Advertisement

ಅವನಂತೆ ನಾನು, ನನ್ನಂತೆ ನೀನು ಇರಬೇಕಾಗಿಲ್ಲ

11:44 PM Mar 23, 2021 | Team Udayavani |

ಖಲೀಲ್‌ ಗಿಬ್ರಾನ್‌ ಹೇಳಿದ ಕಥೆ ಇದು.
ಒಂದು ದಿನ ಒಬ್ಟಾನೊಬ್ಬ ಜಾದೂ ಗಾರ ಒಂದು ಪಟ್ಟಣದಲ್ಲಿ ಪ್ರತ್ಯಕ್ಷನಾದ. ಅಲ್ಲಿನ ಬಾವಿಗೆ ಆತ ತಾನು ತಂದಿದ್ದ ಒಂದು ಪುಡಿಯನ್ನು ಸುರಿದ. ಬಳಿಕ “ಈ ಬಾವಿಯ ನೀರು ಕುಡಿಯುವವರು ಮರುಳರಾಗುತ್ತಾರೆ’ ಎಂದು ಘೋಷಿಸಿ ಮಾಯವಾದ.

Advertisement

ಆ ಪಟ್ಟಣದಲ್ಲಿದ್ದದ್ದು ಕೇವಲ ಎರಡು ಬಾವಿಗಳು. ಒಂದು ಜಾದೂಗಾರ ಮಂಕುಬೂದಿ ಸುರಿದಿದ್ದ ಬಾವಿ, ಇನ್ನೊಂದು ರಾಜನ ಖಾಸಾ ಬಳಕೆಗಾಗಿ ಇದ್ದದ್ದು. ಆಗ ಬಿರು ಬೇಸಗೆ. ಸಾರ್ವಜನಿಕ ಬಳಕೆಗೆ ಇದ್ದದ್ದು ಒಂದೇ ಬಾವಿ. ಹೀಗಾಗಿ ಬಾವಿಯ ನೀರು ಕುಡಿದರೆ ಹುಚ್ಚರಾಗು ತ್ತೇವೆ ಎಂಬುದು ಗೊತ್ತಿ ದ್ದರೂ ಪಟ್ಟಣದ ಜನರು ಕುಡಿಯಲೇ ಬೇಕಾ ಯಿತು. ಮಧ್ಯಾಹ್ನದ ವೇಳೆ ಪಟ್ಟಣದ ಅರೆವಾಸಿ ಜನರು ಮರುಳರಾಗಿದ್ದರು. ಸಂಜೆಯ ಹೊತ್ತಿಗೆ ಇಡೀ ಪಟ್ಟಣ ಹುಚ್ಚು ಗಟ್ಟಿತ್ತು. ಜನರು ತಾವು ಅದುವರೆಗೆ ಮಾಡದ್ದನ್ನೆಲ್ಲ ಮಾಡುತ್ತಿದ್ದರು. ಬೀದಿ ಗಳಲ್ಲಿ ಚೀರಾಡುತ್ತಿದ್ದರು, ಕುಣಿಯು ತ್ತಿದ್ದರು, ಗಹಗಹಿಸಿ ನಗುತ್ತಿದ್ದರು; ಕೆಲವರದು ನೆಗೆತ, ಇನ್ನು ಕೆಲವರದು ಕಾರಣವಿಲ್ಲದ ಓಟ… ಇಡೀ ಪಟ್ಟಣದಲ್ಲಿ ನಂಬಲಸಾಧ್ಯ ಗೌಜು – ಗದ್ದಲ.

ಅರಸ ತನ್ನ ಅರಮನೆಯ ಬಿಸಿಲು ಮಚ್ಚಿನಲ್ಲಿ ನಿಂತು ಎಲ್ಲವನ್ನೂ ನೋಡುತ್ತಿದ್ದ. ಅವನ ಬದಿಯಲ್ಲಿ ರಾಣಿ ಮತ್ತು ಪ್ರಧಾನಮಂತ್ರಿ ನಿಂತಿದ್ದರು. “ನಾವೆಷ್ಟು ಅದೃಷ್ಟಶಾಲಿಗಳು! ನಮಗೆ ಕುಡಿಯಲೆಂದು ಪ್ರತ್ಯೇಕ ಬಾವಿ ಇದೆ. ಇಲ್ಲವಾಗಿದ್ದರೆ ಈ ಮಂದಿಯ ಹಾಗೆ ನಾವೂ ಹುಚ್ಚರಾಗುತ್ತಿದ್ದೆವು…’

ಆದರೆ ದೊರೆಯ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಅರಸ, ಅರಸಿ ಮತ್ತು ಪ್ರಧಾನಿ ತಮ್ಮಂತೆ ಇಲ್ಲದಿರುವು ದನ್ನು ಕಂಡು ಜನರು ಕೂಗಾಡತೊಡಗಿ ದರು, “ಈ ಮೂವರಿಗೆ ಹುಚ್ಚು ಹಿಡಿ ದಿದೆ…’ ಸೈನ್ಯ, ಅಂಗರಕ್ಷಕರು ಕೂಡ ಸಾರ್ವಜನಿಕ ಬಾವಿಯ ನೀರನ್ನೇ ಕುಡಿದ ದ್ದರಿಂದ ರಕ್ಷಣೆಗೆ ಯಾರೂ ಇರಲಿಲ್ಲ.

