Advertisement

Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು

05:08 PM May 17, 2024 | Team Udayavani |

ಪಣಜಿ: ಇಲ್ಲಿನ ಮಿರಮಾರ್ ಕಡಲತೀರದಲ್ಲಿ ಮಂಗಳವಾರ ರಾತ್ರಿ ಆಘಾತಕಾರಿ ಘಟನೆಯೊಂದು ನಡೆದಿದ್ದು ಕೇರಳದ ಎರ್ನಾಕುಲಂನ ಪ್ರವಾಸಿಗರೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

Advertisement

ಮೃತ ದುರ್ದೈವಿ ಅಖಿಲ್ ವಿಜಯನ್ (35) ಎಂದು ಗುರುತಿಸಲಾಗಿದ್ದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೀಚ್‍ಗೆ ಬಂದಿದ್ದ ವೇಳೆ ಅವಘಡ ನಡೆದಿದೆ. ಅಖಿಲ್ ವಿಜಯನ್ ಮಂಗಳವಾರ ರಾತ್ರಿ 8:30 ರ ವೇಳೆ ಗುಡುಗು ಸಹಿತ ಮಳೆಯಲ್ಲಿ ತಮ್ಮ ಕಾರಿನ ಬಳಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಿಡಿಲಿನ ಆಘಾತಕ್ಕೆ ಅಖಿಲ್ ಪತ್ನಿ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ವಿಜಯನ್ ಮತ್ತು ಅವರೊಂದಿಗಿದ್ದ 7-8 ಜನರ ಗುಂಪು ಸುರಿಯುತ್ತಿರುವ ಮಳೆಯಿಂದ ರಕ್ಷಿಸಿಕೊಳ್ಳಲು ಮೀರಾಮಾರ್ ಬೀಚ್‍ನಿಂದ ತಮ್ಮ ಕಾರಿನ ಬಳಿ ಹೋಗುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಸಿಡಿಲು ಬಡಿದ ಪರಿಣಾಮ ನೆಲದ ಮೇಲೆ ಕುಸಿದಿದ್ದಾರೆ. ವಿಜಯನ್ ರವರನ್ನು ಕೂಡಲೇ 108 ಆಂಬ್ಯುಲೆನ್ಸ್‍ಗೆ ಕರೆ ಮಾಡಿ ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲಿಂಗೆ ಕರೆದೊಯ್ಯಲಾಯಿತು.ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ. ಸಂಜೆ ವೇಳೆ ಆಗಾಗ ಮಳೆ ಸುರಿಯುತ್ತಿರುವುದರಿಂದ ಬಿಸಿಲಿನ ತಾಪದಿಂದ ಬಳಲುತ್ತಿರುವ ಜನತೆಗೆ ಮಳೆರಾಯ ಕೊಂಚ ತಂಪೆರೆದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next