ಬದುಕಿನಲ್ಲಿ ನಾವು ಯಾವುದೇ ದಾರಿಯನ್ನು ಆರಿಸಿಕೊಳ್ಳಲಿ; ನಾಯಕ ರಾಗಬೇಕು ಎಂದಾದರೆ ಮಾದರಿ, ಉದಾಹರಣೆಯಾಗಬೇಕು. ಭಾಷಣ, ಒಣಮಾತು, ಬುದ್ಧಿವಂತಿಕೆ, ಕುತಂತ್ರ – ಇದ್ಯಾವುದೂ ನಡೆಯುವುದಿಲ್ಲ. ಮುನ್ನಡೆಸುವುದು ಅಥವಾ ನಾಯಕತ್ವ ವಹಿಸುವುದು ಎಂದರೆ ನಾವು ಬಯಸಿದ ದಿಕ್ಕಿನಲ್ಲಿ ಅಥವಾ ಒಂದು ಗುರಿಯೆಡೆಗೆ ಜನರನ್ನು ನಮ್ಮೊಂದಿಗೆ ಕರೆದೊಯ್ಯು ವುದು. ಇದಾಗಬೇಕು ಎಂದರೆ, ಜನರೇ ನಮ್ಮನ್ನು ಅನುಸರಿಸಿ ಬರುವಂತೆ ಪ್ರೇರಣೆ, ಸ್ಫೂರ್ತಿ ಒದಗಿಸಬೇಕು. ನಮ್ಮನ್ನು ಅನುಸರಿಸುವ ಸ್ಫೂರ್ತಿ ಜನರಲ್ಲಿ ಉಂಟಾದರೆ ಮಾತ್ರ ಅವರು ನಾವು ಬಯಸಿದ್ದಕ್ಕಿಂತಲೂ ಹೆಚ್ಚು ರೀತಿಯಲ್ಲಿ ನಮ್ಮ ಜತೆಗಿರುತ್ತಾರೆ. ಒಂದು ಗುರಿಯನ್ನು ಸಾಧಿಸು ವಂತೆ, ಯಾವುದೋ ಒಂದು ಕೆಲಸವನ್ನು ಮಾಡುವಂತೆ ಸತತವಾಗಿ ಜನರ ಬೆನ್ನು ಹಿಡಿಯಲು ಸಾಧ್ಯವಿಲ್ಲ. ಪರಿಸ್ಥಿತಿ ಹಾಗಿದ್ದರೆ ನಾಯಕನೆನಿಸಿಕೊಳ್ಳುವುದು ಸಾಧ್ಯವಿಲ್ಲ.
ಮನೆಯಲ್ಲಿ ನಮ್ಮ ನಮ್ಮ ಕುಟುಂಬದ ಮಟ್ಟಿಗೂ ಈ ಮಾತು ನಿಜ. ದಿನದ ಇಪ್ಪತ್ತನಾಲ್ಕು ತಾಸು ಕುಟುಂಬ ಸದಸ್ಯ ರನ್ನು ಅಥವಾ ಜನರನ್ನು ಮೇಲ್ವಿಚಾರಣೆ ನಡೆಸುತ್ತ, ಅವರ ಮೇಲೆ ನಿಗಾ ಇರಿಸುವುದು ಅಸಾಧ್ಯ. ನಾವು ನಾಯಕತ್ವ ವಹಿಸಿಕೊಳ್ಳುವ ಸಮುದಾಯದಲ್ಲಿ ಜನಸಂಖ್ಯೆ ದೊಡ್ಡದಾದಂತೆ ನಾವೇ ಮಾದರಿಯಾಗಿ ಮುನ್ನಡೆಸುವುದೊಂದೇ ಮಾರ್ಗ. ಈಗಾಗಲೇ ಆಗಿ ಹೋಗಿರುವ ದೊಡ್ಡ ದೊಡ್ಡ ನಾಯ ಕರನ್ನು ಗಮನಿಸಿ; ಅವರ ಬದುಕು ಒಂದು ಮಾದರಿ ಯಾಗಿರುತ್ತದೆ. ಜನರು ಸ್ವಯಂಸ್ಫೂರ್ತಿಯಿಂದ ಅವರನ್ನು ಅನುಸರಿಸುತ್ತಾರೆ, ಬದುಕಿನಲ್ಲಿ ಅವರನ್ನು ಮಾದರಿಯಾಗಿ ಸ್ವೀಕರಿಸುತ್ತಾರೆ. ಯಾವುದೋ ಒಂದು ಗುರಿಯನ್ನು ಸಾಧಿಸಲು ಪ್ರೇರೇಪಿಸಬೇಕು ಎಂದಾದರೆ ನಮ್ಮ ಅಸ್ತಿತ್ವವೇ ಪ್ರೇರಣದಾಯ ಕವಾಗಿರಬೇಕು. ಹಾಗಾ ದಾಗ ಮಾತ್ರ ನಾಯಕತ್ವ, ಮುಂದಾಳ್ತನ ಎನ್ನುವುದು ಪ್ರಯತ್ನರಹಿತ ಕ್ರಿಯೆಯಾಗಲು ಸಾಧ್ಯ.
