Advertisement

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

09:23 PM Sep 22, 2020 | Suhan S |

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಬ್ರಹಾಂ ಲಿಂಕನ್ನನ್ನು ಶತಾಯ ಗತಾಯ ಸೋಲಿಸಲೇಬೇಕೆಂದು ವಿರೋಧಿಗಳು ಪಣತೊಟ್ಟಿದ್ದರು. ಅವನ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಅವರು ನಿರ್ಧರಿಸಿದರು. ಆತನ ಪೂರ್ವಾಪರ ಜಾಲಾಡಲಾಯಿತು. ಅವನ ಅದುವರೆಗಿನ ವೈಫ‌ಲ್ಯಗಳನ್ನು ಪಟ್ಟಿ ಮಾಡಿ ಪ್ರಜೆಗಳ ಮುಂದಿಡಲಾಯಿತು. ಅವನು ಅಸಮರ್ಥ, ಬುದ್ಧಿಹೀನ, ಅನನುಭವಿ ಎಂದೆಲ್ಲ ಜರೆಯಲಾಯಿತು.ಕೊನೆಗೆ ವಿರೋಧಿಗಳು ಆತನ ದೇಹದ ಊನಗಳನ್ನು ಎತ್ತಿ ಆಡಿಕೊಳ್ಳಲು ಶುರುಮಾಡಿದರು. ಲಿಂಕನ್ನ ಮುಖ ವಿಕಾರವಾಗಿದೆ, ಆತ ದೆವ್ವದಂತೆ ಕಾಣುತ್ತಾನೆ. ಆತ ಜಗತ್ತಿನ ಅತಿ ಕುರೂಪಿ ವ್ಯಕ್ತಿ ಎಂದೆಲ್ಲ ಪ್ರಚಾರ ಮಾಡಿದರು. ಪತ್ರಿಕೆಗಳು ಸಭ್ಯತೆಯ ಎಲ್ಲೆಯನ್ನೂ ಮೀರಿ ಆತನ ದೇಹ, ರೂಪಗಳನ್ನು ಗೇಲಿಮಾಡಿ ಬರೆದವು. ಫೋಟೋಗ್ರಫಿ ಅಷ್ಟೇನೂ ಚಾಲ್ತಿಗೆ ಬರದ ಸಮಯವಾದ್ದರಿಂದ ದೇಶದ ಬಹಳಷ್ಟು ಪ್ರಜೆಗಳು ಆತನ ಫೋಟೋ ನೋಡಿರಲಿಲ್ಲ; ಅವರಿಗೆ ಪತ್ರಿಕೆಗಳಲ್ಲಿ ಮತ್ತು ಪ್ರತಿಪಕ್ಷದವರ ಬಾಯಲ್ಲಿ ಬಂದ ವಿವರಣೆಗಳೇ ಮುಖ್ಯ ಆಕರವಾಗಿದ್ದವು. ಇವಕ್ಕೆಲ್ಲ ಒಂದುಕೊನೆ ಹಾಡೋಣ ಎಂದು ಸ್ವತಃ ಲಿಂಕನ್‌, ಮ್ಯಾಥ್ಯೂ

Advertisement

ಬ್ರ್ಯಾಡಿ ಎಂಬ ಫೋಟೋಗ್ರಾಫ‌ರನ ಬಳಿ ಹೋಗಿ ಫೋಟೋ ತೆಗೆಸಿಕೊಂಡ. ಆದರೆ ಬ್ರ್ಯಾಡಿ, ಇದ್ದದ್ದನ್ನು ಇದ್ದಂತೆ ಸೆರೆಹಿಡಿಯುವ ಬದಲು, ಆ ಫೋಟೋದಲ್ಲಿ ತನ್ನಕೈಚಳಕ ತೋರಿಸಿದ! ಲಿಂಕನ್ನ ಮುಖ ಕಡಿಮೆಕಳಾಹೀನವಾಗುವಂತೆ ಮಾಡಿದ. ಮುಖದ ರೇಖೆಗಳನ್ನುಕೆತ್ತಿ (ಅರ್ಥಾತ್‌ ಅಳಿಸಿ, ಬರೆದು, ತೀಡಿ) ಸರಿಮಾಡಿದ! ಲಿಂಕನ್ನ ಉದ್ದುದ್ದದ ಕೈಬೆರಳುಗಳು ಮಡಚಿರುವಂತೆ ತೋರಿಸಿದ. ಅವನಕೊಕ್ಕರೆ ಕೊರಳುಕಾಣದಂತೆ ತಾನೇ ಒಂದು ದೊಡ್ಡ ಕಾಲರ್‌ ಸೇರಿಸಿದ.

