Advertisement

ಬಡ-ನಿರ್ಗತಿಕರಿಗೆ ಬೆಳಕು ಶಿವಕುಮಾರ ಸ್ವಾಮೀಜಿ

11:39 AM Sep 08, 2018 | |

ಬೀದರ: ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅನ್ನ, ಅರಿವೆ, ಆಸರೆಯೊಂದಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಲಕ್ಷಾಂತರ ಬಡ, ನಿರ್ಗತಿಕ ಮಕ್ಕಳ ಬಾಳಲ್ಲಿ ಬೆಳಕು ಮೂಡಿಸಿದ್ದಾರೆ ಎಂದು ಪತ್ರಕರ್ತ ನಾಗೇಶ ಪ್ರಭಾ ಹೇಳಿದರು.

Advertisement

ನೌಬಾದ್‌ನ ಬಸವ ಮಂಟಪದಲ್ಲಿ ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳು ಮತ್ತು ಹಿತೈಶಿಗಳ ಸಂಘ, ಶರಣ ಸಂಸ್ಕೃತಿ ಪ್ರಸಾರ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ್ದ ಶತಮಾನದ ಸಂತ ಶಿವಕುಮಾರ ಸ್ವಾಮೀಜಿ ಕುರಿತ ವಿಚಾರ ಸಂಕಿರಣ
ಉದ್ಘಾಟಿಸಿ ಅವರು ಮಾತನಾಡಿದರು. 

ಸ್ವಾಮೀಜಿ ಅವರ ಕೃಪೆಯಿಂದಾಗಿ ಅಸಂಖ್ಯಾತ ಜನ ಬದುಕು ಕಟ್ಟಿಕೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿ ಇದ್ದಾರೆ. ಸ್ವಾಮೀಜಿ ಈ ಶತಮಾನದ ಅಪರೂಪದ ಮಹಾಸ್ವಾಮಿಗಳು ಆಗಿದ್ದಾರೆ. ಅವರ ಕಾರ್ಯಗಳನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಯಾವುದೇ ಫಲಾಪೇಕ್ಷೆಯಿಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಶಿವಕುಮಾರ ಪಾಟೀಲ ಮಾತನಾಡಿ, ಸಿದ್ಧಗಂಗಾ ಮಠ ಸರ್ವ ಧರ್ಮ ಸಮನ್ವಯದ ಕೇಂದ್ರವಾಗಿದೆ. ಬಡವರು, ಅನಾಥ ಮಕ್ಕಳ ಆಶ್ರಯ ತಾಣವಾಗಿದೆ. ಸರ್ಕಾರದ ಕಾರ್ಯವನ್ನು ಶಿವಕುಮಾರ ಸ್ವಾಮೀಜಿ ಮಾಡುತ್ತಿದ್ದಾರೆ. ಅವರು ಭಾರತ ರತ್ನ ಪ್ರಶಸ್ತಿಗೆ ಎಲ್ಲ ರೀತಿಯಿಂದಲೂ ಅರ್ಹರಾಗಿದ್ದಾರೆ. ಅವರಿಗೆ ಪ್ರಶಸ್ತಿ ನೀಡಿದರೆ ಭಾರತರತ್ನದ ಗೌರವವೇ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಅವರ ಜೀವಿತಾವಧಿಯಲ್ಲೇ ಪ್ರಶಸ್ತಿ ನೀಡಿದರೆ ಅದಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಿದ್ಧಗಂಗಾ ಮಠದ ಸಾವಿರಾರು ಹಳೆಯ ವಿದ್ಯಾರ್ಥಿಗಳು ಇದ್ದಾರೆ. ಎಲ್ಲರೂ ಒಂದುಗೂಡಿ ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳ ಸಂಘದ ಜಿಲ್ಲಾ ಘಟಕ ಅಸ್ತಿತ್ವಕ್ಕೆ ತರಲಾಗಿದೆ. ಶಿವಕುಮಾರ ಸ್ವಾಮೀಜಿ ಅವರ ಆಶಯದಂತೆ ಎರಡು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ, ಸಾಹಿತಿ ಶ್ರೀದೇವಿ ಹೂಗಾರ, ಕಲ್ಯಾಣರಾವ್‌ ಚಳಕಾಪುರೆ ಮಾತನಾಡಿದರು. ಶರಣ ಸಂಸ್ಕೃತಿ ಪ್ರಸಾರ ವೇದಿಕೆ ಅಧ್ಯಕ್ಷ ಸಿದ್ರಾಮಪ್ಪ ಕಪಲಾಪುರ, ದೇವೇಂದ್ರ ಕೊಳಾರ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next