Advertisement
ತಾಲೂಕಿನ ಮಲ್ಲದೇವನಹಳ್ಳಿಯಲ್ಲಿ ಸೋಮವಾರ ನೂತನವಾಗಿ ಆರಂಭವಾದ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು. ಮಲ್ಲದೇವನಹಳ್ಳಿ ಗಡಿ ಅಂಚಿನಲ್ಲಿರುವ ಕುಗ್ರಾಮ. ನಾಗವಳ್ಳಿ, ನಲ್ಲೂರು ಹಾಗು ಪುಟ್ಟನಪುರ ಗ್ರಾಮಕ್ಕೆ ಈ ಗ್ರಾಮ ಸುಮಾರು ನಾಲ್ಕು ಕಿ.ಮೀ.ಗೂ ಹೆಚ್ಚು ದೂರವಿದೆ. ಈ ಭಾಗದ ರೈತರು ಹಸು ಸಾಕಾಣಿಕೆ ಮಾಡಿ, ಹಾಲು ಕರೆದುಕೊಂಡು ಪ್ರತಿನಿತ್ಯ 2 ಅವಧಿಯಲ್ಲಿ ಅಕ್ಕಪಕ್ಕದ ಗ್ರಾಮಗಳ ಡೇರಿಗೆನೀಡಬೇಕಾಗಿತ್ತು. ಇದನ್ನರಿತು ಈ ಭಾಗದ ಮುಖಂಡರು, ಕುದೇರಿನಲ್ಲಿ ಚಾಮುಲ್ ಕಚೇರಿಗೆ ಭೇಟಿ ನೀಡಿ, ಡೇರಿ ಆರಂಭಿಸುವ ಬಗ್ಗೆ ಮಾಹಿತಿ ಪಡೆದುಕೊಂಡು ಒಗ್ಗಟ್ಟಿನಿಂದ ಗ್ರಾಮದಲ್ಲಿಯೇ ಡೇರಿ ಆರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
Related Articles
Advertisement
ಕಾರ್ಯಕ್ರಮದಲ್ಲಿ ಹೆಬ್ಬಸೂರು ಗ್ರಾಪಂ ಅಧ್ಯಕ್ಷ ಜಯಶಂಕರ್, ಚಾಮುಲ್ ಪ್ರಧಾನ ವ್ಯವಸ್ಥಾಪಕ ಕೆ.ರಾಜಕುಮಾರ್, ಸಹಾಯಕ ವ್ಯವಸ್ಥಾಪಕ ಡಾ.ಅಮರ್, ವಿಸ್ತರಣಾಧಿಕಾರಿಗಳಾದ ಶ್ಯಾಮ್‌ಸುಂದರ್, ನಾಗೇಶ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ನಲ್ಲೂರು ಮಹದೇವಪ್ಪ, ಗ್ರಾಪಂ ಸದಸ್ಯ ಕುಮಾರ್, ಶಿವಣ್ಣ, ರಾಜು, ಮುಖಂಡರಾದ ಹೆಬ್ಬಸೂರು ಮಹೇಶ್, ಸಂಘದ ನಿರ್ದೇಶಕರಾದ ಬಿ.ಮಹೇಶ್, ವಿಜಯಕುಮಾರ್, ಮಹ ದೇವ್, ಬಸವರಾಜು, ಸಿದ್ದರಾಜು, ನೂತನ, ಸುಂದರರಾಜ್, ವಸಂತ, ಸ್ವೆಲಾಮೇರಿ, ಮಾದಶೆಟ್ಟಿ, ಬಿ.ನಾಗರಾಜು, ಸೋಮು ಸುಂದರ್, ಡೇರಿ ಸಿಇಒ ಎಸ್.ರಂಗಸ್ವಾಮಿ, ಮಲ್ಲದೇವನಹಳ್ಳಿ ಗ್ರಾಮಸ್ಥರು ಇದ್ದರು.
ಖರೀದಿ ಮಾಡಲು ಒಕ್ಕೂಟ ಸಿದ್ಧವಿದೆ ಈ ಹಿಂದೆ ಹಾಲು ಒಕ್ಕೂಟ ಮೈಸೂರಿಗೆ ಸೇರ್ಪಡೆಯಾಗಿತ್ತು. ಈಗ ಪ್ರತ್ಯೇಕಗೊಂಡು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ಕುದೇರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿನಿತ್ಯ 2.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 58 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ. ಇನ್ನುಳಿದ ಹಾಲನ್ನು ಟೆಟ್ರಾ ಪ್ಯಾಕೆಟ್ ಯೂನಿಟ್ ಹಾಗೂ ನಂದಿನಿ ಸಿಹಿ ಉತ್ಪನ್ನಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಬಹಳ ವ್ಯವಸ್ಥಿತವಾಗಿ ಕುದೇರಿನಲ್ಲಿ ಘಟಕ
ನಿರ್ಮಾಣ ಮಾಡಲಾಗಿದೆ. ಉತ್ಪಾದಕರು ಎಷ್ಟೇ ಪ್ರಮಾಣದಲ್ಲಿ ಹಾಲು ನೀಡಿದರೂ ಖರೀದಿ ಮಾಡಲು ಒಕ್ಕೂಟ ಸಿದ್ಧವಿದೆ ಎಂದು ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರಮೂರ್ತಿ ತಿಳಿಸಿದರು.