Advertisement

ಅನ್ಯರ ಪಿತೂರಿಗೆ ಸಿಲುಕದಿರಿ:ಲಿಂಗಾಯತರಿಗೆ ಬಿಎಸ್‌ವೈ ಕರೆ

12:51 PM Jul 12, 2018 | Team Udayavani |

ಬೆಂಗಳೂರು: ಅನ್ಯರ ಪಿತೂರಿಗೆ ವೀರಶೈವ ಲಿಂಗಾಯತ ಸಮುದಾಯ ಸಿಲುಕಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪ ತಿಳಿಸಿದರು.

Advertisement

ಅಖೀಲ ಭಾರತ ವೀರಶೈವ ಮಹಾಸಭಾದಿಂದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ವೀರಶೈವ -ಲಿಂಗಾಯತ ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅನ್ಯ ರೀತಿಯ ಗೊಂದಲ ಉಂಟು ಮಾಡಿ ಪಿತೂರಿ ನಡೆಸಿ ನಮ್ಮ ನಮ್ಮ ನಡುವೆಯೇ ಒಡಕು ಮೂಡಿಸಿದ ಪರಿಣಾಮ ಸಮುದಾಯದ ಕೇವಲ 58 ಶಾಸಕರು ಆಯ್ಕೆ ಆಗಿದ್ದೇವೆ. ಒಂದು ವೇಳೆ ನಮ್ಮಲ್ಲಿ ಒಗ್ಗಟ್ಟು ಇದಿದ್ದರೇ ಇವತ್ತು 78 ಶಾಸಕರು ಇರುತ್ತಿದ್ದೇವೆ ಎಂದು ತಿಳಿಸಿದರು.

ಪ್ರತ್ಯೇಕ ಧರ್ಮದ ವಿಚಾರ ಪ್ರಸ್ತಾಪದ ಕ್ಷಣದಿಂದ ಶಿವಕುಮಾರ ಸ್ವಾಮೀಜಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿರ್ಧಾರಕ್ಕೆ ನಾವು ಬದ್ಧರಾಗಿ ಇದ್ದಿದ್ದರಿಂದ ಇಷ್ಟೊಂದು ಒಗ್ಗಟ್ಟು ಉಳಿದುಕೊಂಡಿದೆ. ಹಿಂದೆ ನಡೆದ ತಪ್ಪುಗಳನ್ನು ತಿದ್ದಿಕೊಂಡು ವೀರಶೈವ- ಲಿಂಗಾಯಿತರು ಒಂದೇ ಎಂದುಕೊಂಡು ನಮ್ಮ ಶಕ್ತಿ ಹೆಚ್ಚಿಸಿಕೊಳ್ಳೋಣ ಎಂದರು.

ಶಾಸಕಿ ಲಕ್ಷ್ಮಿ ಹೆಬ್ಟಾಳ್ಕರ್‌ ಮಾತನಾಡಿದರು. ಇದೇ ವೇಳೆ ವೀರಶೈವ ಲಿಂಗಾಯತ ಸಮುದಾಯದಿಂದ ಆಯ್ಕೆಯಾದ ಸಚಿವರು ಹಾಗೂ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ನಿಕಟಪೂರ್ವ ಅಧ್ಯಕ್ಷ ಡಾ. ಭೀಮಣ್ಣ ಖಂಡ್ರೆ, ರಾಜ್ಯ ಘಟಕ ಅಧ್ಯಕ್ಷ ಎನ್‌. ತಿಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ,ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next