ಮುಂಬಯಿ : ಶಿವ ಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅವರ ಅಯೋಧ್ಯಾ ಭೇಟಿಗೆ ಮುನ್ನವೇ ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್ ಅವರು ಇಂದು ಶುಕ್ರವಾರ, “ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವವರಿಗೆ ಈ ದೇಶದಲ್ಲಿ ನಡೆದಾಡುವುದೇ ಕಷ್ಟವಾದೀತು’ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸವನ್ನು ಉಲ್ಲೇಖೀಸಿದ ರಾವತ್, “ನಾವು ಬಾಬರಿ ಮಸೀದಿಯನ್ನು ಕೇವಲ 17 ನಿಮಿಷಗಳಲ್ಲಿ ಧ್ವಂಸ ಮಾಡಿದ್ದೇವೆ; ಅಂತಿರುವಾಗ ಅಲ್ಲಿ ರಾಮ ಮಂದಿರ ನಿರ್ಮಿಸುವುದಕ್ಕೆ ಕಾನೂನು ಪಾಸು ಮಾಡಲು ಎಷ್ಟು ಕಾಲ ಬೇಕು?” ಎಂದು ಪ್ರಶ್ನಿಸಿದರು.
“ಭಾರತೀಯ ಜನತಾ ಪಕ್ಷ ಉತ್ತರ ಪ್ರದೇಶದಲ್ಲಿ, ಕೇಂದ್ರದಲ್ಲಿ ಮತ್ತು ರಾಷ್ಟ್ರಪತಿ ಭವನದಲ್ಲಿ ಅಧಿಕಾರದಲ್ಲಿದೆ. ಆದುದರಿಂದ ಸಾಧ್ಯವಿರುವಷ್ಟು ಬೇಗನೆ ಆಳುವ ಬಿಜೆಪಿ ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ತರಬೇಕು’ ಎಂದು
ಆಗ್ರಹಿಸಿದರು.