ಲಾಕ್ ಡೌನ್ ಮುಗಿದು ಆಗಲೇ ತಿಂಗಳಾಗುತ್ತಾ ಬಂತು. ಆದರೆ, ಪಿ. ಜಿ ಗಳಿಗೆಬರಲು, ಮೂರ್ನಾಲ್ಕು ಜನರಒಟ್ಟಿಗೆ ಉಳಿಯಲುಹೆಚ್ಚಿನವರು ಸಿದ್ಧರಿಲ್ಲ. ಹಾಗಾಗಿ ರೂಮಿನಲ್ಲಿ ನಾನೊಬ್ಬಳೇ. ವಿಕೆಂಡ್ ಬೇರೆ. ಏನ್ ಮಾಡೋದುಅಂತ ಯೋಚ್ನೆ ಮಾಡಿ ಮಾಡಿಸಾಕಾಯ್ತು .
ಒಬ್ಬಳೇ ಇರೋದು ಅಂದ್ರೆ ನಂಗೆ ಆಗಿಬರಲ್ಲ. ಆದರೀಗ ಅದು ಅನಿವಾರ್ಯ. ಸರಿ, ಮೊದಲು ಬಟ್ಟೆ ವಾಷ್ ಮಾಡಿ ಆಮೇಲೆ ಏನಾದ್ರು ಮಾಡೋಣ ಅಂದ್ಕೊಂಡು, ಇದ್ದಬಿದ್ದ ಬಟ್ಟೆಯನ್ನೆಲ್ಲಾ ಬಕೆಟ್‌ನಲ್ಲಿ ತುಂಬಿಸಿ, ಟೆರೇಸ್ ಮೇಲೆ ಹೋಗಿ ಬಟ್ಟೆ ತೊಳೆದು ಒಣಗಲು ಹಾಕಿ, ಬಂದು ಬೆಡ್ ಮೇಲೆಕೂರುವಷ್ಟರಲ್ಲಿ ಊಫ್… ಸುಸ್ತಾಗೋಯ್ತು . ಅರ್ಧ ಗಂಟೆ ರೆಸ್ಟ್ ಮಾಡಿ, ಬಟ್ಟೆಕಥೆಯೇನೋ ಮುಗೀತು. ಮತ್ತೇನ್ ಮಾಡೋಣ ಅಂದ್ಕೊಂಡಾಗ ನೆನಪಾಗಿದ್ದು, ಬೀಗ ಹಾಕಿ ಇಟ್ಟಿದ್ದಕಬೋರ್ಡ್. ಅದನ್ನು ಓಪನ್ ಮಾಡಿದ್ದೇ ತಡ; ಓಹ್, ಇಲ್ಲಿ ಸಾಕಷ್ಟು ಮಧುರ ನೆನಪುಗಳಿವೆ ಅನ್ನಿಸಿಬಿಡ್ತು.
ಮೊದಲ ಬಾರಿ ಮಲ್ಲೇಶ್ವರಂನ ಬೀದಿಯಲ್ಲಿ ಸುತ್ತಾಡಿ ತಂದ ಚಂದದ ಬಳೆಗಳುಎಲ್ಲೋ ಟ್ರಿಪ್ ಹೋದಾಗ ಇಷ್ಟವಾಯ್ತು ಅಂತ ತಂದಕಾಲಿನ ಗೆಜ್ಜೆ, ಬೆರಳುಗಳಿಗೆ ಹಾಕ್ಬೇಕು ಅಂತ ತಂದ ಫಿಂಗರ್ ರಿಂಗ್ಸ್, ಸಾಲಾಗಿ ಜೋಡಿಸಿ ಟ್ಟಿರೋಕಿವಿಯೋಲೆ, ಒಂದಕ್ಷರವನ್ನೂ ಬರೆಯದೇ ಇರುವ ಪುಟ್ಟದಾದ ಡೈರಿ… ಹೀಗೆ ಏನೇನೋ ಚಂದದ ವಸ್ತುಗಳಿವೆ ಈ ಪುಟ್ಟ
ಕಬೋರ್ಡ್ ನಲ್ಲಿ. ಹೋದಲ್ಲೆಲ್ಲಾಇಷ್ಟವಾಗಿದ್ದನ್ನೆಲ್ಲಾ ತಂದಿಡೋ ನನ್ನ ಖಯಾಲಿಗೆಕಬೋರ್ಡ್ ತುಂಬಿ ಹೋಗಿದೆ. ಅವುಗಳ ಮೇಲೆಲ್ಲಾ ಕೈಯಾಡಿ ಸಿದ್ರೆ ಅದೆಷ್ಟು ಖುಷಿಯಾಗುತ್ತೆ ಗೊತ್ತಾ..? ಇವನ್ನೆಲ್ಲಾ ನೋಡ್ತಾ ಇದ್ದಾಗಲೇ ಮತ್ತೂಂದುಕಡೆ ಜೋಡಿಸಲಾಗಿದ್ದ ಬಳೆಗಳು ಕಾಣಿಸಿದವು. “”ಯಾಕೇ ನಮ್ಮನ್ನೆಲ್ಲ ಹೀಗೆತಂದುಕೂಡಿಹಾಕಿದ್ದಿಯಾ..? ಕೈಗೆ ಹಾಕ್ಕೊಳಲ್ಲ ಅಂದಮೇಲೆ ಮತ್ಯಾವ್ ಚಂದಕ್ಕೆ ತಗೊಂಡು ಬಂದೆ? ಯಾವಾಗ್ಲೆ ನಮ್ಮನ್ನುಧರಿಸುವುದು? ನೀನು ಹೀಗೆಮಾಡಿದ್ರೆ ಬೇಜಾರಾಗಲ್ವಾ ಹೇಳು…” ಅಂದಂತಾಯಿತು. ಅವನ್ನೆಲ್ಲಾ ಒಮ್ಮೆ ಮೃದುವಾಗಿ ನೇವರಿಸಿ, ಒಂದೊಂದನ್ನೂ ಎರಡು- ಮೂರು ನಿಮಿಷ ಧರಿಸಿ ಖುಷಿಪಟ್ಟೆ. ಹೀಗೆ ಮಾಡುವ ಮೂಲಕ, ಅದೇ ಮೊದಲ ಬಾರಿಗೆ ಜೀವ ಇಲ್ದೆ ಇರೋ ವಸ್ತುಗಳಿಗೆಲ್ಲಾ ಜೀವ ತುಂಬೋ ಪ್ರಯತ್ನ ಮಾಡ್ತಾ ಇದ್ದೆ. ಈ ಕ್ಷಣ ಒಂದ್ಸಲ ಹಾಗೇ ನಿಂತುಬಿಡಲಿ ಅನ್ನಿಸಿಬಿಡ್ತು. ಆದರೆ,ಕಾಲ ತನ್ನಷ್ಟಕ್ಕೆ ತಾನು ಓಡುತ್ತಲೇ ಇತ್ತು. ಹೀಗಿದ್ದಾಗಲೇ, ಹೊರಗಡೆ ಮಳೆ ಹನಿಗಳು ಬೀಳತೊಡಗಿದ ಸದ್ದುಕೇಳಿಸಿತು. ಅವುಗಳನ್ನುಬೊಗಸೆಯಲ್ಲಿ ಹಿಡಿಯುವ ಆಸೆಯಾಗಿ ಹೊರಗೆ ಓಡಿಬಂದೆ.
-ಮೇಘಾ ಹೆಗಡೆ