“ಈಗ ನಮ್ಮ ಮುಂದಿರುವುದು ಒಂದೇ ದಾರಿ. ಊರಿನ ಬಾವಿಯ ನೀರನ್ನು ಕುಡಿದು ನಾವೂ ಮರುಳು ಹಿಡಿಸಿಕೊಳ್ಳುವುದು’. ರಾಜ, ರಾಣಿ ಮತ್ತು ಪ್ರಧಾನಿ ಹಾಗೆಯೇ ಮಾಡಿದರು. ಜನರು ಆನಂದತುಂದಿಲರಾಗಿ, “ಅಬ್ಬ ರಾಜನ ಮನಸ್ಸು ಸರಿಹೋಯಿತು’ ಎಂದು ಗೌಜು ಗದ್ದಲ ಹೆಚ್ಚಿಸಿದರು.

Advertisement

ಯಾವುದು ಸಹಜ, ಯಾವುದು ಅಸಹಜ; ಯಾವುದು ವಾಸ್ತವ, ಯಾವುದು ಕನಸು; ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿ ಸುವುದು ಹೇಗೆ?

ಪ್ರತೀ ವ್ಯಕ್ತಿಯೂ ವಿಭಿನ್ನ, ಅತುಲ್ಯ ಮತ್ತು ಅಪೂರ್ವ. ಯಾವುದೂ ತುಲ್ಯವಲ್ಲ; ಯಾರನ್ನೂ ಯಾರ ಜತೆಗೂ ಹೋಲಿಸಬೇಕಾಗಿಲ್ಲ. ಕಿರಿದಾದುದು ಅದರ ಕಿರಿದುತನದಲ್ಲಿ ಸುಂದರ ವಾಗಿದೆ. ಉದ್ದ ವಾದುದು ಅದರ ಉದ್ದದಲ್ಲಿ ಮೋಹಕ ವಾಗಿದೆ. ಎತ್ತರವಾದದ್ದು ಮೋಡಗಳಿಗೆ ಸನಿಹವಾಗಿದೆ, ಕುಬj ವಾದದ್ದು ಭೂಮಿಗೆ ನಿಕಟವಾಗಿದೆ. ಇದರಲ್ಲಿ ಯಾವುದು ತಪ್ಪು, ಯಾವುದು ಸರಿ?

ಯಾವುದೂ ತಪ್ಪಲ್ಲ – ಇದು ತಾವೋ ಜೀವನ ದೃಷ್ಟಿ.
ಹೋಲಿಕೆಗಳು ಉಂಟಾಗುವುದು ನಮ್ಮ ಮನಸ್ಸಿನಲ್ಲಿ ಮಾತ್ರ. ಗಿಡ ಮರ ಬಳ್ಳಿ, ಪ್ರಾಣಿಪಕ್ಷಿ- ಇವ್ಯಾವುವಕ್ಕೂ ಅಂಥ ಯೋಚನೆ ಇಲ್ಲ. ಹಾಗೆ ಇರುತ್ತಿದ್ದರೆ ಕುಂಟಾಲ ಗಿಡ ತಾನು ತೆಂಗಿನ ಮರ ದಷ್ಟು ಎತ್ತರ ಇಲ್ಲ ಎಂದು ಚಿಂತಿಸುತ್ತ ಯಾವುದಾದರೊಬ್ಬ ಮನಶಾÏಸ್ತ್ರಜ್ಞನ ಬಳಿ ಚಿಕಿತ್ಸೆ ಪಡೆಯಬೇಕಾಗಿತ್ತು. ಗುಬ್ಬಿ ಹಕ್ಕಿ ತಾನು ಪ್ರಾಣಿಯಾಗಿ ಜನಿಸಿಲ್ಲವಲ್ಲ, ಇದು ತನ್ನ ಪೂರ್ವಜನ್ಮದ ಪಾಪದ ಫ‌ಲ ಎಂದು ಕೊರಗುತ್ತ ಇರುತ್ತಿತ್ತು.

ಹಾಗೆಲ್ಲ ಚಿಂತಿಸುತ್ತ ಬನ್ನಪಡುವುದು ನಾವು ಮಾತ್ರ. ಇದರಿಂದ ಪಾರಾಗುವ ಸರಳ ಸೂತ್ರ: ನಾವು ಇರುವ ಹಾಗೆಯೇ ಚೆನ್ನಾಗಿದ್ದೇವೆ ಎಂದು ಸಂತೃಪ್ತಿಯಿಂದ ಇರುವುದು. ಒಂದರ ಹಾಗೆ ಇರುವ ಇನ್ನೊಂದು ಎಲೆಯನ್ನು ಈ ಸೃಷ್ಟಿಯಲ್ಲಿ ಕಾಣಲಾರಿರಿ. ನಾವು ಕೂಡ ಹಾಗೆಯೇ- ಒಬ್ಬರಿಗಿಂತ ಒಬ್ಬರು ಭಿನ್ನ, ಅಪೂರ್ವ. ಅವನ ಹಾಗೆ ನಾನಿಲ್ಲ ಎಂಬುದರಲ್ಲಿ ಅರ್ಥವಿಲ್ಲ ಮತ್ತು ಹಾಗೆ ಯೋಚಿಸುವುದೇ ಎಲ್ಲ ಬೇಗುದಿಗಳ ಮೂಲ. ಅದನ್ನು ಬಿಟ್ಟುಬಿಡೋಣ. ಇರುವುದರಲ್ಲಿ ಸುಖವಾಗಿರೋಣ.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next