Advertisement

ವಚನಗಳಲ್ಲಿವೆ ಜೀವನ ಸಾರ್ಥಕ ಮೌಲ್ಯ

05:23 PM Jan 06, 2022 | Shwetha M |

ವಿಜಯಪುರ: ಜೀವ ಜಗತ್ತಿನಲ್ಲಿ ಮೌಲ್ಯಯುತ ಸಾರ್ಥಕತೆಯ ಬದುಕು ನಮ್ಮ ಜೀವನದಲ್ಲಿ ರೂಢಿಯಾದಾಗ ಶರಣರ ಆಶಯಕ್ಕೆ ಮೆರಗು ಬರುತ್ತದೆ ಮತ್ತು ಸಂಸ್ಕಾರ, ಸಂಸ್ಕೃತಿಯ ತಿರುಳು ಅರಿವು ನಮಗೆ ನೀಡಿದವರೇ 12ನೇ ಶತಮಾನದ ಶರಣರು ಎಂದು ಬಸವೇಶ್ವರ ವಾಣಿಜ್ಯ ಮತ್ತು ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಬಿ.ಬಿ. ಶಿರಾಡೋಣ ಹೇಳಿದರು.

Advertisement

ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌, ಯುವ ವೇದಿಕೆ ಹಾಗೂ ಸೆಂಟ್‌ ಜೋಸೆಫ್‌ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣರ ವಚನದಲ್ಲಿ ವಿಚಾರಶೀಲತೆ, ಕ್ರೀಯಾಶೀಲತೆ, ಗಟ್ಟಿತನವಿದೆ ಎಂದರು.

ವಚನಗಳ ಮೂಲಕ ಸಾರ್ಥಕ ಬದುಕಿನ ನೈಜತೆಯ ಸೊಗಡು ಕಟ್ಟಿ ಕೊಟ್ಟವರು ನಮ್ಮ ಶರಣರು. ವೈಚಾರಿಕ ಚಿಂತನೆ- ಪರಂಪರೆ ಕಾಲ್ಪನಿಕ ಜಗತ್ತಿನಿಂದ ಹೊರ ಬಂದು ನಡೆಯುವಂತೆ ಮಾಡಿದವರೇ ಶರಣರು. ಮಾದರಿ ಬದುಕು , ನುಡಿದಂತೆ ನಡೆದವರೇ ಶರಣರು. ನಾವು ನೀವೆಲ್ಲರು ವಚನವನ್ನು ಪಚನ ಮಾಡಿಕೊಂಡು ಆಡಂಬರದ ಜೀವನದಿಂದ ಹೊರ ಬಂದು ಮುನ್ನಡೆಯಬೇಕಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಸಂಗಮೇಶ ಚೂರಿ, ಪ್ರಸ್ತುತ ಸಂದರ್ಭದಲ್ಲಿ ಯುವಕರು ಶರಣರ ತತ್ವದ ಹಾದಿ ಅನುಸರಿಸುವುದು ಹೆಚ್ಚು ಅಗತ್ತವಾಗಿದೆ. ಪ್ರತಿಯೊಬ್ಬರಲ್ಲೂ ಅವರದೇ ವಿಶಿಷ್ಟ ಕಲೆ-ಪ್ರತಿಭೆ ಇದ್ದೇ ಇರುತ್ತದೆ. ಆದರೆ ಕೀಳರಿಮೆಯಿಂದ ಹೊರ ಬಂದು ಉನ್ನತ ಜೀವನ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಪ್ರಾಚಾರ್ಯ ಶಾಜು ಜೋಸೆಫ್‌ ಮಾತನಾಡಿ, ಸಮಾಜದಲ್ಲಿ ಪದೆ ಪದೆ ಶರಣರ ವಚನಗಳ ವೈಚಾರಿಕತೆ ಕುರಿತು ಚರ್ಚಾಗೋಷ್ಠಿ, ಚಿಂತನೆ, ಭಾಷಣ, ಉಪನ್ಯಾಸ, ವಿಮರ್ಶೆಯಂಥ ಕಾರ್ಯಕ್ರಮಗಳು ನಡೆಯಬೇಕು. ಇದರಿಂದ ಶರಣರು ಕಂಡ ವಾಸ್ತವಿಕ ನೆಲೆಯ ಜೀವನ ದರ್ಶನವಾಗುತ್ತೆ. ಒತ್ತಡದ ಜೀವನ ಶೈಲಿಯ ಇಂದಿನ ಯುವ ಪೀಳಿಗೆಗೆ ವಚನಗಳು ದಾರಿದೀಪ ಎಂದರು.

Advertisement

ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕ ಮಾತನಾಡಿದರು. ದತ್ತಿ ದಾಸೋಹಿಗಳಾದ ಶಿವಯೋಗಿ ನಾಡಗೌಡ, ಜಿಲ್ಲಾ ಯುವ ಶರಣ ಸಾಹಿತ್ಯ ವೇದಿಕೆ ಸಂಚಾಲಕ ಅಮರೇಶ ಸಾಲಕ್ಕಿ ಇದ್ದರು. ಸಿದ್ದಲಿಂಗ ಹದಿಮೂರು, ಶೆ„ಲಜಾ ನಾಡಗೌಡ, ಬಸವರಾಜ ಇಂಚಗೇರಿ, ಕಿರಣ ಭಟ್‌, ಜಯತೀರ್ಥ್ ಪಂಡರಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿಧಿ  ಮತ್ತು ರಂಜಿತಾ ಪ್ರಾರ್ಥಿಸಿದರು. ಆನಂದ ಬಿರಾದಾರ ನಿರೂಪಿಸಿದರು. ಸಂತೋ‚ಕುಮಾರ ನಿಗಡಿ ಸ್ವಾಗತಿಸಿದರು. ಬೀರು ಗಾಡವೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next