Advertisement

ಬದಲಾದ ಜೀವನ ಶೈಲಿ: ನಿಯಂತ್ರಣದಲ್ಲಿರಲಿ ಮಧುಮೇಹ

09:56 AM Dec 09, 2020 | Nagendra Trasi |

ಹಿಂದೆಲ್ಲ ವಯಸ್ಸಾದವರಿಗೆ ಬರುತ್ತಿದ್ದ ಮಧುಮೇಹ ಕಾಯಿಲೆಗೆ ಇಂದು ಸಣ್ಣ ವಯಸ್ಸಿನವರೇ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಬದಲಾದ ಜೀವನ ಶೈಲಿ, ಆಹಾರ ಕ್ರಮ. ಸಿಹಿ ತಿನ್ನುವುದನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಆದರೆ ಮಧುಮೇಹದ ಕಾರಣದಿಂದ ಬೇಕಿದ್ದರೂ ತಿನ್ನಲು ಸಾಧ್ಯವಿಲ್ಲ ಎಂದು ಕೊರಗುವವರು ಅನೇಕ ಮಂದಿ. ಆದರೆ ಕೆಲವೊಂದು ಆಹಾರಗಳನ್ನು ಸೇವಿಸುತ್ತ ಬಂದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

Advertisement

ಅವುಗಳೆಂದರೆ; ಮೊಟ್ಟೆ
ಇದರ ಬಿಳಿ ಭಾಗದಲ್ಲಿ ಹೆಚ್ಚಿನ ಪ್ರೊಟೀನ್‌ ಅಂಶ ಇರುವುದರಿಂದ ದೇಹಕ್ಕೆ ಬೇಕಾದ ಪ್ರೊಟೀನ್‌ ದೊರೆಯುತ್ತದೆ. ಇದರೊಂದಿಗೆ ಸಕ್ಕರೆ ಕಾಯಿಲೆಯೂ
ನಿಯಂತ್ರಣದಲ್ಲಿಡುತ್ತದೆ.

ಸೌತೆಕಾಯಿ
ಇದರಲ್ಲಿರುವ ನೀರಿನಾಂಶ ಮಧುಮೇಹಿಗಳಿಗೆ ಅತ್ಯುತ್ತಮ. ಇದು ಹಸಿವನ್ನು ನಿಯಂತ್ರಿಸಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

ಬೆಂಡೆಕಾಯಿ
ಇದರಲ್ಲಿರುವ ನಾರಿನಾಂಶ, ಸತು, ಕ್ಯಾಲ್ಸಿಯಂ, ರಿಬೊಫ್ಲೆವಿನ್‌, ಫಾಲಿಕ್‌ ಆ್ಯಸಿಡ್‌, ವಿಟಮಿನ್‌ ಸಿ, ಬಿ6, ಎಥೈಮಿನ್‌, ಮೆಗ್ನಿಶಿಯಂ ಸಹಿತ ಹಲವು
ಪೋಷಕಾಂಶಗಳಿವೆ. ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

ಟೊಮೆಟೋ
ಇದು ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು, ಇದರಲ್ಲಿರುವ ಮಿನರಲ್‌ ಕ್ರೋಮಿಯಂ ದೇಹದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next