Advertisement
ಸೋಲು ಹೇಗೆ ಅಂತಿಮವಲ್ಲವೋ ಹಾಗೆಯೇ ಗೆಲುವು ಶಾಶ್ವತವೂ ಅಲ್ಲ. “ಸೋಲೇ ಗೆಲುವಿನ ಸೋಪಾನ’. ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬದುಕಿನಲ್ಲಿ ಸೋತಾಗ ಮಾತ್ರ ನಾವು ಎಲ್ಲಿ ಎಡವಿದ್ದೇವೆ ಎನ್ನುವುದನ್ನು ತಿಳಿ ಯಲು ಸಾಧ್ಯ. ಹಾಗೆಯೇ ಯಶಸ್ಸಿನ ಶಿಖರವೇರಿದಾಗ ಅದರ ಹಿಂದಿನ ಪರಿ ಶ್ರಮದ ನೈಜ ಬೆಲೆಯನ್ನು ಅರಿಯಲು ಸಾಧ್ಯ. ಅಷ್ಟು ಮಾತ್ರವಲ್ಲದೆ ಶಿಖರ ಏರಿದ ಬಳಿಕ ಇಳಿಯಲೇಬೇಕು ಎಂಬುದು ಕೂಡ ಅಷ್ಟೇ ವಾಸ್ತವ..
Related Articles
Advertisement
ಸೋತು ಗೆದ್ದ ವ್ಯಕ್ತಿಗಳೆಲ್ಲರೂ ಪ್ರತಿಯೊಂದು ಸೋಲಿನಲ್ಲಿಯೂ ಹೊಸ ಹೊಸ ಅವಕಾಶಗಳನ್ನು ಕಂಡುಕೊಂಡ ವರು. “ಆಗುವುದೆಲ್ಲ ಒಳ್ಳೆಯದಕ್ಕೆ’ ಎನ್ನುವುದನ್ನು ಸದಾ ಸ್ಮರಿಸುತ್ತಿರಬೇಕು. ಎ.ಪಿ.ಜೆ. ಅಬ್ದುಲ್ ಕಲಾಂ ಪೈಲಟ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗದೇ ಇದ್ದಿದ್ದರೆ ನಮ್ಮ ದೇಶಕ್ಕೆ ಪ್ರಸಿದ್ಧ ವಿಜ್ಞಾನಿಯೊಬ್ಬರು ದೊರಕುತ್ತಿರಲಿಲ್ಲ. ಹೆಸರಾಂತ ಕವಿ ಡಿ.ವಿ. ಗುಂಡಪ್ಪನವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗಲಿಲ್ಲ. ಆದರೂ ಅವರು ಸೋಲೊಪ್ಪಿಕೊಳ್ಳದೆ “ಮಂಕುತಿಮ್ಮನ ಕಗ್ಗ’ ಎನ್ನುವ ಕೃತಿ ಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದರು. ಪ್ರಸಿದ್ಧ ಸಿತಾರ್ ವಾದಕ ರವಿಶಂಕರ್ ನಾಟ್ಯ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿ ಸಿತಾರ್ ಕಲಿತರು. ಈಗ “ಸಿತಾರ್ ಎಂದರೆ ರವಿಶಂಕರ್, ರವಿಶಂಕರ್ ಎಂದರೆ ಸಿತಾರ್’ ಎನ್ನುವಷ್ಟರಮಟ್ಟಿಗೆ ಅವರು ಬೆಳೆದು ನಿಂತಿ¨ªಾರೆ. ಅಪ್ಪನಿಂದ ಅನಿಷ್ಟ ಎಂದು ಕರೆಸಿಕೊಂಡರೂ 2009ರಲ್ಲಿ ಮಿಸ್ ಇಂಡಿಯಾ ಆಗಿ ಆಯ್ಕೆಯಾದ ಪೂಜಾ ಚೋಪ್ರಾ, ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡರು ನಾಟ್ಯರಾಣಿ ಎಂದು ಗುರುತಿಸಿಕೊಂಡಿರುವ ಸುಧಾ ಚಂದ್ರನ್ ಇವರಂತೆಯೇ ಬದುಕಿನಲ್ಲಿ ಯಶಸ್ವಿ ವ್ಯಕ್ತಿಗಳಾದಂತಹ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸೋಲನ್ನು ಅನುಭವಿಸಿದವರೇ.
लहरों से डरकर नौका पार नहीं होती,कोशिश करने वालों की कभी हार नहीं होती ಎನ್ನುವ ಸಾಲುಗಳು ಪ್ರಯತ್ನದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಕಾಲು ಒದ್ದೆ ಮಾಡದೆ ಸಮುದ್ರವನ್ನು ದಾಟಬಹುದು ಆದರೆ ಕಣ್ಣು ಒದ್ದೆ ಮಾಡದೆ ಜೀವನವೆಂಬ ಸಮುದ್ರವನ್ನು ದಾಟಲು ಸಾಧ್ಯವಿಲ್ಲ. ಜೀವನದಲ್ಲಿ ಕಷ್ಟಗಳಿರುವುದು ಸರ್ವೇಸಾಮಾನ್ಯ ಪ್ರತಿಯೊಬ್ಬ ಯಶಸ್ವೀ ವ್ಯಕ್ತಿಯೂ ಕೂಡ ಸಮಾಜ ಅವರ ಮೇಲೆ ಎಸೆದ ಕಲ್ಲುಗಳಿಂದಲೇ ಬದುಕಿನ ತಳಪಾಯ ವನ್ನು ಕಟ್ಟಿಕೊಂಡವರು. ಅದರ ಮೇಲೆ ಭವ್ಯವಾದ ಕಟ್ಟಡ ನಿರ್ಮಿಸಿಕೊಂಡವರು. ತಮಗೆ ಎದುರಾದ ಎಲ್ಲ ಋಣಾತ್ಮಕ ಸನ್ನಿವೇಶಗಳನ್ನು ಧನಾತ್ಮಕವಾಗಿ ಬದ ಲಾಯಿಸಿಕೊಂಡವರು. ಆದ್ದರಿಂದ ಸೋಲಿಗೆ ಹೆದರದೆ ಬದುಕಿನ ಭವ್ಯವಾದ ಕಟ್ಟಡವನ್ನು ಸೋಲು-ಗೆಲುವು ಎನ್ನುವ ಇಟ್ಟಿಗೆಗಳಿಂದ ಸುಂದರವಾಗಿ ಕಟ್ಟಿ ಯಶಸ್ವಿ ವ್ಯಕ್ತಿಗಳು ನಾವಾಗೋಣ. - ವಾಣಿಶ್ರೀ, ಕಾರ್ಕಳ