Advertisement

ಮೌನ ಬೇಡ, ಬಾಯಿ ಬಿಡಿ

03:30 AM Jul 13, 2017 | Karthik A |

ಹೊಸದಿಲ್ಲಿ: ಕಳಂಕಿತ ರಾಜಕಾರಣಿಗಳನ್ನು ರಾಜಕೀಯದಿಂದ ಜೀವಿತಾವಧಿ ನಿಷೇಧ ಹೇರಬೇಕು ಎಂಬ ವಿಷಯದಲ್ಲಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿದೆ. ಭ್ರಷ್ಟಾಚಾರ ಸೇರಿದಂತೆ ಇತರೆ ಪ್ರಕರಣಗಳಲ್ಲಿ ರಾಜಕಾರಣಿಯೊಬ್ಬರು ದೋಷಿ ಎಂದು ಸಾಬೀತಾದ ಬಳಿಕ ಮತ್ತೆ ರಾಜಕಾರಣಕ್ಕೆ ಬರಲು ಅವಕಾಶ ಕೊಡಬಾರದು ಎಂದು ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾ| ರಂಜನ್‌ ಗೊಗೊಯ್‌ ಮತ್ತು ನ್ಯಾ| ನವೀನ್‌ ಸಿನ್ಹಾ ಅವರಿದ್ದ ದ್ವಿಸದಸ್ಯ ಪೀಠ, ಚುನಾವಣಾ ಆಯೋಗದ ‘ಮೌನ’ವನ್ನು ಪ್ರಶ್ನಿಸಿದೆ.

Advertisement

ಭಾರತದ ನಾಗರಿಕರೊಬ್ಬರು ಕಳಂಕಿತ ರಾಜಕಾರಣಿಗಳಿಗೆ ಜೀವಿತಾವಧಿ ನಿಷೇಧ ಹೇರಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಸಂಬಂಧ ನೀವು ಯಾವುದೇ ಉತ್ತರ ನೀಡುತ್ತಿಲ್ಲ. ನಿಮ್ಮ ಮೌನವನ್ನೇ ನಾವು ಉತ್ತರ ಎಂದು ಭಾವಿಸಲ್ಲ. ನೀವು ‘ಹೌದು’ ಅಥವಾ “ಇಲ್ಲ’ ಎಂದು ಉತ್ತರ ಕೊಡಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿತು. ಹೋಗಲಿ, ನಿಮಗೆ ಇಂಥ ನಿರ್ಧಾರ ತೆಗೆದುಕೊಳ್ಳಲು ಶಾಸಕಾಂಗ ಅಡ್ಡಿ ಮಾಡುತ್ತಿದ್ದರೆ ಹೇಳಿ, ನಾವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದಕ್ಕೂ ಮಿಗಿಲಾಗಿ ನಿಮಗೆ ಈ ಬಗ್ಗೆ ನಿರ್ಧರಿಸುವುದು ಕಷ್ಟವಾಗಿದ್ದರೆ, ಯಾವುದೇ ಆತಂಕ ಬೇಡ, ನಿರಾಳವಾಗಿಯೇ ಉತ್ತರ ಕೊಡಿ ಎಂದು ಹೇಳಿತು.

ಈ ಮಧ್ಯೆ ಅರ್ಜಿ ಸಲ್ಲಿಸಿದ್ದ ವಕೀಲ ಅಶ್ವಿ‌ನಿ ಕುಮಾರ್‌ ಉಪಾಧ್ಯಾಯ ಅವರು, ಕೇಂದ್ರ ಚುನಾವಣಾ ಆಯೋಗ ಈ ಹಿಂದೆಯೇ ಅಪರಾಧಿ ರಾಜಕಾರಣಿಗಳನ್ನು ಜೀವಿತಾವಧಿ ನಿಷೇಧಿಸುವ ಬಗ್ಗೆ ತನ್ನ ಅಭಿಪ್ರಾಯ ಹೇಳಿದೆ. ಆಯೋಗವೇ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ಬಗ್ಗೆ ಉಲ್ಲೇಖೀಸಲಾಗಿದೆ ಎಂದು ಕೋರ್ಟ್‌ ಗಮನಕ್ಕೆ ತಂದರು. ಆಗ ಕೋರ್ಟ್‌ ನೀವು ಜೀವಿತಾವಧಿ ನಿಷೇಧಕ್ಕೆ ಬೆಂಬಲ ನೀಡುತ್ತೀರಾ ಎಂದು ಖಡಕ್ಕಾಗಿ ಪ್ರಶ್ನಿಸಿತು. ಜತೆಗೆ ಈ ಬಗ್ಗೆ ಕೇಂದ್ರ ಸರಕಾರವನ್ನು ಸಂಪರ್ಕಿಸಿದ್ದೀರಾ ಎಂದು ಕೇಳಿದಾಗ, ಹಾಜರಿದ್ದ ಆಯೋಗದ ಪರ ವಕೀಲರು ಇಲ್ಲವೆಂದರು. ಆಗಲೂ ಕೋರ್ಟ್‌, ಈ ವಿಚಾರದಲ್ಲಿ ನೀವು ಮೌನದಿಂದ ಇರಲು ಸಾಧ್ಯವೇ ಇಲ್ಲ ಎಂದಿತು. ಜತೆಗೆ, ಈ ಬಗ್ಗೆ ನಿರ್ಧರಿಸಲು ನಾವು ಉತ್ತರಾದಾಯಿತ್ವ ಹೊಂದಿಲ್ಲ ಎಂದರಲ್ಲದೇ, ಹೊಸ ಅಫಿಡವಿಟ್‌ ಸಲ್ಲಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next