Advertisement

ಭಾರತ-ಪಾಕ್ ನಂತೆ ನಾವು ಒಂದು ಪಂದ್ಯ ಆಡಿದ್ದೇವೆ…’, ಠಾಕ್ರೆ ಲೇವಡಿ ಮಾಡಿದ ಏಕನಾಥ್ ಶಿಂಧೆ

05:02 PM Oct 24, 2022 | Team Udayavani |

ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣವು ಥಾಣೆಯಲ್ಲಿ ‘ದೀಪಾವಳಿ ಪಹತ್’ ಕಾರ್ಯಕ್ರಮವನ್ನು ಆಯೋಜಿಸಿದೆ. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ‘ಭಾರತ-ಪಾಕಿಸ್ತಾನದಂತೆಯೇ ನಾವು ಕೂಡ ಮೂರೂವರೆ ತಿಂಗಳ ಹಿಂದೆ ಪಂದ್ಯವನ್ನು ಆಡಿದ್ದೇವೆ. ಅದರಲ್ಲಿ ನಾವು ಗೆದ್ದಿದ್ದೇವೆ ಎಂದರು.

Advertisement

ದೀಪಾವಳಿಯ ದಿನದಂದು ಭಾರತವು ಪಾಕಿಸ್ತಾನದ ವಿರುದ್ಧ ಗೆದ್ದ ಪಂದ್ಯವನ್ನು ನಾವು ಇಂದು ಆಚರಿಸುತ್ತಿದ್ದೇವೆ. ನಿನ್ನೆ ಮ್ಯಾಚ್ ಗೆದ್ದಂತೆ ನಮ್ಮ ‘ಬಾಳಾಸಾಹೇಬರ ಶಿವಸೇನೆ’ ಮೂರೂವರೆ ತಿಂಗಳ ಹಿಂದೆ ಇದೇ ಮ್ಯಾಚ್ ಆಡಿ ಗೆದ್ದಿತ್ತು. ಆ ಪಂದ್ಯವನ್ನು ಮಹಾರಾಷ್ಟ್ರ ಮಾತ್ರವಲ್ಲದೇ ಇಡೀ ದೇಶ ನೋಡಿದೆ. ಜನರನ್ನು ಒಗ್ಗೂಡಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ. ಹಾಗಾಗಿ ನಾವು ಅಧಿಕಾರಕ್ಕೆ ಬಂದ ತಕ್ಷಣ ಮೊದಲು ನಮ್ಮ ಸಂಪ್ರದಾಯ, ಸಂಸ್ಕೃತಿ, ಹಬ್ಬ ಹರಿದಿನಗಳನ್ನು ಆಚರಿಸಲು ಅನುಮತಿ ನೀಡುತ್ತಿದ್ದೇವೆ ಎಂದರು.

ಇದನ್ನೂ ಓದಿ:ಕೊರಗಜ್ಜನ ಮಹಿಮೆಯಿಂದ ಜೀವ ಹೋಗುವ ಸ್ಥಿತಿಯಲ್ಲಿದ್ದ ಮಗು ಬದುಕಿ ಬಂತು; ಉಡುಪಿಯಲ್ಲೊಂದು ಪವಾಡ

ಸ್ಪಷ್ಟವಾಗಿ ಹೇಳುವುದಾದರೆ, ಅಭಿವೃದ್ಧಿಯ ಜೊತೆಗೆ ಈ ವಿಷಯಗಳು ಅವಶ್ಯಕ. ಮನುಷ್ಯನ ಮನಸ್ಸು ಖುಷಿಯಾಗಿದ್ದರೆ ಮುಂದೆ ಸಾಗಬಹುದು. ಈ ರಾಜ್ಯದಲ್ಲಿ ಈಗ ಪರಿವರ್ತನೆಯ ಪರ್ವ ಆರಂಭವಾಗಿದೆ. ಇಂದು ನಾನು ಹೋದಲ್ಲೆಲ್ಲಾ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಈ ವಿಷಯಗಳು ನನಗೆ ತೃಪ್ತಿ ಮತ್ತು ಸಂತೋಷವನ್ನು ಉಂಟು ಮಾಡುತ್ತವೆ. ಇದರ ಫಲಿತಾಂಶ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕಂಡುಬಂದಿದೆ ಎಂದು ಮಹಾ ಸಿಎಂ ಶಿಂಧೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next