ಇವತ್ತಿನ ಸಮಾಜದ ಬಹಳ ದೊಡ್ಡ ಸಮಸ್ಯೆ ಎಂದರೆ ನಾಯಕರು ಹುಟ್ಟಿ ಕೊಳ್ಳು ತ್ತಿಲ್ಲ; ಬದಲಾಗಿ ಮೇಲ್ವಿಚಾರಕರು, ನಿರ್ವಾಹಕರು ಮಾತ್ರ ಇದ್ದಾರೆ. ಇಂಥವರು ಯಾವುದೇ ಕ್ಷೇತ್ರದಲ್ಲಿ ನಾಯಕತ್ವ ವಹಿಸಿಕೊಂಡರೂ ತೊಂದರೆ ತಪ್ಪಿದ್ದಲ್ಲ. ಇಂಥವರೆಲ್ಲರಿಗೂ ಸ್ವಾರ್ಥ ವಿರುತ್ತದೆ – ಕೆಲವರದು ಸಣ್ಣ ಸ್ವಾರ್ಥ, ಇನ್ನು ಕೆಲವರದು ದೊಡ್ಡ ಸ್ವಾರ್ಥ. ಸ್ವಾರ್ಥಪೂರಿತವಾದ ಗುರಿ ವೈಯಕ್ತಿಕ ಮಹತ್ವಾಕಾಂಕ್ಷೆಯಷ್ಟೇ ಆಗಿರುತ್ತದೆ. ಈ ಮಹತ್ವಾಕಾಂಕ್ಷೆ ಎಂಬು ದು ಈಗಾಗಲೇ ಕಂಡಿ ರುವ, ಕೇಳಿರುವ ಒಂದು ಗುರಿಯೇ ಆಗಿರುತ್ತದೆ.
ಆದರೆ ನಾಯಕತ್ವ, ಮುಂದಾಳ್ತನ ಎಂಬುದು ಒಂದು ಸಮುದಾಯ ಅಥವಾ ಜನರ ಸಮೂಹವು ಯಾವು ದನ್ನು ಅಸಾಧ್ಯ ಎಂದು ಭಾವಿಸಿತ್ತೋ ಅಂಥದೊಂದು ಗುರಿ, ಪರಿವರ್ತನೆಯತ್ತ ಮುನ್ನಡೆಸುವುದು. ಜನರಿಗೆ ತಾವು ಈಗಾಗಲೇ ಕಲ್ಪಿಸಿದ್ದನ್ನು ಸಾಧಿಸುವುದಕ್ಕೆ ನಾಯಕನ ಅಗತ್ಯವಿಲ್ಲ. ತಾವು ಕಲ್ಪಿಸಲಾಗದ್ದರ ಕಡೆಗೆ ಕರೆದೊಯ್ಯುವ ನಾಯಕ ಜನರಿಗೆ ಬೇಕು.
ಇದಕ್ಕಾಗಿ ನಾಯಕ ಎನ್ನಿಸಿಕೊಂಡ ವನಿಗೆ ಅತ್ಯದ್ಭುತ ಒಳನೋಟ, ಮುಂಗಾಣೆR, ದರ್ಶನ ಶಕ್ತಿ ಇರಬೇಕಾಗು ತ್ತದೆ. ಜನರು ಕಲ್ಪಿಸಲಾಗದ್ದನ್ನು ಕಾಣುವ ಸಾಮರ್ಥ್ಯ ಇರಬೇಕಾಗುತ್ತದೆ. ಮುಂದಾಳು ಎಂದರೆ ಮರದ ತುತ್ತತುದಿಯಲ್ಲಿ ಕುಳಿತ ಹಕ್ಕಿಯಂತೆ. ಮರದ ಮೇಲೆ ಕುಳಿತಿದ್ದರೂ ಇತರರು ಕಂಡಷ್ಟನ್ನೇ ಕಾಣುವುದು ಮೂರ್ಖತನದ ಪರಮಾವಧಿ. ಅದು ಅಪಹಾಸ್ಯಕ್ಕೆ ವಸ್ತು. ಇತರರು ಕಲ್ಪಿಸಲಾಗದ್ದನ್ನು ಕಲ್ಪಿಸಿ ಕೊಳ್ಳುವ ಸಾಮರ್ಥ್ಯ ನಮ್ಮಲ್ಲಿದ್ದರೆ ಮಾತ್ರ ನಾವು ನೈಜ ಮುಂದಾಳುಗಳಾಗುತ್ತೇವೆ. “ಸಮೀಪ ದೃಷ್ಟಿ’ಯ ನಾಯಕತ್ವ ಅನು ಯಾಯಿಗಳಿಗೂ ಸ್ವತಃ ಮುಂದಾಳುವಿಗೂ ನರಕ ಸದೃಶ ಸ್ಥಿತಿ.
ನಮ್ಮ ಬದುಕು ಮುಖ್ಯ ಎಂದು ಭಾವಿಸುವುದಾದರೆ ನಮ್ಮ ಗ್ರಹಣ ಶಕ್ತಿಯನ್ನು ಬಲಪಡಿಸಿಕೊಳ್ಳಬೇಕು, ಇತರರು ಕಾಣಲಾರದ್ದನ್ನು ದರ್ಶಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು, ಏನೇ ಮಾಡುವುದಿದ್ದರೂ ಅದರ ಬಗ್ಗೆ ಆಳವಾದ ಒಳನೋಟ ಹೊಂದಿರಬೇಕು.
(ಸಾರ ಸಂಗ್ರಹ)