Advertisement
ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದಿಂದ ನಗರದ ಸಿದ್ಧಾರೂಢ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಶಾಲೆಗೊಂದು ಸಂಗೀತ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಹೆಚ್ಚು ಸಂಗೀತ ಆಲಿಸಬೇಕು. ಕೇವಲ ಫಲಿತಾಂಶ ತೆಗೆಯುವ ಯಂತ್ರವಾಗದೆ ಸಹಪಠ್ಯ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಬೆಳಗುವಜ್ಯೋತಿಯಾಗಬೇಕು. ಮಕ್ಕಳಲ್ಲಿ ಸಂಗೀತ ಕಲೆ ಇದ್ದರೆ ಪಾಲಕರು ಅದನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ
ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಸಂಗೀತಮಯ ವಾತಾವರಣ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಸಂಘದ ಗೌರವಾಧ್ಯಕ್ಷ ಪ್ರೊ| ದೇವೇಂದ್ರ ಕಮಲ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಚಾರ್ಯ ಮಲ್ಲಿನಾಥ ಮಠಪತಿ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು. ಶಿವಾನಂದ ಮಲ್ಲಾ ವಂದಿಸಿದರು. ವಿಶ್ವೇಶ್ವರ ಹಿರೇಮಠ, ಶಾಂಭವಿ ಕೋನಗುತ್ತಿ, ಮಡಿವಾಳಯ್ಯ ಸಾಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಿ.ಎಸ್. ಬಿರಾದಾರ, ನಿರಂಜನ ಸ್ವಾಮಿ, ಸುರೇಶ ಚಿಟಗುಪ್ಪಕರ್, ರಾಮರಾವ್ ಮಾನಕರ, ಶಿವಶಂಕರ ಪಾಟೀಲ, ನೂತನ್ ಎಡ್ವರ್ಡ್,
ಗುಂಡಪ್ಪ ಸಂಗೀತ ಮತ್ತಿತರರು ಇದ್ದರು.