ಚಂಡೀಗಢ: ಆಸ್ಟ್ರೇಲಿಯ ವಿರುದ್ಧದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶುಭಮನ್ ಗಿಲ… ಬ್ಯಾಟಿಂಗ್ ಯಶಸ್ಸಿನ ಗುಟ್ಟನ್ನು ಬಿಚ್ಚಿದ್ದಾರೆ ತಂದೆ ಲಖ್ಖೀದರ್‌ರ್.
ಶುಭಮನ್ 9ನೇ ವರ್ಷದಿಂದಲೇ ದಿನಕ್ಕೆ 1,500 ಶಾರ್ಟ್ ಪಿಚ್ ಎಸೆತ ಗಳನ್ನು ಎದುರಿಸುವ ಮೂಲಕ ಕೌಶಲವನ್ನು ವೃದ್ಧಿಸಿಕೊಂಡ ಆಟಗಾರ. ದಿನಂಪ್ರತಿ ಮ್ಯಾಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ಗಿಲ್, ಕ್ರಿಕೆಟ್ ಸ್ಟಂಪ್ ಅನ್ನು ಬ್ಯಾಟ್ ರೀತಿಯಲ್ಲಿ ಬಳಸುತ್ತಿದ್ದ. ಮ್ಯಾಟ್ ಮೇಲೆ ಬಿದ್ದ ಚೆಂಡು ವೇಗವಾಗಿ ಚಲಿಸುವುದರಿಂದ ಬ್ಯಾಟ್ ಮಧ್ಯಭಾಗದಿಂದ ಚೆಂಡನ್ನು ಹೊಡೆಯುವುದನ್ನು ಅಭ್ಯಾಸ ಮಾಡಿ ಕೊಳ್ಳುವುದು ಅವನ ಉದ್ದೇಶ ವಾಗಿತ್ತು. ಇದರಿಂದ ವೇಗದ ಬೌಲರ್‌ಗಳನ್ನು ದಿಟ್ಟ ರೀತಿಯಲ್ಲಿ ಎದುರಿಸಲು ಸಾಧ್ಯವಿತ್ತು. ಆಸ್ಟ್ರೇಲಿಯ ಸರಣಿಯ ಯಶಸ್ಸಿಗೆ ಇದೂ ಒಂದು ಕಾರಣ ಎಂದು ಲಖ್ಖೀದರ್ ಹೇಳಿದರು.
ತಂದೆಯೇ ಮೊದಲ ಕೋಚ್ :
ತಂದೆ ಲಖ್ಖೀದರ್ ಸಿಂಗ್ ಅವರೇ ಶುಭಮನ್ ಅವರ ಮೊದಲ ಕೋಚ್. ಲಖೀÌಂದರ್ ವೃತ್ತಿಪರ ಕ್ರಿಕೆಟಿಗರಾಗಿರಲಿಲ್ಲ. ಆದರೆ ಇವರ ಕೋಚಿಂಗ್ ಮಾತ್ರ ಉನ್ನತ ಮಟ್ಟದ್ದಾಗಿತ್ತು. ಶುಭಮನ್ ಬಾಲ್ಯ ದಿಂದಲೇ ಪ್ಲ್ರಾಸ್ಟಿಕ್ ಬ್ಯಾಟ್‌ನತ್ತ ಹೆಚ್ಚಿನ ಒಲವು ತೋರುತ್ತಿದ್ದುದನ್ನು ಮನ ಗಂಡ ಲಖೀÌಂದರ್, ಮಗನ ಕ್ರಿಕೆಟ್ ಆಸಕ್ತಿಯನ್ನು ಗುರುತಿಸಿದರು.
ಮೊಹಾಲಿಯಿಂದ 300 ಕಿ.ಮೀ. ದೂರದ ಹಳ್ಳಿಯೊಂದರಲ್ಲಿ ಶುಭಮನ್ ಜನನವಾಗಿತ್ತು. ಆದರೆ ಇಲ್ಲಿ ಯಾವುದೇ ಮೂಲಭೂತ ಕ್ರಿಕೆಟ್ ಸೌಲಭ್ಯವಿಲ್ಲದ ಕಾರಣ ಮೊಹಾಲಿಗೆ ಬರುವುದು ಅನಿವಾರ್ಯವಾಯಿತು. “ಮೊಹಾಲಿ ಕ್ರಿಕೆಟ್ ಅಕಾಡೆಮಿ’ ಗಿಲ್ ಯಶಸ್ಸಿನ ಮೊದಲ ಮೆಟ್ಟಿಲೆನಿಸಿತು.