ಟೆಂಪಲ್ ರನ್ ಆಟ ನೆನಪಿದೆಯಲ್ಲ? ಒಬ್ಬ ವ್ಯಕ್ತಿ ಓಡುತ್ತಿರುತ್ತಾನೆ. ಆಗ ಅವನಿಗೆ ಕಲ್ಲು ಎದುರಾಗುತ್ತದೆ, ಪ್ರಪಾತ ಎದುರಾಗುತ್ತದೆ, ಹೀಗೆ ಅನೇಕ ರೀತಿಯ ಸವಾಲುಗಳು ಎದುರಾಗುತ್ತದೆ. ಸ್ವಲ್ಪ ಎಡವಿದರೂ ರಾಕ್ಷಸ ಅಟ್ಟಿಸಿಕೊಂಡು ಬರುತ್ತಾನೆ. ಅವನಿಂದ ತಪ್ಪಿಸಿಕೊಂಡು ಓಡಬೇಕು. ಓಡುವ ನಡುವಲ್ಲಿ ನಾಣ್ಯಗಳು ಸಿಗುತ್ತದೆ. ಓಡುತ್ತಾ ಓಡುತ್ತಾ ಹೋದಂತೆ ದಾರಿ ಕಷ್ಟಕರವಾಗುತ್ತಾ ಹೋಗುತ್ತದೆ. ಆದರೆ ಕೊನೆಯವರೆಗೆ ತಲುಪಿದ ಆತನಿಗೆ ಕೊನೆಯಲ್ಲಿ ವಜ್ರ ಸಿಗುತ್ತದೆ.
ಜೀವನವು ಟೆಂಪಲ್ ರನ್ ಆಟದ ಹಾಗೆ. ಓಡುತ್ತಲೇ ಇರಬೇಕು ಎಡವಿದಾಗ ಎಚ್ಚೆತ್ತುಕೊಂಡು ಮುನ್ನುಗ್ಗಬೇಕು. ಕಷ್ಟಕ್ಕೆ ಹೆದರಿ ಭಯಪಟ್ಟು ಹಿಂದೆ ಸರಿದರೆ, ಗೆಲುವೆಂಬ ವಜ್ರವನ್ನು ನೋಡುವ ಅವಕಾಶವನ್ನೇ ಕಳೆದುಕೊಳ್ಳುತ್ತೇವೆ. ಕಷ್ಟ ಬಂದಾಗ ಹೆದರದೆ, ಅನುಭವಗಳನ್ನು ಸಂಗ್ರಹಿಸುತ್ತಾ, ನಾವು ಕಲಿಯುವುದು ಇನ್ನೂ ಇದೆ ಎಂದು ಮುಂದುವರಿಯೋಣ. ಆಗ ಮಾತ್ರ ಸಾಧನೆ ಎಂಬ ಶಿಖರವನ್ನು ಏರಲು ಸಾಧ್ಯ.
ಕಷ್ಟ ಎಂದುಕೊಂಡರೆ ಏನನ್ನು ಸಾಧಿಸಲು ಸಾಧ್ಯವಿಲ್ಲ, ಸಾಧಿಸಬೇಕು ಎಂಬ ಆಟ ಇದ್ದರೆ ಯಾವುದೂ ಕೂಡ ಕಷ್ಟ ಎಂದು ಅನಿಸುವುದಿಲ್ಲ. ಈಗ ನಾವು ಕೂಡ ಜೀವನವೆಂಬ ಟೆಂಪಲ್ ರನ್ ಆಟದಲ್ಲಿ ಓಡುತ್ತಿರುವ ಆಟಗಾರರು, ಗೆಲುವು ಎಂಬ ವಜ್ರವನ್ನು ಪಡೆಯಬೇಕಾದರೆ, ಕಲ್ಲು, ಮುಳ್ಳುಗಳೆಂಬ ಸವಾಲುಗಳ ಸೇತುವೆಯನ್ನು ದಾಟುತ್ತ ಮುಂದುವರಿಯಬೇಕು, ಆಗ ಮಾತ್ರ ಗೆಲುವು ಎಂಬ ವಜ್ರ ನಮ್ಮದಾಗುತ್ತದೆ.
-ನಿಖಿತಾ ಕಡೇಶಿವಾಲಯ
ಸರಕಾರಿ ಮಹಿಳಾ ಕಾಲೇಜು, ಪುತ್ತೂರು