುಟುಂಬದವರು ಎಂದು ಪರಿಗಣಿಸುವುದರಿಂದ ಅವರೆಲ್ಲರ ಬಡ್ಡಿ ಸಹಾಯಧನ 4 ಲಕ್ಷ ರೂ. ಮೀರುವಂತಿಲ್ಲ ಎಂದಿದ್ದು, ಅವರು ಪ್ರತ್ಯೇಕ ಪಡಿತರ ಚೀಟಿ ಹೊಂದಿದ್ದರೆ ಕುಟುಂಬವೆಂದು ಪರಿಗಣಿಸಬೇಕಾ ಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಎಷ್ಟು ವರ್ಷಗಳ ಅವಧಿಯ ಅನಂತರ 4 ಲಕ್ಷ ರೂ. ಷರತ್ತು ಮುಕ್ತಾಯವಾಗುತ್ತದೆ ಎಂಬುದೂ ಸ್ಪಷ್ಟವಾಗಿಲ್ಲ.

ಕೃ.ಪ.ಸ. ಸಂಘಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಪಡೆಯುತ್ತಿರುವ ಬೆಳೆ ಸಾಲಕ್ಕೆ ಈ ಷರತ್ತು ಅನ್ವಯವಾಗುವುದಿಲ್ಲ ಎಂದು ಉಲ್ಲೇಖೀಸಿ ರುವುದು ರೈತರಿಗೆ ಸ್ವಲ್ಪ ನೆಮ್ಮದಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next