ಒಳಸೇರಿದ್ದ ಅವನಕೆನ್ನೆಗಳನ್ನುಕೊಂಚ ಉಬ್ಬಿಸಿದ. ಒಟ್ಟಾರೆಯಾಗಿ, ಲಿಂಕನ್ನ ಫೋಟೋ ನೋಡಿದವರು ಪರವಾಗಿಲ್ಲ, ಜನ ಹೇಳುವಷ್ಟೇನೂ ಈತಕುರೂಪಿಯಲ್ಲ ಎಂಬ ಅಭಿಪ್ರಾಯ ತಾಳುವಂತೆ ಮಾಡುವಲ್ಲಿ ಬ್ರ್ಯಾಡಿ ಯಶಸ್ವಿಯಾದ! ಲಿಂಕನ್‌ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾಗ, ಒಮ್ಮೆ ಒಬ್ಬ ವ್ಯಕ್ತಿ ಆತನ ತೀರ ಹತ್ತಿರ ಬಂದು ತನ್ನ ರಿವಾಲ್ವರನ್ನು ಚಕ್ಕನೆ ತೆಗೆದು ಲಿಂಕನ್ನ ಹಣೆಗೆ ಇಟ್ಟುಬಿಟ್ಟನಂತೆ! ಬೆವರಿಳಿಯುವ ಸನ್ನಿವೇಶವಾದರೂ ಲಿಂಕನ್‌ ತಡವರಿಸದೆ- ಏನು ವಿಷಯ? ಯಾಕೆ ನನಗೆ ಗುರಿ ಇಟ್ಟಿದ್ದೀಯ? ಎಂದು ಕೇಳಿದನಂತೆ.

ರಿವಾಲ್ವರ್‌ ಹಿಡಿದಾತ- ನನಗಿಂತಲೂ ಕುರೂಪಿಗಳಾದವರನ್ನುಕೂಡಲೇ ಗುಂಡಿಟ್ಟುಕೊಲ್ಲಬೇಕು ಅಂತ ಪ್ರತಿಜ್ಞೆ ಮಾಡಿದ್ದೇನೆ.ಆಕಾರಣಕ್ಕೇ ಈಗ ನಿನ್ನನ್ನು ಮುಗಿಸಬೇಕು ಅಂತ ಬಂದಿದ್ದೇನೆ ಎಂದು ಉತ್ತರಿಸಿದ. ಈ ಮಾತುಕೇಳುತ್ತಿದ್ದಂತೆಯೇ ಲಿಂಕನ್ನ ನೆರಿಗೆಗಟ್ಟಿದ್ದ ಹಣೆ ಸಡಿಲವಾಯಿತು. ಉಸಿರಾಟ ಸಹಜಸ್ಥಿತಿಗೆ ಬಂತು. ನಿಂತಿದ್ದ ಗುಂಡಿಗೆ ಚಲಿಸಿತು. ಮುಖದಲ್ಲಿ ನಿರಾಳತೆಕಾಣಿಸಿತು. ಲಿಂಕನ್‌ ಉತ್ತರಿಸಿದ: ನಾನು ನಿನಗಿಂತಕುರೂಪಿಯಾಗಿದ್ದರೆ ಖಂಡಿತ ಬದುಕಿರಲು ಇಷ್ಟಪಡುವುದಿಲ್ಲ. ನೀನು ನನ್ನನ್ನು ಈಗಲೇ ಗುಂಡು ಹೊಡೆದು ಉರುಳಿಸಬಹುದು! ಲಿಂಕನ್‌ ದೇಶವನ್ನು ಗೆದ್ದುದು ತನ್ನ ರೂಪದಿಂದಲ್ಲ; ಇಂಥ ಜಾಣ ಮಾತುಗಳಿಂದಲೇ ! ­

 

Advertisement

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next